ETV Bharat / bharat

ಎರಡನೇ ಮದುವೆಗಾಗಿ ಪತ್ನಿಗೆ ವಿದ್ಯುತ್​ ಶಾಕ್​ ನೀಡಿ ಹತ್ಯೆ ಮಾಡಲು ಯತ್ನಿಸಿದ ಪತಿ ಬಂಧನ

author img

By ETV Bharat Karnataka Team

Published : Oct 24, 2023, 2:27 PM IST

ಎರಡನೇ ಮದುವೆ ಮಾಡಿಕೊಳ್ಳಲು ಮೊದಲನೇ ಪತ್ನಿ ಅಡ್ಡಿಯಾಗಿದ್ದಾಳೆ ಎಂದು ಪತಿ ಹತ್ಯೆ ಮಾಡಲು ಯತ್ನಿಸಿರುವ ಘಟನೆ ಮಿರತ್​ನಲ್ಲಿ ನಡೆದಿದೆ.

ದ್ಯುತ್​ ಶಾಕ್​ ನೀಡಿ ಹತ್ಯೆ ಮಾಡಲು ಯತ್ನಿಸಿದ ಪತಿ ಬಂಧನ
ದ್ಯುತ್​ ಶಾಕ್​ ನೀಡಿ ಹತ್ಯೆ ಮಾಡಲು ಯತ್ನಿಸಿದ ಪತಿ ಬಂಧನ

ಮೀರತ್​ (ಉತ್ತರಪ್ರದೇಶ): ಎರಡನೇ ಮದುವೆ ಮಾಡಿಕೊಳ್ಳಲು ಎಂದು ಮೊದಲ ಪತ್ನಿಗೆ ವಿದ್ಯುತ್​ ಶಾಕ್​ ನೀಡಿ ಕೊಲೆ ಮಾಡಲು ಯತ್ನಿಸಿದ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮೀರತ್‌ನ ಲಿಸಾಡಿಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • #MissionShakti के विशेष अभियान #शक्ति_दीदी के तहत थाना बिलारी पर तैनात महिला सुरक्षा दल द्वारा बालिकाओं/महिलाओं को थाना क्षेत्रान्तर्गत भ्रमणशील रहकर विभिन्न हेल्पलाइन नम्बर आदि के बारे में जागरुक किया गया ।#ShePoweredUPP#WomenEmpowerment#MissionShakti4 pic.twitter.com/tGkDtzNvXb

    — MORADABAD POLICE (@moradabadpolice) October 23, 2023 " class="align-text-top noRightClick twitterSection" data=" ">

ಈ ಬಗ್ಗೆ ಪೊಲೀಸರಿಗೆ ಸ್ವತಃ ಪತ್ನಿಯೇ ದೂರು ಕೂಡಾ ನೀಡಿದ್ದಾಳೆ. ಸೋಮವಾರ ಲಿಸಾಡಿಗೇಟ್ ಠಾಣೆಗೆ ತೆರಳಿದ ಪತ್ನಿ ತನ್ನ ಪತಿ ಎರಡನೇ ಮದುವೆಯಾಗಲು ಬಯಸಿದ್ದಾನೆ. ಇದಕ್ಕೆ ನಾನು ಅಡ್ಡಿಯಾಗುತ್ತೇನೆ ಎಂದು ವಿದ್ಯುತ್​ ಹತ್ಯೆ ಮಾಡಲು ಯತ್ನಿಸಿದ್ದಾನೆ ಎಂದು ದೂರು ನೀಡಿ ನ್ಯಾಯ ಒದಗಿಸುವಂತೆ ಮನವಿ ಮಾಡಿಕೊಂಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯ ಪತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಲಿಸಾಡಿ ಗೇಟ್ ಪೊಲೀಸ್ ಠಾಣೆ ಪ್ರಭಾರಿ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ದೂರಿನಲ್ಲಿ ಎರಡನೇ ಮದುವೆಗಾಗಿ ತನ್ನ ಪತಿ ತನ್ನನ್ನು ತಂತಿಗಳ ಮೂಲಕ ವಿದ್ಯುತ್​​ಗೆ ಸ್ಪರ್ಶಿಸಿ ಕೊಲ್ಲಲು ಪ್ರಯತ್ನಿಸುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ. ಜತೆಗೆ ಅತ್ತೆ ಮತ್ತು ಮಾವ ಕೂಡ ಅವಳನ್ನು ಕೊಲೆ ಮಾಡಲು ಯೋಜಿಸಿದ್ದರು. ಈ ವಿಷಯ ತಿಳಿದು, ತನ್ನ ಪ್ರಾಣ ಉಳಿಸಿಕೊಂಡು ಬಂದಿದ್ದೇನೆ. ಅಲ್ಲದೇ ಪತಿ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ. ಇದಕ್ಕೆ ಸೂಕ್ತ ನ್ಯಾಯ ಒದಗಿಸುವಂತೆ ದೂರಿನಲ್ಲಿ ನೊಂದ ಮನವಿ ಮಾಡಿದ್ದಾಳೆ.

ಕೆಲವೊಮ್ಮೆ ಪತಿ, ಅತ್ತೆ ಮತ್ತು ಮಾವ ಅವಳನ್ನು ಹೊಡೆದು ಮನೆಯಿಂದ ಹೊರಹಾಕಿದ್ದಾರೆ. ಪತಿ ತನ್ನನ್ನು ವಿದ್ಯುತ್ ತಂತಿಯಿಂದ ಶಾಕ್​ ನೀಡುತ್ತಾನೆ. ಅತ್ತೆ ಮತ್ತು ಮಾವ ತನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲೂ ಯತ್ನಿಸಿದ್ದಾರೆ. ಈ ವೇಳೆ, ಹೇಗೋ ಪ್ರಾಣ ಉಳಿಸಿಕೊಂಡು ಮನೆಯಿಂದ ಓಡಿ ಹೋಗಿ ರಸ್ತೆಯಲ್ಲಿ ಗಲಾಟೆ ಮಾಡಿ ಕಿರುಚಾಡಿದ್ದೇನೆ. ಕಿರುಚಾಟದ ಶಬ್ದ ಕೇಳಿ ಅಕ್ಕಪಕ್ಕದಲ್ಲಿದ್ದವರು ಬಂದು ರಕ್ಷಿಸಿದ್ದಾರೆ. ಬಳಿಕ ತಾನು ತನ್ನ ತವರಿಗೆ ತೆರಳಿರುವುದಾಗಿ ದೂರಿನಲ್ಲಿ ಮಹಿಳೆ ತಮಗೆ ಆದ ನೋವನ್ನು ಲಿಖಿತ ರೂಪದಲ್ಲಿ ದಾಖಲಿಸಿ ಆರೋಪಿಸಿದ್ದಾರೆ.

ಈ ಬಗ್ಗೆ ಪೊಲೀಸ್​ ಅಧಿಕಾರಿ ಹೇಳುವುದಿಷ್ಟು: ಪ್ರಸ್ತುತ ಮಹಿಳೆ ತನ್ನ ಮನೆಯವರಿಗೆ ವಿಷಯ ತಿಳಿಸಿ ಸೋಮವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಲಿಸಾಡಿ ಗೇಟ್ ಪೊಲೀಸ್ ಠಾಣೆ ಪ್ರಭಾರಿ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಮಹಿಳೆ ದೂರಿನ ಮೇರೆಗೆ ಆಕೆಯ ಪತಿಯನ್ನು ಬಂಧಿಸಲಾಗಿದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಪ್ರೀತ್ಸೆ, ಪ್ರೀತ್ಸೆ ಎಂದು ಬೆನ್ನುಬಿದ್ದ ಕಿಡಿಗೇಡಿ ಪ್ರೇಮಿ: ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.