ETV Bharat / bharat

ಉತ್ತರಾಖಂಡ ಬಿಜೆಪಿ ಮುಖಂಡನಿಗೆ ಶಿರಚ್ಛೇದ ಬೆದರಿಕೆ, ನಟಿ ಸ್ವರ ಭಾಸ್ಕರ್​ಗೂ ಪತ್ರ

author img

By

Published : Jun 29, 2022, 7:00 PM IST

Updated : Jun 29, 2022, 8:05 PM IST

ಉತ್ತರಾಖಂಡದ ರೂರ್ಕಿಯ ಬಿಜೆಪಿ ಮುಖಂಡ ಗೌರವ್​ ತ್ಯಾಗಿ ಎಂಬುವವರು ನೂಪುರ್​ ಶರ್ಮಾ ಪರ ಪೋಸ್ಟ್​ ಹಾಕಿದ್ದಕ್ಕೆ ದುಷ್ಕರ್ಮಿಗಳು ಜೀವ ಬೆದರಿಕೆ ಹಾಕಿದ್ದಾರೆ. ಸಾವರ್ಕರ್​ ನಿಂದಿಸಿದ್ದಕ್ಕೆ ನಟಿ ಸ್ವರ ಭಾಸ್ಕರ್​ಗೂ ಬೆದರಿಕೆ ಪತ್ರ ರವಾನಿಸಲಾಗಿದೆ.

ಉತ್ತರಾಖಂಡ ಬಿಜೆಪಿ ಮುಖಂಡನಿಗೆ ಶಿರಚ್ಛೇದ ಬೆದರಿಕೆ, ನಟಿ ಸ್ವರಾ ಭಾಸ್ಕರ್​ಗೂ ಪತ್ರ
ಉತ್ತರಾಖಂಡ ಬಿಜೆಪಿ ಮುಖಂಡನಿಗೆ ಶಿರಚ್ಛೇದ ಬೆದರಿಕೆ, ನಟಿ ಸ್ವರಾ ಭಾಸ್ಕರ್​ಗೂ ಪತ್ರ

ರೂರ್ಕಿ(ಉತ್ತರಾಖಂಡ): ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪರವಾಗಿ ಪೋಸ್ಟ್ ಹಾಕಿದ್ದಕ್ಕಾಗಿ ರಾಜಸ್ಥಾನದಲ್ಲಿ ಹಿಂದು ವ್ಯಕ್ತಿಯ ಶಿರಚ್ಛೇದಿಸಿದ ಆತಂಕಕಾರಿ ಘಟನೆ ನಡುವೆಯೇ ಉತ್ತರಾಖಂಡದ ಬಿಜೆಪಿ ನಾಯಕನಿಗೂ ಶಿರಚ್ಛೇದದ ಬೆದರಿಕೆ ಹಾಕಲಾಗಿದೆ. ಇನ್ನೊಂದೆಡೆ ವೀರ ಸಾವರ್ಕರ್​ ಅವರನ್ನು ನಿಂದಿಸಿದ ಆರೋಪದ ಮೇಲೆ ನಟಿ ಸ್ವರ ಭಾಸ್ಕರ್​ಗೆ ಜೀವ ಬೆದರಿಕೆ ಹಾಕಿದ ಪತ್ರವನ್ನು ನಟಿಯ ಮನೆಗೆ ಕಳುಹಿಸಲಾಗಿದೆ. ಈ ಬಗ್ಗೆ ದೂರು ದಾಖಲಾಗಿದೆ.

ಉತ್ತರಾಖಂಡದ ರೂರ್ಕಿಯ ಬಿಜೆಪಿ ಮುಖಂಡ ಗೌರವ್ ತ್ಯಾಗಿ ಎಂಬುವವರು ಕೆಲವು ದಿನಗಳ ಹಿಂದೆ ನೂಪುರ್ ಶರ್ಮಾ ಪರವಾಗಿ ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿದ್ದರು. ಆ ಬಳಿಕ ಕೆಲ ಸಮಾಜಘಾತುಕರಿಂದ ನಿರಂತರ ಕೊಲೆ ಹಾಗೂ ಶಿರಚ್ಛೇದ ಮಾಡುವ ಬೆದರಿಕೆ ಕರೆಗಳು ಬರುತ್ತಿವೆಯಂತೆ.

ಪಾಕಿಸ್ತಾನ, ಸೌದಿ ಅರೇಬಿಯಾ, ಜಿಂಬಾಬ್ವೆ, ರಾಜಸ್ಥಾನ, ಮಹಾರಾಷ್ಟ್ರಗಳಿಂದ ಕರೆ ಬರುತ್ತಿದೆ. ರಾಜಸ್ಥಾನ ಘಟನೆಯ ಬಳಿಕ ತಾವು ಆತಂಕಕ್ಕೆ ಒಳಗಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಗೌರವ್​ ತ್ಯಾಗಿ ದೂರಿನಲ್ಲಿ ಕೋರಿದ್ದಾರೆ.

ಸಾವರ್ಕರ್​ ನಿಂದನೆ, ನಟಿ ಸ್ವರಾಗೆ ಬೆದರಿಕೆ ಪತ್ರ: ಇನ್ನೊಂದೆಡೆ ಬಾಲಿವುಡ್​ ನಟಿ ಸ್ವರ ಭಾಸ್ಕರ್​ಗೆ ಸಾವರ್ಕರ್​ ನಿಂದನೆ ಮಾಡಿದ ಆರೋಪದಡಿ ಜೀವ ಬೆದರಿಕೆ ಪತ್ರ ರವಾನಿಸಲಾಗಿದೆ. ಈ ಬಗ್ಗೆ ನಟಿ ದೂರು ನೀಡಿದ್ದು, ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹಿಂದಿಯಲ್ಲಿ ಬರೆಯಲಾಗಿರುವ ಪತ್ರದಲ್ಲಿ 'ವೀರ ಸಾವರ್ಕರ್​ ಅವರಿಗೆ ಮಾಡಲಾದ ಅವಮಾನವನ್ನು ದೇಶದ ಯುವಕರು ಸಹಿಸುವುದಿಲ್ಲ'. ಇದರ ಪರಿಣಾಮ ಎದುರಿಸಲಿದ್ದೀರಿ ಎಂದು ಬೆದರಿಕೆ ಹಾಕಲಾಗಿದೆ. ವರ್ಸೊವಾದಲ್ಲಿರುವ ನಟಿಯ ನಿವಾಸಕ್ಕೆ ಪತ್ರವನ್ನು ರವಾನಿಸಲಾಗಿದೆ.

ಈ ಬಗ್ಗೆ ನಟಿ ಸ್ವರ ಭಾಸ್ಕರ್ 2 ದಿನಗಳ ಹಿಂದೆ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಇದನ್ನೂ ಓದಿ: ರಾಜಸ್ಥಾನ ಹಿಂದು ವ್ಯಕ್ತಿ ಹತ್ಯೆಗೆ ಪಾಕಿಸ್ತಾನ ನಂಟು.. 45 ದಿನ ತರಬೇತಿ ಪಡೆದಿದ್ದನಂತೆ ಹಂತಕ

Last Updated : Jun 29, 2022, 8:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.