ETV Bharat / bharat

ದಾವೂದ್​ ಜೊತೆ ನಂಟು ಹೊಂದಿದ್ದ ಕ್ರಿಮಿನಲ್ ರಾಹುಲ್​ ಭಾಟಿಯಾ ಅರೆಸ್ಟ್​

author img

By

Published : Sep 27, 2022, 7:18 PM IST

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನಂಟು ಹೊಂದಿದ್ದಲ್ಲದೇ, ಉದ್ಯಮಿಗಳ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ರಾಹುಲ್​ ಭಾಟಿಯಾನನ್ನು ಮುಂಬೈ ಪೊಲೀಸರು ಇಂದು ಹೆಡೆಮುರಿ ಕಟ್ಟಿದ್ದಾರೆ.

davood-ibrahim-close-aide-rahul-bhatia-arrest
ಮಿನಲ್ ರಾಹುಲ್​ ಭಾಟಿಯಾ ಅರೆಸ್ಟ್​

ಮುಂಬೈ, ಮಹಾರಾಷ್ಟ್ರ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನಂಟು ಹೊಂದಿದ್ದ ಆರೋಪದ ಮೇಲೆ ಉದ್ಯಮಿ, ಕ್ರಿಮಿನಲ್​ ರಾಹುಲ್​​ ಭಾಟಿಯಾನನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ರಾಹುಲ್​​​ ಸುಲಿಗೆ ಪ್ರಕರಣದಲ್ಲೂ ಪೊಲೀಸರಿಗೆ ಬೇಕಾಗಿದ್ದು, ಹಲವು ದಿನಗಳಿಂದ ಹುಡುಕಾಟ ನಡೆಸಲಾಗಿತ್ತು. ಇಂದು ಭೂಗತ ಪಾತಕಿ ಪೊಲೀಸರ ಕೈ ವಶ ಆಗಿದ್ದಾನೆ.

ವರ್ಸೋವಾದ ಉದ್ಯಮಿಯೊಬ್ಬರನ್ನು ಬೆದರಿಸಿ ಅವರಿಂದ 30 ಲಕ್ಷ ರೂಪಾಯಿ ಮೌಲ್ಯದ ಕಾರು ಮತ್ತು 7.5 ಲಕ್ಷ ರೂಪಾಯಿ ಮೌಲ್ಯದ ನಗದು ಹಣಕ್ಕಾಗಿ ರಾಹುಲ್​​​ ಭಾಟಿಯಾ ಬೇಡಿಕೆಯಿಟ್ಟಿದ್ದ. ಅಲ್ದೇ, ಮೋಸ್ಟ್​ ವಾಂಟೆಡ್​ ಟೆರರ್​ ದಾವೂದ್ ಇಬ್ರಾಹಿಂನ ಆಪ್ತ ಸಹಾಯಕ ಛೋಟಾ ಶಕೀಲ್ ಮತ್ತು ಆತನ ಸಂಬಂಧಿ ಸಲೀಂ ಫ್ರೂಟ್ ಜೊತೆಗೂ ಈತ ನಂಟು ಬೆಳೆಸಿಕೊಂಡಿದ್ದ.

ಈತನ ವಿರುದ್ಧ ದಾಖಲಾದ ಎಫ್‌ಐಆರ್‌ನಲ್ಲೂ ಮೂವರ ಹೆಸರು ನಮೂದಿಸಲಾಗಿದೆ. ಈ ಹಿಂದೆ ಕೂಡ ಸುಲಿಗೆ, ಭೂಕಬಳಿಕೆ ಮತ್ತು ಗುಂಡಿನ ದಾಳಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ರಾಹುಲ್​​​ ಭಾಟಿಯಾ ಬಂಧನಕ್ಕೆ ಒಳಗಾಗಿದ್ದ.

ಇಂದು ದಾಳಿ ನಡೆಸಿದ ಮುಂಬೈ ಅಪರಾಧ ವಿಭಾಗದ ಸುಲಿಗೆ ವಿರೋಧಿ ಸೆಲ್ (ಎಇಸಿ) ಆರೋಪಿ ರಾಹುಲ್​​​ ಭಾಟಿಯನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ. ಟೆರರ್​​ ಸಪೋರ್ಟರ್​ ರಾಹುಲ್​​ 2015 ಮತ್ತು 2020 ರಲ್ಲಿ ನಕಲಿ ಪಾಸ್‌ಪೋರ್ಟ್‌ಗಳನ್ನು ಬಳಸಿಕೊಂಡು ದೇಶದಿಂದ ಪಲಾಯನ ಮಾಡಲು ಪ್ರಯತ್ನ ಕೂಡ ನಡೆಸಿದ್ದ.

ಓದಿ: ಎಸಿಪಿ ರೀನಾ ಸುವರ್ಣ ಹೆಸರು ಹೇಳಿ ಸುಲಿಗೆ: ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.