ETV Bharat / bharat

ಕ್ರೀಡಾ ತರಬೇತಿ ಪಡೆಯಲು ಮಣಿಪುರದ ಕ್ರೀಡಾಪಟುಗಳಿಗೆ ಸಿಎಂ ಸ್ಟಾಲಿನ್ ಆಹ್ವಾನ

author img

By

Published : Jul 23, 2023, 4:15 PM IST

Updated : Jul 23, 2023, 5:14 PM IST

CM Stalin: ಮಣಿಪುರ ರಾಜ್ಯದ ಕ್ರೀಡಾಪಟುಗಳಿಗೆ ತಮಿಳುನಾಡಿನಲ್ಲಿ ಕ್ರೀಡಾ ತರಬೇತಿ ಪಡೆಯಲು ಸಿಎಂ ಎಂ ಕೆ ಸ್ಟಾಲಿನ್ ಅವರು ಆಹ್ವಾನಿಸಿದ್ದಾರೆ.

ಸಿಎಂ ಎಂ ಕೆ ಸ್ಟಾಲಿನ್
ಸಿಎಂ ಎಂ ಕೆ ಸ್ಟಾಲಿನ್

ಚೆನ್ನೈ : ತಮಿಳುನಾಡಿನಲ್ಲಿ ಕ್ರೀಡಾ ತರಬೇತಿ ಕೈಗೊಳ್ಳಲು ಮಣಿಪುರ ರಾಜ್ಯದ ಕ್ರೀಡಾಪಟುಗಳಿಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಆಹ್ವಾನ ನೀಡಿದ್ದಾರೆ. ಈ ಸಂಬಂಧ ತಮಿಳುನಾಡು ಸರ್ಕಾರವು ಪ್ರಕಟಣೆ ಹೊರಡಿಸಿದೆ. ಆ ಹೇಳಿಕೆಯಲ್ಲಿ, 'ಕ್ರೀಡೆಯಲ್ಲಿ ತನ್ನ ಪರಾಕ್ರಮಕ್ಕೆ ಹೆಸರುವಾಸಿಯಾದ ರಾಜ್ಯ ಮಣಿಪುರದ ಪ್ರಸ್ತುತ ಪರಿಸ್ಥಿತಿಯನ್ನು ತಮಿಳುನಾಡು ಅತ್ಯಂತ ಕಳವಳ ಮತ್ತು ವೇದನೆಯಿಂದ ನೋಡುತ್ತದೆ' ಎಂದಿದೆ.

ಮಣಿಪುರ ಯಾವಾಗಲೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಚಾಂಪಿಯನ್‌ಗಳನ್ನು, ವಿಶೇಷವಾಗಿ ಮಹಿಳಾ ಚಾಂಪಿಯನ್‌ಗಳನ್ನು ನಿರ್ಮಿಸಿದೆ. ಖೇಲೋ ಇಂಡಿಯಾ ಯೂತ್ ಗೇಮ್ಸ್ 2024 ಅನ್ನು ಆಯೋಜಿಸಲು ತಮಿಳುನಾಡನ್ನು ಆಯ್ಕೆ ಮಾಡಲಾಗಿದೆ. ಈ ಪಂದ್ಯಾವಳಿಯನ್ನು ಯಶಸ್ವಿಗೊಳಿಸಲು ಎಲ್ಲಾ ವ್ಯವಸ್ಥೆಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಪ್ರಸ್ತುತ, ಮಣಿಪುರದಲ್ಲಿ, ಏಷ್ಯನ್ ಗೇಮ್ಸ್ ಮತ್ತು ಇಂಡಿಯಾ ಯೂತ್ ಗೇಮ್ಸ್‌ನಂತಹ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ತರಬೇತಿ ನೀಡಲು ಪ್ರತಿಕೂಲ ಪರಿಸ್ಥಿತಿ ಇದೆ. ಹೀಗಾಗಿ, ತರಬೇತಿಗಾಗಿ ತಮಿಳುನಾಡಿಗೆ ಭೇಟಿ ನೀಡುವಂತೆ ಆಹ್ವಾನಿಸಲಾಗಿದೆ.

ಕ್ರೀಡಾ ತರಬೇತಿಗಾಗಿ ತಮಿಳುನಾಡು ರಾಜ್ಯದ ಸಾಮರ್ಥ್ಯದ ಬಗ್ಗೆ ಮಾತನಾಡಿರುವ ಸಿಎಂ ಸ್ಟಾಲಿನ್, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ವಿಶ್ವದರ್ಜೆಯ ತರಬೇತಿ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ತಮಿಳುನಾಡು ಪ್ರಮುಖ ರಾಜ್ಯವಾಗಿದೆ. ರಾಜ್ಯ ಸರ್ಕಾರವು ಕೈಗೊಂಡ ಕ್ರೀಡಾ ಅಭಿವೃದ್ಧಿ ಉಪಕ್ರಮಗಳಿಂದಾಗಿ ತಮಿಳುನಾಡಿನ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಸತತವಾಗಿ ಗೆಲ್ಲುತ್ತಿದ್ದಾರೆ. ಮಣಿಪುರದ ಆಟಗಾರರನ್ನು ರಾಜ್ಯಕ್ಕೆ ಬರಮಾಡಿಕೊಳ್ಳಲು ಸಿದ್ಧ ಎಂದು ತಿಳಿಸಿದ್ದಾರೆ.

ಗುಣಮಟ್ಟದ ತರಬೇತಿ ನೀಡಲು ಎಲ್ಲಾ ವ್ಯವಸ್ಥೆ: ಈ ನಿಟ್ಟಿನಲ್ಲಿ "ನಾನು (ಸಿಎಂ) ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಅವರಿಗೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದೇನೆ. ಈ ಕ್ರೀಡಾ ಪಟುಗಳು ಮತ್ತು ಮಹಿಳೆಯರಿಗೆ ತಮಿಳುನಾಡು ಸರ್ಕಾರದ ಕ್ರೀಡಾ ಅಭಿವೃದ್ಧಿ ಇಲಾಖೆ ವತಿಯಿಂದ ಉತ್ತಮ ಗುಣಮಟ್ಟದ ತರಬೇತಿ ನೀಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು" ಎಂದು ಕ್ರೀಡಾ ಸಚಿವರು ಭರವಸೆ ನೀಡಿದ್ದಾರೆ.

ಸಹಾಯಕ್ಕಾಗಿ ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಗಳನ್ನು ತಮಿಳುನಾಡು ಸರ್ಕಾರ ನೀಡಿದೆ. "ತಮಿಳುನಾಡು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರದ ಸ್ಪೋರ್ಟ್ಸ್ ಫೆಸಿಲಿಟೇಟರ್ ಅವರ ಹೆಸರು ವಿಳಾಸದ ಗುರುತಿನ ಪುರಾವೆ, ಸಂಪರ್ಕ ವಿವರಗಳು, ಕ್ರೀಡಾ ಸಾಧನೆಗಳು ಮತ್ತು ತರಬೇತಿ ಅಗತ್ಯತೆಗಳನ್ನು ಇಮೇಲ್‌ನಲ್ಲಿ sportstn2023@gmail.com ಮತ್ತು ಫೋನ್ ಸಂಖ್ಯೆ +91-89259 03047 " ಸರ್ಕಾರ ಒದಗಿಸಿದೆ. ಅಲ್ಲದೆ, ಈ ಘೋಷಣೆಯ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‌ನಲ್ಲಿ, "ಮಣಿಪುರದ ಕ್ರೀಡಾಪಟುಗಳು ಎದುರಿಸುತ್ತಿರುವ ಪ್ರಸ್ತುತ ಸವಾಲುಗಳನ್ನು ಅರ್ಥಮಾಡಿಕೊಂಡು, ಖೇಲೋ ಇಂಡಿಯಾ ಯೂತ್ ಗೇಮ್ಸ್ 2024 ಕ್ಕೆ ಮುಂಚಿತವಾಗಿ ತಮಿಳುನಾಡಿನಲ್ಲಿ ಕ್ರೀಡಾ ತರಬೇತಿಗಾಗಿ ನಾನು ಮಣಿಪುರದ ಕ್ರೀಡಾಪಟುಗಳನ್ನು ಆತ್ಮೀಯವಾಗಿ ಆಹ್ವಾನಿಸುತ್ತೇನೆ. ಈ ಬಗ್ಗೆ ಸಚಿವ ಉದಯನಿಧಿ ಸ್ಟಾಲಿನ್ ಸಹ ತಮ್ಮ ಬೆಂಬಲವನ್ನು ನೀಡಿದ್ದಾರೆ'' ಎಂದಿದ್ದಾರೆ.

ನಮ್ಮ ಸಾಮೂಹಿಕ ಆತ್ಮಸಾಕ್ಷಿ ಎಲ್ಲಿದೆ?: ಇದಕ್ಕೂ ಮುನ್ನ ಮಣಿಪುರದಲ್ಲಿ ಇಬ್ಬರು ಮಹಿಳೆಯರ ಬೆತ್ತಲೆ ವಿಡಿಯೋ ವೈರಲ್ ಆಗಿದ್ದು, ರಾಷ್ಟ್ರವ್ಯಾಪಿ ವಿವಾದ ಸೃಷ್ಟಿಸಿತ್ತು. ಈ ಭೀಕರ ಘಟನೆಯ ಕುರಿತು ಸಿಎಂ ಸ್ಟಾಲಿನ್, "ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಹೃದಯ ವಿದ್ರಾವಕ ಹಿಂಸಾಚಾರದಿಂದ ನಮಗೆ ಆಘಾತವಾಗಿದೆ. ನಮ್ಮ ಸಾಮೂಹಿಕ ಆತ್ಮಸಾಕ್ಷಿ ಎಲ್ಲಿದೆ? ದ್ವೇಷ ಮತ್ತು ವಿಷವು ಮಾನವೀಯತೆಯ ಆತ್ಮವನ್ನು ಬೇರುಸಹಿತ ಕಿತ್ತುಹಾಕುತ್ತಿದೆ. ಇಂತಹ ದೌರ್ಜನ್ಯಗಳ ವಿರುದ್ಧ ನಾವು ಒಗ್ಗಟ್ಟಾಗಿ ನಿಲ್ಲಬೇಕು ಮತ್ತು ಶಾಂತಿಯುತ ಸಮಾಜವನ್ನು ಬೆಳೆಸಲು ಸರ್ಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮಣಿಪುರ ಮಹಿಳೆಯರ ಮೇಲೆ ಅಮಾನುಷ ದೌರ್ಜನ್ಯ: ಬಾಲಾಪರಾಧಿ ಸೇರಿ 6 ಮಂದಿ ಸೆರೆ, ವಲಸೆ ಹೋಗದಂತೆ ಸರ್ಕಾರದ ಮನವಿ

Last Updated : Jul 23, 2023, 5:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.