ETV Bharat / bharat

Pornography Case: ನಟಿ ಗೆಹಾನಾ ವಸಿಷ್ಠ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿದ ಕೋರ್ಟ್​

author img

By

Published : Aug 12, 2021, 3:13 PM IST

ಅಶ್ಲೀಲ ಚಿತ್ರ ಪ್ರಕರಣ(Pornography Case)ದಲ್ಲಿ ಈ ವರ್ಷದ ಆರಂಭದಲ್ಲಿ ಬಂಧನಕ್ಕೊಳಗಾಗಿದ್ದ ನಟಿ ಗೆಹಾನಾ ವಸಿಷ್ಠ ಅವರು ಸಲ್ಲಿಸಿದ್ದ ಬಂಧನ ಪೂರ್ವ ನಿರೀಕ್ಷಣಾ ಜಾಮೀನನ್ನು ತಿರಸ್ಕರಿಸಲಾಗಿದೆ.

Court rejects actress Gehana Vasisth's pre-arrest anticipatory bail plea
ನಟಿ ಗೆಹಾನಾ ವಸಿಷ್ಠ ರ ಪೂರ್ವ ಬಂಧನ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿದ ನ್ಯಾಯಾಲಯ

ಮುಂಬೈ: ಅಶ್ಲೀಲ ಚಿತ್ರ ಪ್ರಕರಣದಲ್ಲಿ ಈ ವರ್ಷದ ಆರಂಭದಲ್ಲಿ ಬಂಧನಕ್ಕೊಳಗಾಗಿದ್ದ ನಟಿ ಗೆಹಾನಾ ವಸಿಷ್ಠ ಅವರು ಸಲ್ಲಿಸಿದ್ದ ಬಂಧನ ಪೂರ್ವ ನಿರೀಕ್ಷಣಾ ಜಾಮೀನನ್ನು ಮುಂಬೈನ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ. ಎಫ್‌ಐಆರ್ ಅನ್ನು ಮುಂಬೈ ಅಪರಾಧ ವಿಭಾಗಕ್ಕೆ ವರ್ಗಾಯಿಸಿದೆ.

ಅಶ್ಲೀಲ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿಯಲ್ಲಿ ಗೆಹಾನಾ ಅವರನ್ನು ಮುಂಬೈ ಸಿಸಿಬಿ ತಂಡ ವಶಕ್ಕೆ ಪಡೆದಿತ್ತು. ವರದಿಯ ಪ್ರಕಾರ ಪೊಲೀಸರು ಗೆಹಾನಾ ಜೊತೆಗೆ ಮೂವರು ಪುರುಷರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಈ ನಟಿ ಕಾಮಪ್ರಚೋದಕ ವಿಡಿಯೋಗಳನ್ನು ಮಾತ್ರ ಚಿತ್ರೀಕರಿಸಿದ್ದಾರೆ ಎಂದಿರುವ ಗೆಹಾನಾ ಪರ ವಕೀಲರು ಪೊಲೀಸರ ಆರೋಪಗಳನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿ: Porn Racket ದಂಧೆ ಆರೋಪ: ಬೆಂಗಾಲಿ ನಟಿ ನಂದಿತಾ ದತ್ತ ಅರೆಸ್ಟ್​

87 ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿದ ನಂತರ ಗೆಹಾನಾಳನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಅದನ್ನು ಆಕೆ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದಳು. ಅಕೆ ಬಂಧನದ ನಂತರ ವೆಬ್​ಸೈಟ್ ನ ಫ್ಲಿನ್ ರೆಮಿಡಿಯೋಸ್ ಪ್ರತಿಕ್ರಿಯೆ ನೀಡಿ, ಗೆಹಾನಾ ಕಂಪನಿಯ ಜಿವಿ ಸ್ಟುಡಿಯೋಸ್ ನಿರ್ಮಿಸಿದ ಮತ್ತು ನಿರ್ದೇಶಿಸಿದ ವಿಡಿಯೋಯೊಗಳನ್ನು ಹೆಚ್ಚೆಂದರೆ ಶೃಂಗಾರ ಎಂದು ವರ್ಗೀಕರಿಸಬಹುದು ಎಂದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.