ETV Bharat / bharat

ಲಿಫ್ಟ್‌ನಲ್ಲಿ ನಾಯಿ ಕರೆದೊಯ್ಯುವ ವಿಚಾರ: ಮಹಿಳೆ - ನಿವೃತ್ತ ಐಎಎಸ್​ ಅಧಿಕಾರಿ ಮಧ್ಯೆ ಹೊಡೆದಾಟ!

author img

By ETV Bharat Karnataka Team

Published : Oct 31, 2023, 2:08 PM IST

ಲಿಫ್ಟ್‌ನಲ್ಲಿ ನಾಯಿಯನ್ನು ಕರೆದೊಯ್ಯುವುದರ ಬಗ್ಗೆ ನಿವೃತ್ತ ಐಎಎಸ್ ಅಧಿಕಾರಿ ಮತ್ತು ಮಹಿಳೆ ಮಧ್ಯೆ ವಾಗ್ವಾದ ಹಾಗೂ ಮಾರಾಮಾರಿ ನಡೆದಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ಸದ್ಯ ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗ್ತಿದೆ.

Controversy over carrying dog in lift in Noida  Retired IAS and couple fight  Retired IAS and couple fight in Noida  ಲಿಫ್ಟ್‌ನಲ್ಲಿ ನಾಯಿ ಕರೆದೊಯ್ಯುವ ವಿಚಾರ  ಮಹಿಳೆ ನಿವೃತ್ತ ಐಎಎಸ್​ ಅಧಿಕಾರಿ ಮಧ್ಯೆ ಹೊಡೆದಾಟ  ಅಧಿಕಾರಿ ಮತ್ತು ಮಹಿಳೆ ಮಧ್ಯೆ ವಾಗ್ವಾದ ಹಾಗೂ ಮಾರಾಮಾರಿ  ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್  ನೋಯ್ಡಾದಲ್ಲಿ ಮತ್ತೊಮ್ಮೆ ವಿವಾದ  ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಮಹಿಳೆಯ ನಡುವಿನ ಜಗಳ  ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಮಹಿಳೆ-ನಿವೃತ್ತ ಐಎಎಸ್​ ಅಧಿಕಾರಿ ಮಧ್ಯೆ ಹೊಡೆದಾಟ

ಮಹಿಳೆ-ನಿವೃತ್ತ ಐಎಎಸ್​ ಅಧಿಕಾರಿ ಮಧ್ಯೆ ಹೊಡೆದಾಟ

ನವದೆಹಲಿ/ನೋಯ್ಡಾ: ಪಾಶ್ ಸೊಸೈಟಿಯ ಲಿಫ್ಟ್‌ನಲ್ಲಿ ನಾಯಿಯನ್ನು ಕರೆದೊಯ್ಯುವ ಕುರಿತು ನೋಯ್ಡಾದಲ್ಲಿ ಮತ್ತೊಮ್ಮೆ ವಿವಾದವೊಂದು ಬೆಳಕಿಗೆ ಬಂದಿದೆ. ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಮಹಿಳೆಯ ನಡುವಿನ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆ ಮತ್ತು ನಿವೃತ್ತ ಐಎಎಸ್ ಅಧಿಕಾರಿಯ ನಡುವೆ ನಡೆದಿರುವ ಜಗಳ ವಿಡಿಯೋದಲ್ಲಿ ಕಾಣಬಹುದಾಗಿದೆ. ಅಷ್ಟೇ ಅಲ್ಲ ಸ್ವಲ್ಪ ಸಮಯದ ನಂತರ ಮಹಿಳೆಯ ಪತಿ ಸಹ ಜಗಳದ ಸ್ಥಳಕ್ಕೆ ಬಂದು ನಿವೃತ್ತ ಐಎಎಸ್ ಅಧಿಕಾರಿಗೆ ಥಳಿಸಿದ್ದಾರೆ. ದೆಹಲಿಯ ಪಾರ್ಕ್ಸ್ ಲಾರೆಟ್ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಆದರೆ ಈ ಘಟನೆಯ ನಂತರ ಎರಡೂ ಕಡೆಯವರು ಸಮಾಧಾನಗೊಂಡಿವೆ ಎಂದು ವರದಿಯಾಗಿದೆ.

ಮಾಹಿತಿಯ ಪ್ರಕಾರ, ಮಹಿಳೆ ತನ್ನೊಂದಿಗೆ ನಾಯಿಯನ್ನು ಲಿಫ್ಟ್‌ನಲ್ಲಿ ಕರೆದೊಯ್ಯಲು ಬಯಸಿದ್ದರು. ಆದರೆ ನಿವೃತ್ತ ಐಎಎಸ್ ಅಧಿಕಾರಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ನಾಯಿಯನ್ನು ಲಿಫ್ಟ್‌ನಲ್ಲಿ ಬಿಡುವುದಕ್ಕೆ ನಿವೃತ್ತ ಐಎಎಸ್ ಅಧಿಕಾರಿ ತೀವ್ರ ವಿರೋಧಿಸಿದರು. ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ. ವಾಗ್ವಾದದ ವೇಳೆ ನಿವೃತ್ತ ಐಎಎಸ್ ಅಧಿಕಾರಿ ತಮ್ಮ ಪಾಕೆಟ್​ನಿಂದ ಮೊಬೈಲ್ ತೆಗೆದಿದ್ದಾರೆ. ಕೂಡಲೇ ಆ ಮಹಿಳೆ ಅವರಿಂದ ಮೊಬೈಲ್ ಕಸಿದುಕೊಂಡಿದ್ದಾರೆ. ಇದರಿಂದ ಕೋಪಗೊಂಡ ನಿವೃತ್ತ ಐಎಎಸ್ ಅಧಿಕಾರಿ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಆರೋಪವಿದೆ.

ಮಹಿಳೆಗೆ ಕಪಾಳಮೋಕ್ಷ ಮಾಡಿದ ಬಳಿದ ಈ ವಿವಾದವನ್ನು ಮತ್ತಷ್ಟು ಹೆಚ್ಚಿದೆ. ಅಕ್ಕಪಕ್ಕದ ಜನ ಕೂಡ ಸ್ಥಳದಲ್ಲಿ ಜಮಾಯಿಸಿದರು. ಆಗ ಆ ಮಹಿಳೆಯ ಗಂಡನೂ ಸಹ ಅಲ್ಲಿಗೆ ಬಂದಿದ್ದಾರೆ. ಆಗ ಮಹಿಳೆ ತನ್ನ ಪತಿಯೊಂದಿಗೆ ಸೇರಿ ನಿವೃತ್ತ ಐಎಎಸ್‌ಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಕೊತ್ವಾಲಿ ಸೆಕ್ಟರ್ -39 ರ ಪೊಲೀಸ್ ತಂಡವು ಸ್ಥಳಕ್ಕೆ ದೌಡಾಯಿಸಿತು. ಬಳಿಕ ಪೊಲೀಸರು ಸೊಸೈಟಿಯಲ್ಲಿ ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಈ ವೇಳೆ ಎರಡೂ ಕಡೆ ಮಾತಿನ ಚಕಮಕಿ, ಮಾರಾಮಾರಿ ನಡೆದಿರುವುದು ಬೆಳಕಿಗೆ ಬಂದಿತು. ಆದರೆ, ಈ ವಿಚಾರದಲ್ಲಿ ಉಭಯ ಪಕ್ಷಗಳು ಯಾವುದೇ ದೂರು ನೀಡಿಲ್ಲ. ತಮ್ಮ ತಮ್ಮಲ್ಲೇ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದರಿಂದ ವಿಷಯ ಅಲ್ಲಿಗೆ ಮುಕ್ತಾಯಗೊಂಡಿದೆ. ಆದರೆ ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದ್ದು, ಸಂಚಲನ ಮೂಡಿಸುತ್ತಿದೆ.

ಓದಿ: ಪೊಲೀಸ್ ಇಲಾಖೆಗೆ ಕಾನ್ಸ್​​ಟೇಬಲ್​​​​​​​​​ನಿಂದ ವಿಶೇಷ ಬೆಲ್ಜಿಯಂ ತಳಿಯ ನಾಯಿ ಮರಿ ಉಡುಗೊರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.