ETV Bharat / bharat

ಹಿಂಸಾಚಾರಕ್ಕೆ ಪ್ರಚೋದನೆ ಆರೋಪ: ಮರಣ ಹೊಂದಿರುವ ವ್ಯಕ್ತಿಗೆ ನೋಟಿಸ್​ ನೀಡಿದ ಪೊಲೀಸರು

ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಡಿ ಪೊಲೀಸರು ಮೂವರಿಗೆ ನೋಟಿಸ್​ ನೀಡಿದ್ದಾರೆ. ವಿಚಿತ್ರ ಅಂದ್ರೆ ದೆಹಲಿ ಪೊಲೀಸರು ಈಗಾಗಲೇ ಸಾವನ್ನಪ್ಪಿರುವ ವ್ಯಕ್ತಿಗೂ ನೋಟಿಸ್​ ನೀಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Crime branch sends legal notice to dead farmer for inciting violence
ಮರಣ ಹೊಂದಿದ್ದ ವ್ಯಕ್ತಿಗೆ ನೋಟಿಸ್​ ನೀಡಿದ ಪೊಲೀಸರು
author img

By

Published : Mar 6, 2021, 11:28 AM IST

ನವದೆಹಲಿ: ಜನವರಿ 26 ರಂದು ನಡೆದ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಭಾಗವಹಿಸಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಡಿ ಕಳೆದ ವರ್ಷ ಡಿಸೆಂಬರ್ 31 ರಂದು ಮೃತಪಟ್ಟ ವ್ಯಕ್ತಿಯ ವಿರುದ್ಧ ದೆಹಲಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿರುವ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ.

Crime branch sends legal notice to dead farmer for inciting violence
ಮರಣ ಹೊಂದಿದ್ದ ವ್ಯಕ್ತಿಗೆ ನೋಟಿಸ್​ ನೀಡಿದ ಪೊಲೀಸರು

ಸೋಶಿಯಲ್ ಮೀಡಿಯಾದಲ್ಲಿ ಮೃತರಿಗೆ ಪೊಲೀಸರು ನೋಟಿಸ್​ ನೀಡಿರುವುದು ವೈರಲ್​ ಆದ ಬಳಿಕ ಟ್ವೀಟ್ ಮಾಡಿ ಪೊಲೀಸರು ಸ್ಪಷ್ಟೀಕರಣ ನೀಡಿದ್ದಾರೆ. ದೆಹಲಿ ಪೊಲೀಸರ ಪ್ರಕಾರ, ಫೆಬ್ರವರಿ 23 ರಂದು ಮೂವರು ಸಹೋದರರಾದ ಜಾಗೀರ್ ಸಿಂಗ್, ಸುರ್ಜೀತ್ ಸಿಂಗ್ ಮತ್ತು ಗುರುಚರಣ್ ಸಿಂಗ್ ಎಂಬುವವರಿಗೆ ಹಿಂಸಾಚಾರಕ್ಕೆ ಪ್ರಚೋದನೆಗಾಗಿ ಅವರಿಗೆ ನೋಟಿಸ್ ನೀಡಲಾಗಿದೆ. ಆದರೆ, ಫೆಬ್ರವರಿ 23 ರಂದು ನೋಟಿಸ್ ಕಳುಹಿಸಿದ ನಂತರ ಜಗೀರ್ ಸಿಂಗ್ ನಿಧನರಾಗಿದ್ದಾರೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಟ್ರ್ಯಾಕ್ಟರ್ ಸಂಖ್ಯೆ ಪಿಬಿ 27 6306 ಅನ್ನು ಬಹಿರಂಗಪಡಿಸಿದ ಪಂಜಾಬ್ ನೋಂದಣಿ ಪ್ರಾಧಿಕಾರವು ನಿರ್ವಹಿಸುತ್ತಿರುವ ಮಾಲೀಕತ್ವದ ದಾಖಲೆಗಳ ಆಧಾರದ ಮೇಲೆ ನೋಟಿಸ್ ನೀಡಲಾಗಿದೆ. ಜಾಗೀರ್, ಸುರ್ಜಿತ್ ಮತ್ತು ಗುರ್ಚರನ್ ಸಿಂಗ್ ಮೂರು ವ್ಯಕ್ತಿಗಳಿಗೆ ಸೇರಿದೆ. ಗಣರಾಜ್ಯೋತ್ಸವದ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಬಳಸಿದ ಟ್ರ್ಯಾಕ್ಟರ್ ಆಧಾರದ ಮೇಲೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.