ETV Bharat / bharat

ಜಾರ್ಖಂಡ್​: ಸೈಬರ್​ ಕ್ರೈಂ ಆರೋಪಿ ಮೊಬೈಲ್​ನಲ್ಲಿ 6 ಲಕ್ಷ ಜನರ ಡೇಟಾ ಪತ್ತೆ

author img

By

Published : Mar 8, 2023, 9:58 PM IST

ಜಾರ್ಖಂಡ್​ನಲ್ಲಿ ಸೈಬರ್​ ಕ್ರೈಂ ಪ್ರಕರಣದಲ್ಲಿ ಬಂಧಿಸಿದ ಆರೋಪಿಯ ಮೊಬೈಲ್​ನಲ್ಲಿ ಸುಮಾರು ಆರು ಲಕ್ಷ ಜನರ ಡೇಟಾ ಪತ್ತೆಯಾಗಿದೆ.

data-of-6-lakh-people-in-mobile-of-cyber-criminal-arrested-from-giridih
ಜಾರ್ಖಂಡ್​: ಸೈಬರ್​ ಕ್ರೈಂ ಆರೋಪಿ ಮೊಬೈಲ್​ನಲ್ಲಿ 6 ಲಕ್ಷ ಜನರ ಡೇಟಾ ಪತ್ತೆ

ಗಿರಿದಿಹ್​ (ಜಾರ್ಖಂಡ್​): ಸೈಬರ್​ ವಂಚನೆ ಪ್ರಕರಣದಲ್ಲಿ ಬಂಧಿಸಿದ್ದ ಆರೋಪಿಯ ವಿಚಾರಣೆ ನಡೆಸಿದಾಗ ಮೊಬೈಲ್​​ನಲ್ಲಿ ಬರೋಬ್ಬರಿ 6 ಲಕ್ಷ ಮಂದಿಯ ಡೇಟಾ ಪತ್ತೆಯಾಗಿರುವ ಘಟನೆ ಜಾರ್ಖಂಡ್​ನ ಗಿರಿದಿಹ್​ ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿ ನಿಖಿಲ್​ ಮೊಬೈಲ್​ನಲ್ಲಿ ಸುಮಾರು ಆರು ಲಕ್ಷ ಫೋನ್​ ಸಂಖ್ಯೆಗಳು, ಹೆಸರು, ಬ್ಯಾಂಕ್ ಖಾತೆ ಸಂಖ್ಯೆಗಳು ಮತ್ತು ವಿವಿಧ ಜನರ ವಾರ್ಷಿಕ ವೇತನಗಳ ವಿವರ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಸೈಬರ್​ ವಂಚನೆ ಪ್ರಕರಣದಲ್ಲಿ ಆರೋಪಿ ನಿಖಿಲ್​ ಮತ್ತು ಆತನ ಸಹಚರ ಝಾಕಿರ್​ ಅನ್ಸಾರಿಯನ್ನು ಬಂಧಿಸಲಾಗಿದ್ದು. ಬಂಧಿತರಿಂದ ನಾಲ್ಕು ಮೊಬೈಲ್​, 60 ಸಾವಿರ ನಗದು, ಒಂದು ಎಟಿಎಂ ಕಾರ್ಡ್​, ಆಧಾರ್​ ಕಾರ್ಡ್ ಮತ್ತು ಪ್ಯಾನ್​ ಕಾರ್ಡ್ ವಶಪಡಿಸಿಕೊಳಲಾಗಿದೆ. ಈ ಹಿಂದೆ 2018ರಲ್ಲಿ ಸೈಬರ್​ ಕ್ರೈಂ ಪ್ರಕರಣದಲ್ಲಿ ಆರೋಪಿ ನಿಖಿಲ್​ ಜೈಲಿಗೆ ಹೋಗಿದ್ದನು.

ಈ ಪ್ರಕರಣ ಬಗ್ಗೆ ಮಾತನಾಡಿದ ಪೊಲೀಸ್​ ಅಧಿಕಾರಿ ಅನಿಲ್‌ಕುಮಾರ್‌, ಈ ಇಬ್ಬರೂ ಆರೋಪಿಗಳು ಖಾಸಗಿ ಬ್ಯಾಂಕ್​ನ ಕೆವೈಸಿ ಅಪ್​ಡೇಟ್​ ಹೆಸರಿನಲ್ಲಿ ಲಿಂಕ್​ ಕಳುಹಿಸಿ ಅಮಾಯಕರನ್ನು ವಂಚಿಸುತ್ತಿದ್ದರು ಮತ್ತು ಆನ್​ಲೈನ್​​ನಲ್ಲಿ ಬಲ್ಕ್​ ಸಂದೇಶಗಳನ್ನು ಕಳುಹಿಸಿ ಜನರ ಡೇಟಾವನ್ನು ಸಂಗ್ರಹಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ನಿಖಿಲ್​ ಸೈಬರ್​ ಕ್ರಿಮಿನಲ್ಸ್​ಗಳೊಂದಿಗೆ ನೇರ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈ ಹಿಂದೆ 2018ರಲ್ಲಿ ಸೈಬರ್​ ಕ್ರೈಂ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಎಂಬುದಾಗಿ ತಿಳಿದು ಬಂದಿದೆ.

ಆರೋಪಿ ನಿಖಿಲ್‌ನ ಮೊಬೈಲ್‌ನಲ್ಲಿ ಸುಮಾರು 20 ಲಕ್ಷ ರೂಪಾಯಿಯ ಸೈಬರ್ ವಂಚನೆಯ ಮಾಹಿತಿಯು ಪೊಲೀಸರಿಗೆ ಸಿಕ್ಕಿದ್ದು. ಇದೀಗ ಆರೋಪಿ ಮೊಬೈಲ್‌ನಲ್ಲಿ 6 ಲಕ್ಷ ಜನರ ಸಂಖ್ಯೆಗಳು ಮತ್ತು ವಿವರಗಳು ಪತ್ತೆಯಾಗಿವೆ, ಅದರಲ್ಲಿ ಎಷ್ಟು ಮಂದಿಯನ್ನು ವಂಚಿಸಲಾಗಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸೈಬರ್ ಕ್ರೈಂ ಬಗ್ಗೆ ಅರಿವು: ದಿನೇ‌ ದಿನೆ ಹೆಚ್ಚಾಗುತ್ತಿರುವ ಇಂದಿನ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ಹಾಗೂ ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ವ್ಯಾಪಕವಾಗುತ್ತಿರುವ ಹರಡುತ್ತಿರುವ ಸೈಬರ್ ಕ್ರೈಂ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಿಂಗಾಪುರದ ಮೂಲದ ಸೈಫರ್ಮಾ ಕಂಪನಿಯೂ ಟೆಕ್ ಮಾರ್ಕ್ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

ಇಂದಿನ ಹೈಟೆಕ್ ಯುಗದಲ್ಲಿ ಆನ್ ಲೈನ್​ನಲ್ಲೇ ಹಣಕಾಸಿನ ವ್ಯವಹಾರ ಅಧಿಕಗೊಂಡಂತೆ ಸೈಬರ್ ಖದೀಮರು ತಮ್ಮ ಕೈಚಳಕ ತೋರುತ್ತಿದ್ದಾರೆ‌. ಕೋವಿಡ್ ನಂತರ ಕಾಲದಲ್ಲಿ ಆನ್ ಲೈನ್ ಖದೀಮರು ವಂಚಿಸುವವರ ಸಂಖ್ಯೆ ಅಧಿಕವಾಗಿದೆ‌. ಅಧ್ಯಯನವೊಂದರ ಪ್ರಕಾರ ಕೋವಿಡ್ ಬಳಿಕ ದೇಶದಲ್ಲಿ ಶೇ.170 ರಷ್ಟು ಸೈಬರ್ ಅಪರಾಧಗಳು ಹೆಚ್ಚಾಗಿವೆ. 2022ರ ಮೊದಲ ಆರು ತಿಂಗಳಲ್ಲಿ 70 ಸಾವಿರ ಕೇಸ್ ಗಳು ದಾಖಲಾಗಿದ್ದು, 2025ರ ವೇಳೆಗೆ ಸೈಬರ್ ಅಪರಾಧ ತಡೆಯುವುದರ ಬಗ್ಗೆ ಯೋಚಿಸಬೇಕಾದ ತುರ್ತು ಅಗತ್ಯವಿದೆ.‌

ಈ ನಿಟ್ಟಿನಲ್ಲಿ ಸೈಫರ್ಮಾ ಹಾಗೂ ಟೆಕ್‌ಮಾರ್ಕ್ ಕಂಪನಿಯೂ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ಭವಿಷ್ಯದಲ್ಲಿ ಎದುರಾಗುವ ಸೈಬರ್ ಭದ್ರತೆಗಳನ್ನು ಕಾಪಾಡಲು ಸಹಕಾರಿಯಾಗಲಿದೆ. ಆಧಾರ್‌ ಲಿಂಕ್ ಮಾಡುತ್ತೇವೆ ಎಂದು ಒಟಿಪಿಗಳನ್ನು ಫೋನ್ ಮಾಡಿ ಪಡೆದು ವಂಚಿಸುವ ಪ್ರಕರಣಗಳು ನಡೆಯುತ್ತಿರುತ್ತವೆ. ಈ ಬಗ್ಗೆ ಪ್ರತಿಯೊಬ್ಬರು ಎಚ್ಚರವಾಗಿರಬೇಕು.

ಇದನ್ನೂ ಓದಿ: ಇಬ್ಬರು ಮಕ್ಕಳನ್ನು ದೇಹಕ್ಕೆ ಕಟ್ಟಿಕೊಂಡು ನದಿಗೆ ಹಾರಿದ ಅಮ್ಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.