ETV Bharat / bharat

Pegasus: ಕೇಂದ್ರದ ವಿರುದ್ಧ ಕೈ ನಾಯಕರ ವಾಕ್ಸಮರ.. ನ್ಯಾಯಾಂಗ ತನಿಖೆಗೆ ಆಗ್ರಹ

author img

By

Published : Jul 20, 2021, 12:18 PM IST

ಪೆಗಾಸಸ್(Pegasus)​ ವಿವಾದವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.

ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಒತ್ತಾಯ
ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಒತ್ತಾಯ

ತಿರುವನಂತಪುರಂ (ಕೇರಳ): ಪೆಗಾಸಸ್(Pegasus) ಕಣ್ಗಾವಲು ತಂತ್ರಾಂಶ ವಿವಾದ ಸಂಬಂಧ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮುಗಿಬೀಳುತ್ತಿವೆ. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೂ ಭಾಗಿಯಾಗಿದ್ದಾರೆಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.

‘ಸಮಗ್ರ ತನಿಖೆ ನಡೆಸಿ’

ಕೇರಳ ವಿಧಾನಸಭಾ ಪ್ರತಿಪಕ್ಷ ನಾಯಕ ರಮೇಶ್​ ಚೆನ್ನಿಥಾಲಾ, ಫೋನ್​ ಟ್ಯಾಪಿಂಗ್​ ಗಂಭೀರವಾದ ಪ್ರಕರಣವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಈ ಎಲ್ಲಾ ಆರೋಪಗಳಿಗೆ ಪ್ರಧಾನಿ ಸ್ಪಷ್ಟನೆ ನೀಡಿ, ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಬೇಕೆಂದು ಒತ್ತಾಯಿಸಿದ್ದಾರೆ.

‘ನಮೋ ಮೇಲೆ ಶಂಕೆ’

ಇಸ್ರೇಲ್ ಮೂಲದ ಎನ್‌ಎಸ್‌ಒ ಅಭಿವೃದ್ಧಿಪಡಿಸಿದ ಪೆಗಾಸಸ್ ಸಾಫ್ಟ್‌ವೇರ್ ಅನ್ನು ಸರ್ಕಾರಿ ಸಂಸ್ಥೆಗಳು ಮಾತ್ರ ಬಳಸಲು ಅಧಿಕಾರವಿದೆ. ಹಾಗಾಗಿ, ಈ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವಿರಬಹುದು ಎಂದು ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎಸ್. ಅಲಗಿರಿ ಶಂಕ ವ್ಯಕ್ತಪಡಿಸಿದ್ದಾರೆ.

ಜನರಿಂದ ಚುನಾಯಿತವಾದ ಸರ್ಕಾರವು ಸರ್ವಾಧಿಕಾರಿ ಆಡಳಿತವಾಗಿ ಮಾರ್ಪಟ್ಟಿದೆ. ಪತ್ರಕರ್ತರು, ನ್ಯಾಯಾಧೀಶರು, ಪ್ರತಿಪಕ್ಷಗಳ ನಾಯಕರ ಮೊಬೈಲ್​​ ಫೋನ್​ಗಳ ಮೇಲೆ ಕಣ್ಣಿಡಲು ಅವರಿಗೆ ಬೆದರಿಕೆಯೊಡ್ಡಲು ಕೇಂದ್ರ ಸರ್ಕಾರ ಈ ಮಾರ್ಗ ಅನುಸರಿಸಿದೆ ಎಂದು ಅಲಗಿರಿ ಆರೋಪಿಸಿದ್ದಾರೆ.

‘ಸಚಿವ ವೈಷ್ಣವ್​ ಉತ್ತರ ಕೊಡಬೇಕು’

ಪೆಗಾಸಸ್‌ನ ಮಾಲೀಕರಾದ ಎನ್‌ಎಸ್‌ಒ ಗ್ರೂಪ್, ತನ್ನ ತಂತ್ರಜ್ಞಾನಗಳನ್ನು ಕೇವಲ ಕಾನೂನು ಜಾರಿ ಮತ್ತು ಸರ್ಕಾರಗಳ ಗುಪ್ತಚರ ಸಂಸ್ಥೆಗಳಿಗೆ ಮಾರುತ್ತದೆ ಎಂದು ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ. ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ಸಚಿವರಾದ ಬೆನ್ನಲ್ಲೇ ಐಟಿ ಸಚಿವ ವೈಷ್ಣವ್ ಇಂಥ ದುಷ್ಕೃತ್ಯಗಳಲ್ಲಿ ತೊಡಗಿರುವುದು ದುರದೃಷ್ಟಕರ. ಸರ್ಕಾರವು ಪೆಗಾಸಸ್​ ಸಾಫ್ಟ್​ವೇರ್​ ಅಥವಾ ಸ್ಪೈವೇರ್​ ಅನ್ನು ಸ್ವಾಧೀನಪಡಿಸಿಕೊಂಡಿದೆಯೇ ಎಂಬುದನ್ನು ವೈಷ್ಣವ್ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

  • मंत्री जी को एक साधारण प्रश्न का उत्तर देना चाहिए: क्या सरकार ने पेगासस सॉफ्टवेयर/स्पाइवेयर हासिल किया?

    — P. Chidambaram (@PChidambaram_IN) July 19, 2021 " class="align-text-top noRightClick twitterSection" data=" ">

‘ನ್ಯಾಯಾಂಗ ತನಿಖೆ ನಡೆಸಿ’

ಪೆಗಾಸಸ್ ವಿವಾದವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿಬೇಕು. ಇದು ಭಾರತೀಯ ಪ್ರಚಾಪ್ರಭತ್ವದ ಮೇಲೆ ಈವರೆಗೆ ನಡೆದಿರುವ ಮಾರಣಾಂತಿಕ ದಾಳಿ ಎಂದು ಕರ್ನಾಟಕ ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಹೇಳಿದ್ದಾರೆ.

ಇದನ್ನೂ ಓದಿ:Pegasus​ ತಂತ್ರಾಂಶ ವಿವಾದಕ್ಕೆ ಕಲಾಪಗಳು ಬಲಿ: ಮಧ್ಯಾಹ್ನಕ್ಕೆ ಮುಂದೂಡಿಕೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.