ETV Bharat / bharat

ಮುಂದುವರಿದ ನೆರವು: ವಿದೇಶದಿಂದ ಭಾರತಕ್ಕೆ ಬಂದ ವೈದ್ಯಕೀಯ ಉಪಕರಣ

author img

By

Published : May 12, 2021, 10:50 PM IST

ದಕ್ಷಿಣ ಕೊರಿಯಾದ 200 ಆಮ್ಲಜನಕ ಸಾಂದ್ರಕಗಳು ಸೇರಿದಂತೆ ವೈದ್ಯಕೀಯ ಉಪಕರಣಗಳನ್ನು ಹೊತ್ತ ವಿಮಾನ ಇಂದು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದೆ. ಕೊರಿಯಾ ಗಣರಾಜ್ಯದ ಸಹಕಾರ ಮುಂದುವರಿದಿದೆ ಎಂದು ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ವಿದೇಶದಿಂದ ಭಾರತಕ್ಕೆ ಬಂದ ವೈದ್ಯಕೀಯ ಉಪಕರಣ
ವಿದೇಶದಿಂದ ಭಾರತಕ್ಕೆ ಬಂದ ವೈದ್ಯಕೀಯ ಉಪಕರಣ

ರಾಯ್ಪುರ್​​​ (ಛತ್ತೀಸ್​ಗಢ): ಭಾರತಕ್ಕೆ ಕೋವಿಡ್ ನೆರವಿನ ಹಸ್ತವಾಗಿ 200 ಆಕ್ಸಿಜನ್ ಕಾನ್ಸನ್​ಟ್ರೇಟರ್​​​​​​ ಹೊತ್ತ ಭಾರತೀಯ ವಾಯುಪಡೆಯ ವಿಮಾನ ಇಂಗ್ಲೆಂಡ್​​ನಿಂದ ಆಗಮಿಸಿದೆ.

ಐಎಎಫ್ ಸಿ -130 ವಿಮಾನ ಯುನೈಟೆಡ್ ಕಿಂಗ್​ಡಮ್​ ಸರ್ಕಾರದಿಂದ ಕೊಡುಗೆಯಾಗಿ 200 ಆಮ್ಲಜನಕ ಸಾಂದ್ರಕಗಳೊಂದಿಗೆ ಬಂದಿಳಿದಿದೆ ಎಂದು ರಾಯ್ಪುರ ವಿಮಾನ ನಿಲ್ದಾಣದ ನಿರ್ದೇಶಕ ರಾಕೇಶ್ ರಂಜನ್ ಸಹಯ್ ಮಾಹಿತಿ ನೀಡಿದ್ದಾರೆ. ಅಂತೆಯೇ ನೆದರ್​​ಲ್ಯಾಂಡ್​ ಮತ್ತು ಸ್ವಿಟ್ಜಲ್ಯಾಂಡ್​​ನಿಂದ ವೈದ್ಯಕೀಯ ನೆರವಿನ ವಿಮಾನವೂ ಸಹ ದೆಹಲಿ ವಿಮಾನ ನಿಲ್ದಾಣ ತಲುಪಿದೆ.

ದಕ್ಷಿಣ ಕೊರಿಯಾದ 200 ಆಮ್ಲಜನಕ ಸಾಂದ್ರಕಗಳು ಸೇರಿದಂತೆ ವೈದ್ಯಕೀಯ ಉಪಕರಣಗಳನ್ನು ಹೊತ್ತ ವಿಮಾನ ಇಂದು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಕೊರಿಯಾ ಗಣರಾಜ್ಯದ ಸಹಕಾರ ಮುಂದುವರಿದಿದೆ ಎಂದು ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ಹೆಚ್ಚುತ್ತಿರುವ ಕೊರನಾ ವೈರಸ್ ಪ್ರಕರಣಗಳಿಂದಾಗಿ ಆರೋಗ್ಯ ಮೂಲಸೌಕರ್ಯ ಅಗತ್ಯತೆಗಳ ಹೆಚ್ಚಳದೊಂದಿಗೆ ಭಾರತವು ನಿರಂತರವಾಗಿ ಹೋರಾಡುತ್ತಿರುವುದರಿಂದ ವಿಶ್ವದಾದ್ಯಂತ ಹಲವಾರು ದೇಶಗಳು ಸಹಾಯ ಮಾಡಲು ಮುಂದೆ ಬಂದಿವೆ. ಅಲ್ಲದೇ ಈಗಾಗಲೇ ವಿಶ್ವದ ಹಲವು ದೇಶಗಳು ಅಗತ್ಯ ನೆರವಿನ ಹಸ್ತ ಚಾಚಿವೆ.

ಇದನ್ನೂ ಓದಿ: ಮೇ 16ಕ್ಕೆ ಕರ್ನಾಟಕ ಕೇರಳಕ್ಕೆ ಅಪ್ಪಳಿಸಲಿದೆ ಚಂಡಮಾರುತ: ಮುಂಬೈಗೆ ಹವಾಮಾನ ಇಲಾಖೆ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.