ETV Bharat / bharat

'ಲೋಕಲ್​ ಸಿನಿಮಾ' ಹೆಸರಲ್ಲಿ ಅತ್ಯಾಚಾರ​ ವಿಡಿಯೋ ಮಾರಾಟ ದಂಧೆ, ಇದಕ್ಕಿದೆ ಪೊಲೀಸರ ಕೃಪಾಕಟಾಕ್ಷ!

author img

By

Published : Jul 23, 2023, 1:32 PM IST

ಉತ್ತರಪ್ರದೇಶದ ಲಖನೌನ ಮಾರ್ಕೆಟ್​ವೊಂದರಲ್ಲಿ ಅತ್ಯಾಚಾರದ ವಿಡಿಯೋಗಳನ್ನು ಲೋಕಲ್​ ಸಿನಿಮಾದ ಹೆಸರಲ್ಲಿ ಮಾರಾಟ ಮಾಡುತ್ತಿರುವ ದಂಧೆ ನಡೆಸಲಾಗುತ್ತಿದೆ. ಇದಕ್ಕೆಲ್ಲ ಪೊಲೀಸರ ಕೃಪಾಕಟಾಕ್ಷ ಇದೆ ಎಂಬುದು ಆಘಾತಕಾರಿ, ಅಚ್ಚರಿಯ ಸಂಗತಿ.

ಅತ್ಯಾಚಾರ​ ವಿಡಿಯೋ ಮಾರಾಟ ದಂಧೆ
ಅತ್ಯಾಚಾರ​ ವಿಡಿಯೋ ಮಾರಾಟ ದಂಧೆ

ಲಖನೌ: "ನನಗೆ ಐದು 'ಲೋಕಲ್​ ಸಿನಿಮಾ' ಬೇಕಿದೆ. ಚೆನ್ನಾಗಿರಬೇಕು. ಸಂಜೆ ಬಂದು ತೆಗೆದುಕೊಂಡು ಹೋಗ್ತೀನಿ.." ಲಖನೌದ ಎಲೆಕ್ಟ್ರಾನಿಕ್​ ಚೋರ್​ ಮಾರ್ಕೆಟ್​ ಆಗಿರುವ ನಾಕಾ ಹಿಂದೋಲಾದಲ್ಲಿ ಬೆಳಗ್ಗೆಯೇ ಬಂದ ವ್ಯಕ್ತಿಯೊಬ್ಬ ಅರ್ಧಶಟರ್​ ತೆಗೆದ ಅಂಗಡಿಯವನ ಬಳಿ ಉಸುರಿ ಹೊರಟು ಹೋದ.

ಎಲೆಕ್ಟ್ರಾನಿಕ್​ ಮಾರ್ಕೆಟ್​ನಲ್ಲಿ ಏನಿವು 'ಲೋಕಲ್​ ಸಿನಿಮಾ'ಗಳು ಅನ್ಕೊಂಡ್ರಾ?. ಲೋಕಲ್​ ಸಿನಿಮಾ ಅನ್ನೋದು ಕೋಡ್​ವರ್ಡ್ ಅಷ್ಟೇ​. ಯುವತಿ, ಮಹಿಳೆಯರ ಮೇಲೆ ನಡೆದ ಅತ್ಯಾಚಾರವನ್ನು ಸೆರೆಹಿಡಿದ ವಿಡಿಯೋಗಳು ಇವು. ಅವುಗಳನ್ನು ಲೋಕಲ್​ ಸಿನಿಮಾ ಎಂದು ಹೇಳಿ ಇಲ್ಲಿ ಮಾರಾಟ ಮಾಡಲಾಗುತ್ತದೆ. ಈ ವಿಡಿಯೋಗಳು ಮಾರುಕಟ್ಟೆಯಲ್ಲಿ ಹೇರಳವಾಗಿ ಬಿಕರಿಯಾಗುತ್ತವಂತೆ.

ಬಲತ್ಕಾರದಿಂದ ಮಾಡಿದ, ಹವ್ಯಾಸಿ ಚಿತ್ರೀಕರಣ ಮಾಡಿದ ವಿಡಿಯೋಗಳನ್ನು ಈ ರಹಸ್ಯ ತಿಳಿದ ಗ್ರಾಹಕರಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ. ಯಾವುದೇ ತೊಂದರೆ ಉಂಟಾಗಬಾರದು ಎಂದು ಅವುಗಳನ್ನು USB ಪೆನ್ ಡ್ರೈವ್‌ಗಳಲ್ಲಿ ಮಾತ್ರ ನೀಡಲಾಗುತ್ತದೆ.

ಈ ರೇಪ್​ ವಿಡಿಯೋಗಳನ್ನು ಪಡೆದುಕೊಂಡವರು, ಅಲ್ಲಿನ ಸಂತ್ರಸ್ತೆಯರನ್ನು ಬ್ಲ್ಯಾಕ್​ಮೇಲ್​ ಮಾಡುವುದರ ಜೊತೆಗೆ ಚಿತ್ರ ವೀಕ್ಷಣೆಗಾಗಿಯೂ ಬಳಸುತ್ತಾರೆ. ಹೀಗಾಗಿ ಇದು ದೊಡ್ಡ ಬಂಡವಾಳ ತರುವ ವ್ಯಾಪಾರವಾಗಿ ಮಾರ್ಪಟ್ಟಿದೆ.

ಪೊಲೀಸ್​ ಮೂಗಿನ ನೇರದಲ್ಲೇ ದಂಧೆ: ಈ ಅನೈತಿಕ ದಂಧೆಯು ಪೊಲೀಸರ ಮೂಗಿನ ನೇರದಲ್ಲೇ ನಡೆಯುತ್ತದೆ ಎಂಬುದು ಆಶ್ವರ್ಯಕರ ಸಂಗತಿ. ನಾಕಾ ಹಿಂದೋಲ ಮಾರ್ಕೆಟ್​​ ಪೊಲೀಸ್ ಠಾಣೆಯಿಂದ ಕೇವಲ 500 ಮೀಟರ್ ದೂರದಲ್ಲಿದೆ. ಇಲ್ಲಿನ ಅಂಗಡಿಗಳಲ್ಲಿ ನಡೆಯುವ ಲೋಕಲ್​ ಸಿನಿಮಾಗಳ ವ್ಯಾಪಾರದ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ. ಇದನ್ನು ಮುಂದುವರಿಸಲು ಅನುಮತಿಗಾಗಿ ಪೊಲೀಸರಿಗೆ ಮಾಸಿಕವಾಗಿ ದೊಡ್ಡ ಮೊತ್ತವನ್ನು ಲಂಚವಾಗಿ ನೀಡಲಾಗುತ್ತದೆ ಎಂಬ ಆರೋಪವಿದೆ.

ಈ ದಂಧೆ ನಡೆಸುವ ವ್ಯಕ್ತಿಯೊಬ್ಬ ಮಾಹಿತಿ ನೀಡಿದ್ದು, ಸಿನಿಮಾಗಳನ್ನು ಪೈರಸಿ ಮಾಡಿ ಮಾರಾಟ ಮಾಡುವ ಕಾಲ ಅಸ್ತಂಗತವಾಗಿದೆ. ಅತ್ಯಾಚಾರದ ವಿಡಿಯೋಗಳಿಗೆ ಹೆಚ್ಚಿನ ಬೇಡಿಕೆಯಿದೆ. ಅತ್ಯಾಚಾರ ಮಾಡುವುದನ್ನು ಚಿತ್ರೀಕರಿಸುವ ಪ್ರವೃತ್ತಿಯೂ ಬೆಳೆದಿದೆ. ಇದರಲ್ಲಿ ಸಾಮೂಹಿಕ ಅತ್ಯಾಚಾರವೇ ಬಹಳ. ಒಂದು ವಿಡಿಯೋವು ಕನಿಷ್ಠ 10 ನಿಮಿಷದಿಂದ 30 ನಿಮಿಷಗಳವರೆಗೆ ಇರುತ್ತದೆ. ಒಂದು ಸಾಮಾನ್ಯ ವೀಡಿಯೊ ಕ್ಲಿಪ್​ 300 ರಿಂದ 500 ರೂಪಾರಿಗೆ ಮಾರಾಟ ಕಾಣುತ್ತದೆ ಎಂದು ವಿವರಿಸುತ್ತಾನೆ.

ವಿದ್ಯಾರ್ಥಿಗಳು, ರಾಜಕಾರಣಿಗಳೇ ಗ್ರಾಹಕರು: ಅತ್ಯಾಚಾರದ ವಿಡಿಯೋಗಳನ್ನು ನಗರಗಳಲ್ಲಿನ ಏಜೆಂಟರ ಮೂಲಕ ವ್ಯಾಪಾರವಾಗುತ್ತದೆ. ಸಾಮಾನ್ಯರು ಈ ವಿಡಿಯೋವನ್ನು 2 ಸಾವರದಿಂದ 5 ಸಾವಿರ ರರೂಪಾಯಿ ನೀಡಿ ಖರೀದಿ ಮಾಡುತ್ತಾರೆ. ಮಾರಾಟಕ್ಕೂ ಮೊದಲು ವಿಡಿಯೋದಲ್ಲಿ ಅತ್ಯಾಚಾರಿಯ ಮುಖ ಕಾಣದಂತೆ ಬ್ಲರ್​ ಮಾಡಲಾಗುತ್ತದೆ. ಸಂತ್ರಸ್ತೆಯನ್ನು ಮಾತ್ರ ನಿಖರವಾಗಿ ತೋರಿಸಲಾಗುತ್ತದೆ. ಆಡಿಯೋ ಇರುವ ವಿಡಿಯೋ ಹೆಚ್ಚು ದುಬಾರಿ ಎಂಬುದು ವ್ಯಾಪಾರಿಯ ಮಾತು.

ಪೋರ್ನ್ ಚಿತ್ರಗಳನ್ನು ಈಗ ಯಾರು ಬಯಸುವುದಿಲ್ಲ. ನಿಜವಾಗಿಯೂ ನಡೆದ ರೇಪ್​, ಲೈಂಗಿಕ ಚಿತ್ರಗಳನ್ನೇ ಜನರು ಇಷ್ಟ ಪಡುತ್ತಾರೆ. ಈ ಲೋಕಲ್​ ಸಿನಿಮಾಗಳ ಬೇಡಿಕೆಯು ಎಷ್ಟಿದೆ ಅಂದ್ರೆ ಪಕ್ಕದ ರಾಜ್ಯಗಳಾದ ಮಧ್ಯಪ್ರದೇಶ ಮತ್ತು ಬಿಹಾರದಿಂದಲೂ ಜನರು ಹೆಚ್ಚಿನ ಆರ್ಡರ್‌ ನೀಡಿ ಖರೀದಿಸುತ್ತಾರೆ. ದಿನಂಪ್ರತಿ 100 ರಿಂದ 200 ಲೋಕಲ್​ ಸಿನಿಮಾಗಳು ಮಾರಾಟವಾಗುತ್ತವೆ. ವಿಚಿತ್ರ ಅಂದರೆ ಈ ವಿಡಿಯೋಗಳ ಗ್ರಾಹಕರೆಂದರೆ ಚಿಕ್ಕ ಮಕ್ಕಳು, ವಿದ್ಯಾರ್ಥಿಗಳು, ರಾಜಕೀಯ ಲಿಂಕ್​ ಇರುವವರಾಗಿದ್ದಾರೆ ಎಂದು ವ್ಯಾಪಾರಿ ಹೇಳುತ್ತಾನೆ.

ಇದನ್ನೂ ಓದಿ: ಆನ್​ಲೈನ್​ ಗೇಮ್​ನಲ್ಲಿ ₹58 ಕೋಟಿ ಕಳೆದುಕೊಂಡ ಉದ್ಯಮಿ: ಆರೋಪಿ ಮನೆಯಿಂದ ₹17 ಕೋಟಿ ಹಣ, ಚಿನ್ನದ ಬಿಸ್ಕೆಟ್​ ವಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.