ಕೋಮುವಾದ, ಹಿಂಸಾಚಾರ ಎಲ್ಲಿಂದ ಬಂದರೂ ಒಂದೇ ಆಗಿರುತ್ತದೆ: ಪಿಎಫ್​ಐ ಮೇಲೆ ಎನ್​ಐಎ ದಾಳಿ ಕುರಿತು ರಾಹುಲ್​ ಸ್ಪಷ್ಟ ನುಡಿ

author img

By

Published : Sep 22, 2022, 4:12 PM IST

Updated : Sep 22, 2022, 4:25 PM IST

congress-leader-rahul-gandhi-reaction-about-nia-raids-on-pfi

ಕೋಮುವಾದ ಮತ್ತು ಹಿಂಸಾಚಾರ ಎಲ್ಲಿಂದ ಬಂದರೂ ಒಂದೇ ಆಗಿರುತ್ತದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸ್ಪಷ್ಟವಾಗಿ ಹೇಳಿದ್ದಾರೆ.

ಕೊಚ್ಚಿ (ಕೇರಳ): ಎಲ್ಲ ರೀತಿಯ ಕೋಮುವಾದ ಮತ್ತು ಹಿಂಸಾಚಾರ ಒಂದೇ. ಅವು ಎಲ್ಲಿಂದ ಬಂದರೂ ಒಂದೇ ಆಗಿರುತ್ತವೆ. ಅದರ ವಿರುದ್ಧ ಹೋರಾಡಬೇಕು. ಶೂನ್ಯ ಸಹಿಷ್ಣುತೆ ಇರಬೇಕೆಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ. ಪಿಎಫ್​ಐ ಕಚೇರಿಗಳು ಮತ್ತು ಅದರ ನಾಯಕರ ಮೇಲೆ ಎನ್​ಐಎ ದಾಳಿ ಕುರಿತಾದ ಪ್ರಶ್ನೆಗೆ ರಾಹುಲ್​ ಈ ಉತ್ತರ ನೀಡುವ ಮೂಲಕ ಪರೋಕ್ಷವಾಗಿ ಎನ್​ಐಎ ದಾಳಿಯನ್ನು ಬೆಂಬಲಿಸಿದ್ದಾರೆ.

  • On being asked about raids on PFI offices & leaders' residences, Congress MP Rahul Gandhi said, "all forms of communalism & violence, regardless of where they come from, are the same & should be combated. There should be zero tolerance." pic.twitter.com/DFlNOY5iDR

    — ANI (@ANI) September 22, 2022 " class="align-text-top noRightClick twitterSection" data=" ">

ಭಾರತ್​ ಜೋಡೋ ಯಾತ್ರೆ ಭಾಗವಾಗಿ ಕೇರಳದ ಕೊಚ್ಚಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದ ಸಾಂಸ್ಥಿಕ ಚೌಕಟ್ಟನ್ನು ಹಿಡಿದಿಟ್ಟುಕೊಂಡಿರುವ ಯಂತ್ರದೊಂದಿಗೆ ನಾವು ಹೋರಾಡುತ್ತಿದ್ದೇವೆ. ಅದು ಅನಿಯಮಿತ ಹಣದ ಮೂಲಕ ಜನರನ್ನು ಖರೀದಿಸುವ ಹಾಗೂ ಒತ್ತಡ ಹೇರಿ ಬೆದರಿಸುವ ಕೆಲಸ ಮಾಡುತ್ತಿದೆ. ಅದರ ಫಲಿತಾಂಶವನ್ನು ನೀವು ಗೋವಾದಲ್ಲಿ ನೋಡಿದ್ದೀರಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

  • #WATCH | Rahul Gandhi, on being asked about a piece of advice he'd give to next Cong chief says, "you're taking on a historic position that defines a particular view of India. Congress chief is an ideological post. You represent a set of ideas, a belief system & vision of India." pic.twitter.com/n4oTOX38HX

    — ANI (@ANI) September 22, 2022 " class="align-text-top noRightClick twitterSection" data=" ">

ಇದನ್ನೂ ಓದಿ: ದೇಶಾದ್ಯಂತ ಎನ್‌ಐಎ ದಾಳಿ: 100ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರ ಬಂಧನ

ಇದೇ ವೇಳೆ, ಕಾಂಗ್ರೆಸ್​ ಅಧ್ಯಕ್ಷ ಸ್ಥಾನ ಹಾಗೂ ಚುನಾವಣೆಗೆ ಬಗ್ಗೆ ಮಾತನಾಡಿದ ರಾಹುಲ್​, ಕಾಂಗ್ರೆಸ್​​ ಅಧ್ಯಕ್ಷ ಹುದ್ದೆಯು ಭಾರತದ ನಿರ್ದಿಷ್ಟ ದೃಷ್ಟಿಕೋನವನ್ನು ವ್ಯಾಖ್ಯಾನಿಸುವ ಐತಿಹಾಸಿಕ ಸ್ಥಾನ. ಅಲ್ಲದೇ, ಅದು ಒಂದು ಸೈದ್ಧಾಂತಿಕ ಹುದ್ದೆ. ಜೊತೆಗೆ ಒಂದು ನಂಬಿಕೆ ವ್ಯವಸ್ಥೆ ಮತ್ತು ಭಾರತದ ದೃಷ್ಟಿಕೋನ. ಅದರ ಆಲೋಚನೆಗಳನ್ನು ಕಾಂಗ್ರೆಸ್​ ಅಧ್ಯಕ್ಷ ಸ್ಥಾನ ಪ್ರತಿನಿಧಿಸುತ್ತದೆ ಎಂದರು.

  • Kerala | What we had decided in Udaipur (One Person, One Post) is a commitment of Congress & I expect that commitment will be maintained (on party's presidential post), said Congress MP Rahul Gandhi pic.twitter.com/fyyeCk147h

    — ANI (@ANI) September 22, 2022 " class="align-text-top noRightClick twitterSection" data=" ">

ಜೊತೆಗೆ ಉದಯಪುರದಲ್ಲಿ ನಡೆದ ಸಭೆಯಲ್ಲಿ ಒಬ್ಬ ವ್ಯಕ್ತಿ, ಒಂದು ಹುದ್ದೆ ಎಂಬುವುದು ಕಾಂಗ್ರೆಸ್‌ನ ಬದ್ಧತೆ ಘೋಷಿಸಿದ್ದೇವೆ. ಆ ಬದ್ಧತೆಯನ್ನು ಪಕ್ಷದ ಅಧ್ಯಕ್ಷ ಸ್ಥಾನದ ವಿಷಯದಲ್ಲೂ ಉಳಿಸಿಕೊಳ್ಳುವ ನಿರೀಕ್ಷೆ ಇದೆ ಎಂದೂ ರಾಹುಲ್ ಗಾಂಧಿ ತಿಳಿಸಿದರು.

ಇದನ್ನೂ ಓದಿ: ದೆಹಲಿ ಮಸೀದಿಯಲ್ಲಿ ಮುಖ್ಯ ಇಮಾಮ್​​ರನ್ನು ಭೇಟಿಯಾದ ಆರೆಸ್ಸೆಸ್ ಮುಖ್ಯಸ್ಥ ಭಾಗವತ್

Last Updated :Sep 22, 2022, 4:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.