ETV Bharat / bharat

ಸಿಪೆಕ್​ ಕಾಮಗಾರಿ ಸ್ಥಳದಿಂದ ಪಾಕ್ ಕಾರ್ಮಿಕರ ವಜಾಗೊಳಿಸಿದ ಚೀನಾ..

author img

By

Published : Jul 20, 2021, 3:16 PM IST

ಸಿಪೆಕ್​ ಕಾಮಗಾರಿ ಸ್ಥಳದಿಂದ ಪಾಕಿಸ್ತಾನದ ಕಾರ್ಮಿಕರನ್ನು ಚೀನಾ ವಜಾಗೊಳಿಸಿದೆ. ಜು.14ರಂದು ಭಯೋತ್ಪಾದಕರ ದಾಳಿಯಲ್ಲಿ 9 ಚೀನಾ ಪ್ರಜೆಗಳು ಸಾವನ್ನಪ್ಪಿದ್ದಕ್ಕೆ ಚೀನಾ ಈ ರೀತಿ ಪ್ರತೀಕಾರ ತೀರಿಸಿಕೊಂಡಿದೆ ಎನ್ನಲಾಗ್ತಿದೆ.

China sacks thousands of Pak workers from CPEC site
ಸಿಪೆಕ್​ ಕಾಮಗಾರಿ ಸ್ಥಳದಿಂದ ಪಾಕ್ ಕಾರ್ಮಿಕರ ವಜಾಗೊಳಿಸಿದ ಚೀನಾ

ಬೀಜಿಂಗ್(ಚೀನಾ): ಪಾಕಿಸ್ತಾನದ ಮೇಲೆ ಚೀನಾ ನಂಬಿಕೆ ಕಳೆದುಕೊಳ್ಳುತ್ತಿದೆ ಎಂಬ ಅನುಮಾನಕ್ಕೆ ಪುಷ್ಠಿ ನೀಡುವ ಘಟನೆಯೊಂದು ನಡೆದಿದೆ. ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪೆಕ್​)ನಲ್ಲಿ ಕೆಲಸ ಮಾಡುವ ಸಾವಿರಾರು ಪಾಕ್ ನೌಕರರನ್ನು ಚೀನಾ ವಜಾಗೊಳಿಸಿದೆ.

ಭಯೋತ್ಪಾದಕರ ಕೃತ್ಯಗಳಿಂದ ಚೀನಾದವರನ್ನು ರಕ್ಷಣೆ ಮಾಡಲು ಪಾಕ್ ವಿಫಲವಾಗುತ್ತಿದೆ ಎಂಬ ಆರೋಪದ ಮೇಲೆ ಸಿಪೆಕ್​​ನ ಕಾಮಗಾರಿಯಲ್ಲಿ ತೊಡಗಿಕೊಂಡಿರುವ ಎರಡೂವರೆ ಸಾವಿರ ಪಾಕ್ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ.

ಬಸ್​ನಲ್ಲಿ ಬಾಂಬ್ ಇಟ್ಟು ಚೀನಿ ಪ್ರಜೆಗಳನ್ನು ಕೊಂದ ಪ್ರತೀಕಾರದ ಸಲುವಾಗಿ ಚೀನಾ ಈ ರೀತಿಯ ಪ್ರತೀಕಾರವನ್ನು ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಚೀನಾ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ಜಿಯೋ ನ್ಯೂಸ್ (Geo news) ವರದಿ ಮಾಡಿದೆ.

ಜು.14ರಂದು ಬಸ್​ನಲ್ಲಿ ಭೀಕರ ಸ್ಫೋಟವೊಂದು ಸಂಭವಿಸಿ, ಚೀನಾದ 9 ಪ್ರಜೆಗಳೂ ಸೇರಿದಂತೆ ಒಟ್ಟು 13 ಮಂದಿ ಸಾವನ್ನಪ್ಪಿದ ಘಟನೆ ಈಶಾನ್ಯ ಪಾಕಿಸ್ತಾನದಲ್ಲಿ ನಡೆದಿತ್ತು. ದಸು ಜಲವಿದ್ಯುತ್​ ಯೋಜನೆಯ ಡ್ಯಾಮ್​​ಗಾಗಿ ಕಾರ್ಯನಿರ್ವಹಿಸಲು ತೆರಳುತ್ತಿದ್ದ ಚೀನಾದ ಇಂಜಿನಿಯರ್​ಗಳು, ಸರ್ವೇಯರ್​ಗಳು ಸ್ಫೋಟದಲ್ಲಿ ಸಾವನ್ನಪ್ಪಿದ್ದರು.

ಇದನ್ನೂ ಓದಿ: ಚೀನಾ ಸೈಬರ್​​​​​​ ದಾಳಿಕೋರರಿಂದ Microsoft​ ಇಮೇಲ್ ಹ್ಯಾಕ್​: ಅಮೆರಿಕ ಆರೋಪ

ಮೊದಲಿಗೆ ಇದು ಭಯೋತ್ಪಾದಕ ದಾಳಿಯೋ ಅಥವಾ ಅಲ್ಲವೋ ಎಂಬ ಬಗ್ಗೆ ಅನುಮಾನಗಳು ಮೂಡಿತ್ತಾದರೂ, ನಂತರ ಇದು ಭಯೋತ್ಪಾದಕರ ದಾಳಿ ಎಂಬುದನ್ನು ಪಾಕ್ ಒಪ್ಪಿಕೊಂಡಿತ್ತು. ಈಗ ಪಾಕಿಸ್ತಾನದ ನೌಕರರನ್ನು ವಜಾ ಮಾಡುವ ಮೂಲಕ ಚೀನಾ ಪ್ರತೀಕಾರ ತೀರಿಸಿಕೊಂಡಿದೆ ಎಂದು ಹೇಳಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.