ETV Bharat / bharat

ಸೊಳ್ಳೆ ಪರದೆಯೊಳಗೆ ಮಲಗಿ ಸಂಸತ್​ ಪ್ರವೇಶ ದ್ವಾರದ ಮುಂದೆ ಸಂಸದರ ಪ್ರತಿಭಟನೆ

author img

By

Published : Jul 29, 2022, 10:27 AM IST

ಸಂಸತ್ತಿನ ಮುಂಗಾರು ಅಧಿವೇಶನದಿಂದ ಅಮಾನತುಗೊಂಡ ಸಂಸದರು ಭಾರಿ ಮಳೆ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಸಂಸತ್ತಿನ ಪ್ರವೇಶ ದ್ವಾರದ ಮುಂಭಾಗ ಅಹೋರಾತ್ರಿ ಧರಣಿ ನಡೆಸಿದರು.

Protest
ಪ್ರತಿಭಟನೆ

ನವದೆಹಲಿ: ಸದನದೊಳಗೆ ಪ್ರತಿಭಟನೆ ನಡೆಸಿ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ 24 ಕ್ಕೂ ಹೆಚ್ಚು ಸಂಸದರನ್ನು ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ. ಅಮಾನತು ಕ್ರಮ ವಿರೋಧಿಸಿ 50 ಗಂಟೆಗಳ ಪ್ರತಿಭಟನೆ ಕೈಗೊಂಡಿರುವ ಸಂಸದರು ಸಂಸತ್ತಿನ ಪ್ರವೇಶ ದ್ವಾರದ ಮುಂಭಾಗ ಧರಣಿ ಮುಂದುವರೆಸಿದ್ದಾರೆ.

ಮೊದಲನೇ ದಿನ ಸಂಸತ್ತಿನ ಗಾಂಧಿ ಪ್ರತಿಮೆ ಬಳಿ ಆಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಆದ್ರೆ ಎರಡನೇ ದಿನವಾದ ನಿನ್ನೆ ಭಾರಿ ಮಳೆಯಿಂದಾಗಿ ಸಂಸತ್​ ಪ್ರವೇಶ ದ್ವಾರದ ಬಳಿ ಧರಣಿ ನಡೆಸಿದರು. ಕೆಲ ಸಂಸದರು ಸಾಮಾಜಿಕ ಜಾಲತಾಣದಲ್ಲಿ ರಾತ್ರಿ ಸೂರಿಲ್ಲದೆ ನೆಲದ ಮೇಲೆ ಸೊಳ್ಳೆ ಪರದೆಯೊಳಗೆ ನಿದ್ರಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  • Due to heavy rain,50hr dharna has moved from Gandhi statue to #Parliament main entrance

    29hrs down. 21hrs to go. Oppn MPs still at Dharna demanding Govt to revoke suspension of (now) 27 MPs & discuss #PriceRise #GST@SanjayAzadSln sings his version of a golden hit.Enjoy video! pic.twitter.com/wWejot3rKO

    — Derek O'Brien | ডেরেক ও'ব্রায়েন (@derekobrienmp) July 28, 2022 " class="align-text-top noRightClick twitterSection" data=" ">

ತೃಣಮೂಲ ಸಂಸದ ಡೆರೆಕ್ ಒ ಬ್ರೇನ್ ಮಧ್ಯರಾತ್ರಿ 1 ಗಂಟೆಗೆ ಟ್ವೀಟ್‌ ಮಾಡಿ, ಜಿಎಸ್​ಟಿ, ಬೆಲೆ ಏರಿಕೆ ಕುರಿತು ಚರ್ಚೆ ಮಾಡಿದ್ದಕ್ಕಾಗಿ 27 ಸಂಸದರನ್ನು ಅಮಾನತು ಮಾಡಲಾಗಿದೆ. ಕೂಡಲೇ ಅಮಾನತು ಆದೇಶ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ಪ್ರಧಾನಿ ಮೋದಿಯವರು 2014 ರಲ್ಲಿ ಸಂಸತ್ತಿಗೆ ಆಗಮಿಸಿದಾಗ ನೀಡಿದ ಭರವಸೆಯನ್ನು ಪ್ರತಿಭಟನಾಕಾರರು ನೆನಪಿಸಲು ಪ್ರಯತ್ನಿಸಿದ್ದರು ಎಂದಿದ್ದಾರೆ. ಜೊತೆಗೆ ರಾಜ್ಯಸಭಾ ಸದಸ್ಯ ಸಂಜಯ್‌ಸಿಂಗ್ ರಾತ್ರಿ ವೇಳೆ ಹೇಳಿದ ಹಾಡೊಂದನ್ನು ಶೇರ್​ ಮಾಡಿದ್ದಾರೆ.

ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್, ತೃಣಮೂಲ ಕಾಂಗ್ರೆಸ್ ನಾಯಕರಾದ ಸಂತಾನು ಸೇನ್, ಡೋಲಾ ಸೇನ್, ಅಬಿರ್ ರಂಜನ್ ಬಿಸ್ವಾಸ್ ಮತ್ತು ಡೆರೆಕ್ ಒ ಬ್ರೇನ್ ಮತ್ತು ಟಿಆರ್‌ಎಸ್‌ನ ರವಿಚಂದ್ರ ವಡ್ಡಿರಾಜು ಅವರು ಸಂಸತ್ತಿನ ಹೊರಗೆ ರಾತ್ರಿ ಕಳೆದರು. ಡಿಎಂಕೆ ಮತ್ತು ಎಡಪಕ್ಷಗಳ ಕೆಲವು ನಾಯಕರು ಸಹ ಉಪಸ್ಥಿತರಿದ್ದರು.

ನಿನ್ನೆ ಸಂಸದರಿಗೆ ಡಿಎಂಕೆ ಪಕ್ಷ ಇಡ್ಲಿ ನೀಡಿದರೆ, ತೃಣಮೂಲ ಅವರಿಗೆ ಫಿಶ್ ಫ್ರೈ ಮತ್ತು ತಂದೂರಿ ಚಿಕನ್ ಅನ್ನ ಬಡಿಸಿತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ಗಾಂಧಿ ಪ್ರತಿಮೆ ಎದುರು ಮಾಂಸಾಹಾರ ನೀಡಿರುವ ಕ್ರಮವನ್ನ ವಿರೋಧಿಸಿದರು.

ಇದನ್ನೂ ಓದಿ: ಅಮಾನತುಗೊಂಡ ಸಂಸದರ ಧರಣಿ: ಆರೋಗ್ಯ ಸಚಿವರಿಗೆ 'ಸಂಸತ್ತಿನ ಸೊಳ್ಳೆ ಕಥೆ' ಹೇಳಿದ ಟ್ಯಾಗೋರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.