ETV Bharat / bharat

ಅಗ್ನಿಶಾಮಕ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ವೇಳೆ ಭಾರಿ ಗೊಂದಲ ಸೃಷ್ಟಿ: ಮಹಿಳಾ ಅಭ್ಯರ್ಥಿಗಳಿಂದ ಬೃಹತ್​ ಪ್ರತಿಭಟನೆ

author img

By

Published : Feb 4, 2023, 4:07 PM IST

Updated : Feb 4, 2023, 4:54 PM IST

ಮುಂಬೈನ ದಹಿಸರ್ ವೆಸ್ಟ್‌ನಲ್ಲಿರುವ ಗೋಪಿನಾಥ್ ಮುಂಡೆ ಮೈದಾನದಲ್ಲಿ ಮಹಿಳಾ ಅಗ್ನಿಶಾಮಕ ದಳದ ಅಧಿಕಾರಿಗಳ ನೇಮಕಾತಿ ಆಯ್ಕೆ ಪ್ರಕ್ರಿಯೆಯಲ್ಲಿ ಗೊಂದಲ - ಆಕ್ರೋಶಗೊಂಡ ಮಹಿಳಾ ಅಭ್ಯರ್ಥಿಗಳು - ನೇಮಕಾತಿ ಪ್ರಕಿಯೆ ರದ್ದುಗೊಳಿಸಲು ಆಗ್ರಹ

recruitment of women fire brigade officers
ಮಹಿಳಾ ಅಭ್ಯರ್ಥಿಗಳಿಂದ ಬೃಹತ್​ ಪ್ರತಿಭಟನೆ

ದಹಿಸರ್‌(ಮಹಾರಾಷ್ಟ್ರ): ಮಹಿಳಾ ಅಗ್ನಿಶಾಮಕ ಸಿಬ್ಬಂದಿ ನೇಮಕಾತಿ ವೇಳೆ ಗೊಂದಲ ಸೃಷ್ಟಿಯಾಗಿದೆ. ಮುಂಬೈನ ದಹಿಸರ್ ವೆಸ್ಟ್‌ನಲ್ಲಿರುವ ಗೋಪಿನಾಥ್ ಮುಂಡೆ ಮೈದಾನದಲ್ಲಿ ಮಹಿಳಾ ಅಗ್ನಿಶಾಮಕ ದಳದ ಅಧಿಕಾರಿಗಳ ನೇಮಕಾತಿಯ ಆಯ್ಕೆ ಪ್ರಕ್ರಿಯೆಯಲ್ಲಿ ದೇಹದ ಎತ್ತರದ ಕಾರಣವನ್ನೇ ಪ್ರಮುಖವಾಗಿರಿಸಿಕೊಂಡು ಮಹಿಳಾ ಅಭ್ಯರ್ಥಿಗಳನ್ನು ಹೊರಹಾಕಲಾಗಿದೆ ಎಂದು ಯುವತಿಯರು ಗಂಭೀರ ಆರೋಪ ಮಾಡಿದ್ದಾರೆ. ಕಳೆದ ರಾತ್ರಿಯಿಂದಲೇ ಈ ಸ್ಥಳಕ್ಕೆ ಬಂದಿದ್ದ ಸಾವಿರಾರು ಮಹಿಳೆಯರು ನೇಮಕಾತಿಗೆ ಸಿದ್ಧತೆ ಕೂಡಾ ನಡೆಸಿದ್ದರು.

ಬೆಳಗ್ಗೆ ಮಹಿಳಾ ಅಭ್ಯರ್ಥಿಗಳಿಗೆ ಇಲ್ಲಿನ ಗೇಟ್‌ ಮೂಲಕ ಪ್ರವೇಶವೇ ನೀಡಿರಲಿಲ್ಲ. ನಂತರ ಮಹಿಳಾ ಅಭ್ಯರ್ಥಿಗಳು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್, ಅಗ್ನಿಶಾಮಕ ಇಲಾಖೆ ನೇಮಕಾತಿ ಮಂಡಳಿ (ಬಿಎಂಸಿ) ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ಪೊಲೀಸರು ಹಾಗೂ ಮಹಿಳಾ ಅಭ್ಯರ್ಥಿಗಳ ನಡುವೆ ವಾಗ್ವಾದ ನಡೆಯಿತು. ''ಮುಂಬೈ ಅಗ್ನಿಶಾಮಕ ದಳದ ನೇಮಕಾತಿ ರದ್ದುಗೊಳಿಸಬೇಕು'' ಎಂದು ಯುವತಿಯರು ಪಟ್ಟು ಹಿಡಿದರು.

ಹೆಚ್ಚಿನ ಅಂಕ ಗಳಿಸಿದ ಮಹಿಳಾ ಅಭ್ಯರ್ಥಿಗಳಿಗೂ ಪ್ರವೇಶ ನೀಡುತ್ತಿಲ್ಲ: ''ಮುಂಬೈ ಅಗ್ನಿಶಾಮಕ ದಳದ ನೇಮಕಾತಿ ಅಧಿಕಾರಿಗಳು ಉತ್ತಮ ಎತ್ತರ ಹೊಂದಿರುವ ಮಹಿಳಾ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುತ್ತಿಲ್ಲ. ಹೆಚ್ಚಿನ ಅಂಕಗಳನ್ನು ಗಳಿಸಿರುವ ಯುವತಿಯರಿಗೂ ಪ್ರವೇಶ ನೀಡುತ್ತಿಲ್ಲ. ನೇಮಕಾತಿ ಅರ್ಹತೆಯ ಮಾನದಂಡಗಳನ್ನು ಪೂರೈಸಿದ್ದರೂ ಮುಂಬೈ ಅಗ್ನಿಶಾಮಕ ದಳದ ನೇಮಕಾತಿಗೆ ಅವಕಾಶ ನೀಡುತ್ತಿಲ್ಲ ಎಂದು ಯುವತಿಯರು ಗಂಭೀರ ಆರೋಪ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದರು.

910 ಹುದ್ದೆಗಳಿಗೆ ಫೈರ್‌ಮೆನ್‌ಗಳ ನೇಮಕಾತಿ: ಒಟ್ಟು 910 ಅಗ್ನಿಶಾಮಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಸದ್ಯ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಗ್ನಿಶಾಮಕ ಇಲಾಖೆಯ ನೇಮಕಾತಿ ಮಂಡಳಿಯು ಒಟ್ಟು 910 ಹುದ್ದೆಗಳಿಗೆ ಫೈರ್‌ಮೆನ್‌ಗಳ ನೇಮಕಾತಿ ಪ್ರಕಟಣೆಯನ್ನು ಡಿಸೆಂಬರ್ 2022ರಲ್ಲಿ ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು mahafireservice.gov.in ಅಥವಾ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.

ನಂತರ ಅರ್ಜಿದಾರರು ಸ್ವವಿವರ ಮತ್ತು ಶೈಕ್ಷಣಿಕ ದಾಖಲೆಗಳೊಂದಿಗೆ ಡಿಸೆಂಬರ್ 13ರಿಂದ 31 ಹಾಗೂ ಫೆಬ್ರವರಿ 1ರಿಂದ 4 2023ರವರೆಗಿನ ನೇರ ಸಂದರ್ಶನಕ್ಕೆ ಹಾಜರಾಗಬೇಕಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಇಂದು ಆ ಎಲ್ಲ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯುತ್ತಿತ್ತು. ಆದರೆ ನೇಮಕಾತಿ ಅಧಿಕಾರಿಗಳ ಎಡವಿಟ್ಟಿನಿಂದ ಭಾರೀ ಗೊಂದಲಕ್ಕೆ ಕಾರಣವಾಗಿದೆ.

ಅಗ್ನಿಶಾಮಕ ಸಿಬ್ಬಂದಿ ನೇಮಕಾತಿ ರದ್ದುಪಡಿಸಲು ಪ್ರತಿಭಟನಾಕಾರರ ಆಗ್ರಹ: ನಾವು ಎರಡು - ಮೂರು ದಿನಗಳಿಂದ ಲಂಬೂನ್‌ಗೆ ಬಂದಿದ್ದೇವೆ. ಆದರೂ ನಮ್ಮನ್ನು ಅಧಿಕಾರಿಗಳು ಒಳಗೆ ಬಿಡುತ್ತಿಲ್ಲ ಎಂದು ಮಹಿಳಾ ಅಭ್ಯರ್ಥಿಗಳು ಹೇಳುತ್ತಾರೆ. ಅಗ್ನಿಶಾಮಕ ದಳದ ನೇಮಕಾತಿ ಅಧಿಕಾರಿಗಳ ಮೇಲೆ ಅನೇಕ ಆರೋಪಗಳನ್ನು ಮಾಡಿದರು. ಜೊತೆಗೆ ಅಗ್ನಿಶಾಮಕ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಬೇಕು ಎಂದು ಯವತಿಯರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣ: ಸಿಬಿಐಯಿಂದ ಆಂಧ್ರ ಸಿಎಂ ಒಎಸ್‌ಡಿ & ಮನೆಯ ಸಹಾಯಕರ ವಿಚಾರಣೆ

Last Updated : Feb 4, 2023, 4:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.