ETV Bharat / bharat

Cyrus Mistry Death: ಅಪಘಾತಕ್ಕೀಡಾದ ಕಾರು ಪರೀಕ್ಷಿಸಲು ಹಾಂಗ್​ಕಾಂಗ್​​ನಿಂದ ಬಂದ ಮರ್ಸಿಡಿಸ್​ ತಜ್ಞರು

author img

By

Published : Sep 14, 2022, 8:52 AM IST

ಸೈರಸ್​ ಮಿಸ್ತ್ರಿ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅದರ ತನಿಖೆ ನಡೆಸಲು ಹಾಂಗ್​​ಕಾಂಗ್​​​ನಿಂದ ಮರ್ಸಿಡಿಸ್​ ತಜ್ಞರ ತಂಡ ಆಗಮಿಸಿದೆ.

Cyrus Mistry Death
Cyrus Mistry Death

ಥಾಣೆ(ಮಹಾರಾಷ್ಟ್ರ): ಸೆಪ್ಟೆಂಬರ್​ 4ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಟಾಟಾ ಸನ್ಸ್​ ಮಾಜಿ ಅಧ್ಯಕ್ಷ ಸೈರಸ್​ ಮಿಸ್ತ್ರಿ ದುರ್ಮರಣಕ್ಕೀಡಾಗಿದ್ದು, ಅಪಘಾತಕ್ಕೀಡಾದ ಕಾರಿನ ಬಗ್ಗೆ ತನಿಖೆ ನಡೆಸುವ ಉದ್ದೇಶದಿಂದ ಮರ್ಸಿಡಿಸ್​​​​​ ಬೆಂಜ್ ಕಾರಿನ ತಜ್ಞರು ಹಾಂಗ್​ಕಾಂಗ್​​ನಿಂದ ಮುಂಬೈಗೆ ಆಗಮಿಸಿದ್ದಾರೆ.

ತಂಡ ಈಗಾಗಲೇ ಮುಂಬೈಗೆ ಆಗಮಿಸಿದ್ದು, ಕಾರಿನ ಬಗ್ಗೆ ತನಿಖೆ ಆರಂಭಿಸಲಿದ್ದಾರೆ. ಅಪಘಾತಕ್ಕೀಡಾದ ಕಾರನ್ನ ಥಾಣೆಯ ಮರ್ಸಿಡಿಸ್ ಶೋ ರೂಂನಲ್ಲಿ ಇಡಲಾಗಿದೆ. ಪ್ರಸಿದ್ಧ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್​​ನ ಮಾಜಿ ಅಧ್ಯಕ್ಷ ಸೈರಸ್​ ಮಿಸ್ತ್ರಿ ಸೆಪ್ಟೆಂಬರ್​​ 4ರಂದು ನಡೆದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಅಹಮದಾಬಾದ್​​​ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವೇಳೆ ಅವರ ಕಾರು ಡಿವೈಡರ್​​ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರ ಪೈಕಿ, ಸೈರಸ್ ಮಿಸ್ತ್ರಿ ಹಾಗೂ ಮತ್ತೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಹಾಂಗ್​ಕಾಂಗ್​​ನಿಂದ ಆಗಮಿಸಿರುವ ತಂಡ ಈಗಾಗಲೇ ಮುಂಬೈ ತಲುಪಿದೆ ಎಂದು ಪಾಲ್ಘರ್​ ಎಸ್​ಪಿ ಬಾಳಾಸಾಹೇಬ್ ಪಾಟೀಲ್​ ತಿಳಿಸಿದ್ದು, ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಕಾರಿನ ತನಿಖೆ ನಡೆಯಲಿದೆ. ಎಲ್ಲರೂ ತಾಂತ್ರಿಕ ತಜ್ಞರಾಗಿದ್ದು, ಮರ್ಸಿಡಿಸ್​ ಬೆಂಜ್​ ಕಂಪನಿಗೆ ತನಿಖೆಯ ವರದಿ ಸಲ್ಲಿಕೆ ಮಾಡಲಿದೆ.ಮುಖ್ಯವಾಗಿ ಅಪಘಾತ ನಡೆದ ಸಂದರ್ಭದಲ್ಲಿ ಏರ್​ಬ್ಯಾಗ್​​ ಏಕೆ ತೆರೆದುಕೊಂಡಿಲ್ಲ ಎಂಬ ಪ್ರಶ್ನೆ ಉದ್ಭವವಾಗಿದ್ದು, ಅದರ ಬಗ್ಗೆ ಇದೀಗ ಉತ್ತರ ಸಿಗಲಿದೆ.

ಇದನ್ನೂ ಓದಿ: ಪಂಚಭೂತಗಳಲ್ಲಿ ಲೀನವಾದ ಸೈರಸ್​ ಮಿಸ್ತ್ರಿ.. ಅಂತಿಮ ದರ್ಶನ ಪಡೆದ ರತನ್​ ಟಾಟಾ, ಅನಿಲ್​ ಅಂಬಾನಿ

ಖ್ಯಾತ ಉದ್ಯಮಿ ರತನ್ ಟಾಟಾ ಅವರು ಟಾಟಾ ಸನ್ಸ್​ ಗ್ರೂಪ್​ನಿಂದ ನಿವೃತ್ತಿ ಘೋಷಿಸಿದ ಬಳಿಕ ಸೈರಸ್​ ಮಿಸ್ತ್ರಿ ಅವರು 2012 ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. 4 ವರ್ಷಗಳಲ್ಲಿ ಗ್ರೂಪ್​ನ ಇನ್ನಿತರ ಉದ್ಯೋಗಿಗಳೊಂದಿಗಿನ ಮನಸ್ತಾಪದಿಂದ ಅವರು 2016 ರಲ್ಲಿ ಅವರು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಯಬೇಕಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.