ETV Bharat / bharat

ಬಾಲಕಿ ಅಪಹರಣ ಪ್ರಕರಣ: ಉತ್ತರಾಖಂಡದ ಪುರೋಲಾದಲ್ಲಿ ನಿಷೇಧಾಜ್ಞೆ ಜಾರಿ

author img

By

Published : Jun 14, 2023, 2:45 PM IST

ಉತ್ತರಕಾಶಿಯ ಪುರೋಲಾದಲ್ಲಿ ಜಿಲ್ಲಾಡಳಿತ ಇಂದು 144 ಸೆಕ್ಷನ್ ಜಾರಿಗೊಳಿಸಿದೆ. ಜೂನ್ 14 ರಿಂದ ಜೂನ್ 19 ರವರೆಗೆ ಪ್ರತಿಬಂಧಕಾಜ್ಞೆ ಮುಂದುವರೆಯಲಿದೆ.

Uttarakhand
ಉತ್ತರಾಖಂಡ

ಉತ್ತರಕಾಶಿ (ಉತ್ತರಾಖಂಡ): ಕಳೆದ ತಿಂಗಳು ಬಾಲಕಿಯೊಬ್ಬಳನ್ನು ಅಪಹರಿಸಲು ಯತ್ನಿಸಿದ ಆರೋಪದ ಮೇಲೆ ಕೋಮು ಉದ್ವಿಗ್ನತೆ ಉಂಟಾಗಿದ್ದ ಪುರೋಲಾದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪುರೋಲಾದಲ್ಲಿ ಮಹಾ ಪಂಚಾಯಿತಿ ನಡೆಸಲು ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಜಿಲ್ಲೆಯ ಗಿರಿಧಾಮವಾಗಿರುವ ಈ ಪ್ರದೇಶದಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ವಿಧಿಸಲಾಗಿದೆ ಎಂದು ಉತ್ತರಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಭಿಷೇಕ್ ರೋಹಿಲ್ಲಾ ತಿಳಿಸಿದ್ದಾರೆ.

ನಿಯಮದಂತೆ, ಒಂದು ಪ್ರದೇಶದಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರ ಸಭೆ ನಿಷೇಧಿಸಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಡಿಜಿಪಿ ಅಶೋಕ್ ಕುಮಾರ್ ಬುಧವಾರ ಎಚ್ಚರಿಕೆ ನೀಡಿದ್ದಾರೆ. "ಜಿಲ್ಲಾ ಪೊಲೀಸರು ಮತ್ತು ಆಡಳಿತ ಸಂಪೂರ್ಣ ಸನ್ನದ್ಧವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಾವು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಕಾನೂನು ಉಲ್ಲಂಘಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಉಲ್ಲಂಘಿಸಲು ಪ್ರಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು" ಡಿಜಿಪಿ ಹೇಳಿದರು.

  • #WATCH | Dehradun: We have appealed to everyone to maintain peace and not to take law into their own hands...action will be taken against those who do break the law": Pushkar Singh Dhami, Uttarakhand CM on the proposed 'Mahapanchayat' on June 15 in Purola pic.twitter.com/q3hmGbKOjT

    — ANI UP/Uttarakhand (@ANINewsUP) June 14, 2023 " class="align-text-top noRightClick twitterSection" data=" ">

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಕಳೆದ ವಾರ ಸಚಿವಾಲಯದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದರು. ಮುಂಬರುವ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ಕಟ್ಟುನಿಟ್ಟಾಗಿ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಡಿಜಿಪಿ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ವಿ.ಮುರುಗೇಶನ್ ಮತ್ತು ಗುಪ್ತಚರ ಇಲಾಖೆಯ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಕರಣದ ವಿವರ: ಉತ್ತರಕಾಶಿ ಪಟ್ಟಣ ಕಳೆದ ತಿಂಗಳು ಅಲ್ಪಸಂಖ್ಯಾತ ಸಮುದಾಯದ ಓರ್ವ ಬಾಲಕಿ ಸೇರಿದಂತೆ ಇಬ್ಬರು 14 ವರ್ಷದ ಬಾಲಕಿಯರ ಅಪಹರಣ ಯತ್ನ ಆರೋಪದ ಮೇಲೆ ಉದ್ವಿಗ್ನತೆಗೆ ಸಾಕ್ಷಿಯಾಗಿತ್ತು. ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುರುಗೇಶನ್ ಸೋಮವಾರ ಹೇಳಿದ್ದಾರೆ.

  • #WATCH | Uttarakhand: "District Police and administration are fully prepared. We're taking all the steps to maintain the law & order in the state, no one will be allowed to break the law...action will be taken against those who will try to break the law...": DGP Ashok Kumar on… pic.twitter.com/v11BhStzNB

    — ANI UP/Uttarakhand (@ANINewsUP) June 14, 2023 " class="align-text-top noRightClick twitterSection" data=" ">

"ಇತ್ತೀಚೆಗೆ ಉತ್ತರಕಾಶಿ, ವಿಕಾಸ್ ನಗರ ಮತ್ತು ಇತರ ಪ್ರದೇಶಗಳಲ್ಲಿ ಅಪಹರಣ ಪ್ರಕರಣಗಳು ನಡೆದಿವೆ. ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಪೊಲೀಸರು ಶಾಂತಿ ಸ್ಥಾಪಿಸಲು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ, ಯಾರು ಕಾನೂನು ಉಲ್ಲಂಘಿಸಿದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ತನಿಖೆ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.

ನಗರ ತೊರೆದ ವ್ಯಾಪಾರಸ್ಥರು: ಮೂಲಗಳ ಪ್ರಕಾರ, ಅಲ್ಪಸಂಖ್ಯಾತ ಸಮುದಾಯದ ಒಟ್ಟು 11 ಮಂದಿ ವ್ಯಾಪಾರಸ್ಥರು ಪುರೋಲಾದಿಂದ ವಲಸೆ ಹೋಗಿದ್ದಾರೆ. ಆದರೆ ಕೆಲವು ಅಪರಿಚಿತರು ಕಳೆದ ವಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಾಪಾರಿಗಳ ಮುಚ್ಚಿದ ಅಂಗಡಿಗಳ ಮೇಲೆ ವ್ಯಾಪಾರವನ್ನು ಸ್ಥಗಿತಗೊಳಿಸಿ ಪಟ್ಟಣವನ್ನು ತೊರೆಯಿರಿ ಎಂದು ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ನಂತರ ಹಲವು ಮಂದಿ ವ್ಯಾಪಾರಸ್ಥರು ಬಾರ್ಕೋಟ್ ಮತ್ತು ನೌಗಾಂವ್ ಪಟ್ಟಣಗಳನ್ನು ತೊರೆದಿದ್ದಾರೆ.

ಶಾಂತಿ ಕಾಪಾಡುವಂತೆ ಸಿಎಂ ಮನವಿ: ಪುರೋಲಾದಲ್ಲಿ ಜೂನ್ 15 ರಂದು ಉದ್ದೇಶಿತ ಮಹಾಪಂಚಾಯತ್ ಕುರಿತು ಸಿಎಂ ಪುಷ್ಕರ್ ಸಿಂಗ್ ಧಾಮಿ ಹೇಳಿಕೆ ನೀಡಿದ್ದಾರೆ. "ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ ಮತ್ತು ಶಾಂತಿ ಕಾಪಾಡುವಂತೆ ನಾವು ಎಲ್ಲರಿಗೂ ಮನವಿ ಮಾಡಿದ್ದೇವೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಲವ್​ ಜಿಹಾದ್​ ಆರೋಪ : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಯುವಕನ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.