ETV Bharat / bharat

ಐಷಾರಾಮಿ ಕ್ರೂಸ್​​ ಹಡಗು ಜೂನ್​ 8ರಿಂದ 3 ದಿನಗಳ ಪ್ರಯಾಣ ಆರಂಭ.. ಚೆನ್ನೈ, ಪುದುಚೇರಿಗೆ ಟ್ರಿಪ್​..

author img

By

Published : Jun 5, 2022, 4:57 PM IST

ಐಷಾರಾಮಿ ಹಡಗಾದ ಕಾರ್ಡೇಲಿಯಾ ಕ್ರೂಸ್​ ಲೈನರ್​ ಮೂರು ದಿನಗಳ ಪ್ರಯಾಣಕ್ಕೆ ಸಜ್ಜಾಗಿದೆ. ಜೂನ್​ 8ರಂದು ವಿಶಾಖಪಟ್ಟಣದಿಂದ ಪ್ರಯಾಣ ಆರಂಭವಾಗಿ ಚೆನ್ನೈ ಬಳಿಕ ಪುದುಚೇರಿಗೆ ಬರಲಿದೆ. ಅಲ್ಲಿಂದ ವಾಪಸ್​ ಆಗಲಿದೆ..

cruise-service-from
ಐಷಾರಾಮಿ ಕ್ರೂಸ್​​ ಹಡಗು

ವಿಶಾಖಪಟ್ಟಣಂ(ಆಂಧ್ರಪ್ರದೇಶ) : ದೇಶದ ಅತಿ ಐಷಾರಾಮಿ ಹಡಗಾದ ಕಾರ್ಡೇಲಿಯಾ ಕ್ರೂಸ್​ ಲೈನರ್​ ವಿಶಾಖಪಟ್ಟಣಂದಿಂದ ಜೂನ್​ 8ರಿಂದ ಮೂರು ದಿನಗಳ ಪ್ರಯಾಣಕ್ಕೆ ಸಜ್ಜಾಗಿದೆ. ವಿಶಾಖಪಟ್ಟಣದಿಂದ ಚೆನ್ನೈ, ಪುದುಚೇರಿಗೆ ಇದೇ ತಿಂಗಳ 8, 15 ಮತ್ತು 22ರಂದು ಪ್ರಯಾಣ ನಡೆಸಲಿದೆ.

ಜೂನ್‌ 8ರಂದು ಪ್ರಯಾಣ ಆರಂಭಿಸುವ ಕ್ರೂಸ್​ ಚೆನ್ನೈ ತಲುಪಿ ಬಳಿಕ ಪುದುಚೇರಿ ಸೇರಲಿದೆ. ಅಲ್ಲಿಂದ ವಾಪಸ್​ ವಿಶಾಖಪಟ್ಟಣಕ್ಕೆ ಬರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಐಷಾರಾಮಿ ಕ್ರೂಸ್​​ ಹಡಗಿನಲ್ಲಿರುವ ಈಜುಕೊಳ
ಐಷಾರಾಮಿ ಕ್ರೂಸ್​​ ಹಡಗಿನಲ್ಲಿರುವ ಈಜುಕೊಳ..

ವಿಶಾಖಪಟ್ಟಣಂನಿಂದ ಪುದುಚೇರಿಗೆ ಪ್ರಯಾಣಿಸಲು ಸಾಮಾನ್ಯವಾಗಿ ರೈಲು ಅಥವಾ ರಸ್ತೆ ಮಾರ್ಗವಾಗಿ ಹೊರಟರೆ 15 ಗಂಟೆಗಳು ಬೇಕಾಗುತ್ತದೆ. ಆದರೆ, ಈ ಹಡಗು 36 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಅಲ್ಲಿಂದ ಚೆನ್ನೈಗೆ ಪ್ರಯಾಣಿಸಿ ಮತ್ತೆ ವಿಶಾಖಪಟ್ಟಣಕ್ಕೆ ಬರಲು ಇನ್ನೆರಡು ದಿನ ಹೆಚ್ಚುವರಿಯಾಗಿ ಬೇಕು. ಪ್ರಯಾಣ ತಡವಾದರೂ ಪ್ರವಾಸಿಗರು ಈ ಹಡಗಿನಲ್ಲಿ ಪ್ರಯಾಣಿಸಲು ಕಾತರರಾಗಿದ್ದಾರೆ.

ಐಷಾರಾಮಿ ಕ್ರೂಸ್​​ ಹಡಗಿನ ಸೊಬಗು
ಐಷಾರಾಮಿ ಕ್ರೂಸ್​​ ಹಡಗಿನ ಸೊಬಗು

ಕಾರ್ಡೆಲಿಯಾ ಕ್ರೂಸ್-ಎಂವಿ ಎಂಪ್ರೆಸ್ ಹಿಂದೂ ಮಹಾಸಾಗರದ ಅತಿದೊಡ್ಡ ಕ್ರೂಸ್ ಹಡಗುಗಳಲ್ಲಿ ಒಂದಾಗಿದೆ. ಇದು ಒಂದು ಬಾರಿಗೆ 1500 ಜನರನ್ನು ಹೊತ್ತೊಯ್ಯಬಹುದು. ಹಡಗು ಒಟ್ಟು 11 ಮಹಡಿಗಳನ್ನು ಹೊಂದಿದೆ. ಮೂರನೇ ಮಹಡಿಯಿಂದ ಪ್ರಯಾಣಿಕರ ಕೋಣೆ ಪ್ರಾರಂಭವಾಗುತ್ತದೆ. 9ನೇ ಮಹಡಿಯವರೆಗೂ ಕೋಣೆಗಳಿದ್ದು, ಎಲಿವೇಟರ್ ಸಹಾಯದಿಂದ ಅಲ್ಲಿಗೆ ಹೋಗಬಹುದಾಗಿದೆ.

ಐಷಾರಾಮಿ ಕ್ರೂಸ್​​ ಹಡಗಿನಲ್ಲಿನ ಥಿಯೇಟರ್​
ಐಷಾರಾಮಿ ಕ್ರೂಸ್​​ ಹಡಗಿನಲ್ಲಿನ ಥಿಯೇಟರ್​

10ನೇ ಮಹಡಿಯಲ್ಲಿ ದೊಡ್ಡ ಟೆರೇಸ್ ತರಹದ ಡೆಕ್ ಇದೆ. ಹನ್ನೊಂದನೇ ಮಹಡಿಯಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ವೀಕ್ಷಿಸಲು ವಿಶೇಷವಾಗಿ ಸ್ಥಾಪಿಸಲಾದ ಮತ್ತೊಂದು ವಿಶೇಷ ಡೆಕ್ ಇದೆ. ಅಲ್ಲಿ ನಿಂತು ಸಾಗರವನ್ನು ನೋಡುವುದೇ ಒಂದು ಅದ್ಭುತ ಅನುಭವ. ಮೂರನೇ ಮಹಡಿಯಿಂದ ಒಂಬತ್ತನೆ ಮಹಡಿಯವರೆಗೆ ವಿವಿಧ ಹಂತದ ಸೌಕರ್ಯಗಳುಳ್ಳ ಕೊಠಡಿಗಳಿವೆ.

ಸಾಮಾನ್ಯ ಕೊಠಡಿಗಳು ಅಥವಾ ಸೂಟ್‌ಗಳು ಸ್ಟಾರ್ ಹೋಟೆಲ್‌ನಂತೆಯೇ ಶುಚಿತ್ವ ಮತ್ತು ಊಟದ ಸೌಲಭ್ಯಗಳನ್ನು ಹೊಂದಿವೆ. ಪ್ರಯಾಣಿಕರಿಗಾಗಿ ಎರಡು ದೊಡ್ಡ ರೆಸ್ಟೋರೆಂಟ್‌ಗಳಿವೆ. ಜಗತ್ತಿನ ಎಲ್ಲ ಬಗೆಯ ಆಹಾರದ ಪದಾರ್ಥಗಳು ಇಲ್ಲಿ ಲಭ್ಯವಿವೆ.

ಝಗಮಗಿಸುತ್ತಿರುವ ಐಷಾರಾಮಿ ಕ್ರೂಸ್​​ ಹಡಗು
ಝಗಮಗಿಸುತ್ತಿರುವ ಐಷಾರಾಮಿ ಕ್ರೂಸ್​​ ಹಡಗು

ಈ ಐಷಾರಾಮಿ ಕ್ರೂಸ್ ಹಡಗು ವಿಶಾಖಪಟ್ಟಣದಿಂದ ಇದೇ ಜೂನ್‌ 8ನೇ ತಾರೀಖಿನಂದು ಪ್ರಯಾಣ ಆರಂಭಿಸಲಿದೆ. ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಬೇಕಿದ್ದು, 27 ಸಾವಿರದಿಂದ 1.27 ಲಕ್ಷ ರೂ.ವರೆಗೂ ವಿವಿಧ ಮಾದರಿಯ ಸೌಕರ್ಯವುಳ್ಳ ಕೊಠಡಿಗಳಿವೆ. ಆನ್‌ಲೈನ್ ಟ್ರಾವೆಲ್ ಕಂಪನಿಗಳು ಟಿಕೆಟ್‌ಗೆ ರಿಯಾಯಿತಿ ಕೂಡ ನೀಡಿವೆ. 12 ವರ್ಷದೊಳಗಿನ ಮಕ್ಕಳಿಗೆ ಹಡಗಿನಲ್ಲಿ ಉಚಿತ ಪ್ರಯಾಣಕ್ಕೆ ಅನುಮತಿಸಲಾಗುವುದು ಎಂದು ಟ್ರಾವೆಲ್​ ಕಂಪನಿ ತಿಳಿಸಿದೆ.

ವಿಲಾಸಿ ಹಡಗಿನಲ್ಲಿ ಏನೇನಿವೆ?: ಈ ಐಶಾರಾಮಿ ಹಡಗಿನಲ್ಲಿ ಮೂಲಸೌಲಭ್ಯಗಳಲ್ಲದೇ, ಫುಡ್ ಕೋರ್ಟ್, ಸ್ಟಾರ್‌ಲೈಟ್ ರೆಸ್ಟೋರೆಂಟ್, ಈಜುಕೊಳ, ಫಿಟ್‌ನೆಸ್ ಸೆಂಟರ್, ಲಾಂಜ್‌ಗಳು, ಡಿಜೆ ಮನರಂಜನೆ, ಕ್ಯಾಸಿನೋ, ಲೈವ್ ಶೋಗಳು, ಕಾರ್ಡೆಲಿಯಾ ಅಕಾಡೆಮಿ ಫಾರ್ ಕಿಡ್ಸ್, ಜೈನ್ ಫುಡ್ ಮತ್ತು ರಾಕ್ ಕ್ಲಿಂಬಿಂಗ್, ಹಾಸ್ಯ ಪ್ರದರ್ಶನಗಳಿಗಾಗಿ ಆಡಿಟೋರಿಯಂಗಳು, ಚಲನಚಿತ್ರಗಳ ಥಿಯೇಟರ್‌ಗಳು ಮತ್ತು 24 ಗಂಟೆಗಳ ಸೂಪರ್‌ಮಾರ್ಕೆಟ್ ಅನ್ನೂ ಕೂಡ ಇದು ಹೊಂದಿದೆ.

ಓದಿ: ಭಾವಿ ಪತಿಯನ್ನೇ ಬಂಧಿಸಿ ಸುದ್ದಿಯಾಗಿದ್ದ ಲೇಡಿ ಎಸ್​ಐ ಅರೆಸ್ಟ್.. ಸೇವೆಯಿಂದಲೂ ಸಸ್ಪೆಂಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.