ETV Bharat / bharat

ತೆಲಂಗಾಣದಲ್ಲಿ ಕಾಂಗ್ರೆಸ್ ಜಯಭೇರಿ: ಸಿಎಂ ಹುದ್ದೆಗಾಗಿ ಪೈಪೋಟಿ ಆರಂಭ

author img

By ETV Bharat Karnataka Team

Published : Dec 3, 2023, 2:32 PM IST

Updated : Dec 3, 2023, 4:37 PM IST

Race for CM's post begins in Telangana Congress: ತೆಲಂಗಾಣ ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ.

Race for CM's post begins in Telangana Congress
Race for CM's post begins in Telangana Congress

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತಿದ್ದಂತೆಯೇ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ರೇಸ್ ಪ್ರಾರಂಭವಾಗಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಎ. ರೇವಂತ್ ರೆಡ್ಡಿ ಪಕ್ಷದ ವಿಜಯೋತ್ಸವ ಆಚರಿಸಲು ಗಾಂಧಿ ಭವನದವರೆಗೆ ರ್ಯಾಲಿ ನಡೆಸಿದ್ದು ಗಮನಾರ್ಹವಾಗಿದೆ. ರ್ಯಾಲಿ ಮೂಲಕ ಗಾಂಧಿ ಭವನಕ್ಕೆ ಬಂದ ರೇವಂತ್ ರೆಡ್ಡಿ ಅವರನ್ನು ಡಿಜಿಪಿ ಅಂಜನಿ ಕುಮಾರ್ ಮತ್ತು ಇತರ ಅಧಿಕಾರಿಗಳು ಭೇಟಿಯಾಗಿದ್ದು ಬಹಳ ವಿಶೇಷವಾಗಿದೆ. ನಲ್ಗೊಂಡ ಮತ್ತು ಖಮ್ಮಮ್ ಜಿಲ್ಲೆಗಳ ಮುಂಚೂಣಿ ಕಾಂಗ್ರೆಸ್ ಮುಖಂಡರಾದ ಉತ್ತಮ್ ಕುಮಾರ್ ರೆಡ್ಡಿ, ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಮತ್ತು ಮಲ್ಲು ಭಟ್ಟಿ ವಿಕ್ರಮಾರ್ಕ ಇವರೆಲ್ಲ ಕೂಡ ಸಿಎಂ ಹುದ್ದೆಯ ರೇಸ್​ನಲ್ಲಿದ್ದಾರೆ.

ಪಕ್ಷದ ಗೆಲುವಿನ ಸಂಭ್ರಮವನ್ನು ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಹೈದರಾಬಾದ್​ನಲ್ಲಿ ಕಾಂಗ್ರೆಸ್​​ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಸಂಸದ ರಾಹುಲ್ ಗಾಂಧಿ ಮತ್ತು ಪಕ್ಷದ ರಾಜ್ಯ ಅಧ್ಯಕ್ಷ ರೇವಂತ್ ರೆಡ್ಡಿ ಅವರ ಪೋಸ್ಟರ್​ಗಳಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ.

ಮತ್ತೊಂದಡೆ, ಪಕ್ಷದ ಕಚೇರಿ ಮತ್ತು ಹೈದರಾಬಾದ್​ನ ರೇವಂತ್ ರೆಡ್ಡಿ ಅವರ ಮನೆಯ ಹೊರಗೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ನೃತ್ಯ ಮಾಡುತ್ತಿದ್ಧಾರೆ. 2024 ರಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ತೆಲಂಗಾಣ ಚುನಾವಣಾ ಫಲಿತಾಂಶವು ಕಾಂಗ್ರೆಸ್​ಗೆ ನಿರ್ಣಾಯಕವಾಗಿದೆ. ಕರ್ನಾಟಕ ಮತ್ತು ತೆಲಂಗಾಣದಲ್ಲಿನ ಗೆಲುವು ದಕ್ಷಿಣದಲ್ಲಿ ಕಾಂಗ್ರೆಸ್​ನ ಅಸ್ತಿತ್ವ ಬಲಪಡಿಸಲು ಸಹಕಾರಿಯಾಗಲಿದೆ.

ಸರ್ಕಾರ ರಚಿಸಲು ಸಜ್ಜಾಗಿರುವ ಕಾಂಗ್ರೆಸ್ ಪಕ್ಷ, ಆರು ತಿಂಗಳ ಮುಂಚೆ ರಾಜ್ಯದಲ್ಲಿ ಇಷ್ಟೊಂದು ಬಲವಾಗಿರಲೇ ಇಲ್ಲ. ಬಿಆರ್​ಎಸ್​ ಶಾಸಕರ ವಿರುದ್ಧ ಕ್ಷೇತ್ರ ಮಟ್ಟದಲ್ಲಿ ಕಂಡು ಬಂದ ಆಡಳಿತ ವಿರೋಧಿ ಅಲೆ, ಬಿಜೆಪಿಯಲ್ಲಿ ಬಂಡಿ ಸಂಜಯ್ ಬದಲಾವಣೆಯಿಂದಾದ ಗೊಂದಲಗಳ ಬಳಿಕ ತೆಲಂಗಾಣದಲ್ಲಿ ಕಾಂಗ್ರೆಸ್​​ ಮತ್ತೊಂದು ಪ್ರಬಲ ಶಕ್ತಿಯಾಗಿ ಹೋರಾಟಕ್ಕಿಳಿದಿತ್ತು. ​​ಕರ್ನಾಟಕದಲ್ಲಿ ತನಗೆ ಸಿಕ್ಕ ಗೆಲುವಿನ ನಂತರ ಸ್ಫೂರ್ತಿ ಪಡೆದಿದ್ದ ತೆಲಂಗಾಣ ಕಾಂಗ್ರೆಸ್​ ಒಗ್ಗಟ್ಟಿನ ಮತ್ತು ಗೆಲುವಿನ ಉತ್ಸಾಹದೊಂದಿಗೆ ಮತದಾರರ ಬಳಿ ತೆರಳಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

  • #WATCH | Hyderabad, Telangana: Karnataka Deputy CM DK Shivakumar says, "We have called the MLAs by this evening. All the MLAs are coming. We will meet them and then go as per the decision of the party's high command. There are no differences. All are united...there is no threat… pic.twitter.com/weuvtHzfTS

    — ANI (@ANI) December 3, 2023 " class="align-text-top noRightClick twitterSection" data=" ">

ಎಐಸಿಸಿ ವೀಕ್ಷಕರಾಗಿ ತೆಲಂಗಾಣದಲ್ಲಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ , ತಮ್ಮ ಪಕ್ಷದ ಶಾಸಕರನ್ನು ಬೇರೆ ಪಕ್ಷಗಳು ಸೆಳೆಯವ ಪ್ರಯತ್ನ ಮಾಡಬಹುದು ಎಂಬ ಸಾಧ್ಯತೆಯ ಬಗ್ಗೆ ಮಾತನಾಡಿ, ಕಾಂಗ್ರೆಸ್​ನ ಒಬ್ಬನೇ ಒಬ್ಬ ಶಾಸಕನೂ ಪಕ್ಷ ಬಿಟ್ಟು ಹೋಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ತೆಲಂಗಾಣ ಜನತೆಯ ಆಕಾಂಕ್ಷೆ ಈಡೇರಿಸಲಿದೆ ಕಾಂಗ್ರೆಸ್: ರೇವಂತ್ ರೆಡ್ಡಿ

Last Updated : Dec 3, 2023, 4:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.