ETV Bharat / bharat

ಚೆನ್ನೈ ವಿಮಾನ ನಿಲ್ದಾಣದಲ್ಲಿ ₹12 ಕೋಟಿ ಮೌಲ್ಯದ ಕೊಕೇನ್​ ಪತ್ತೆ: ವಿದೇಶಿಗನ ಬಂಧನ

author img

By ETV Bharat Karnataka Team

Published : Dec 16, 2023, 7:47 PM IST

ಕಸ್ಟಮ್ಸ್ ಅಧಿಕಾರಿಗಳು ಕೊಕೇನ್​ ಸಾಗಿಸುತ್ತಿದ್ದ ವಿದೇಶಿ ವ್ಯಕ್ತಿಯನ್ನು ಬಂಧಿಸಿ, 12 ಕೋಟಿ ಮೌಲ್ಯದ ಕೊಕೇನ್​ಅನ್ನು ವಶಪಡಿಸಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

Etv Bharatchennai-airport-customs-seized-cocaine-worth-rs-12-crores-and-one-arrested
ಚೆನ್ನೈ ವಿಮಾನ ನಿಲ್ದಾಣದಲ್ಲಿ ₹12 ಕೋಟಿ ಮೌಲ್ಯದ ಕೊಕೇನ್​ ಪತ್ತೆ, ಓರ್ವನ ಬಂಧನ

ಚೆನ್ನೈ(ತಮಿಳುನಾಡು): ಇಲ್ಲಿನ ಕಸ್ಟಮ್ಸ್ ಅಧಿಕಾರಿಗಳು ಅಡಿಸ್ ಅಬಾಬಾದಿಂದ ಚೆನ್ನೈಗೆ ಆಗಮಿಸಿದ್ದ ವಿದೇಶಿ ವ್ಯಕ್ತಿಯೊಬ್ಬನನ್ನು ಬಂಧಿಸಿ, ಆತನ ಬಳಿಯಿದ್ದ 12 ಕೋಟಿ ರೂ.ಗಳ ಮೌಲ್ಯದ 1201 ಗ್ರಾಂ ಮಾದಕ ವಸ್ತು (ಕೊಕೇನ್) ವಶಪಡಿಸಿಕೊಂಡಿದ್ದಾರೆ. ಡಿ.12 ರಂದು ನೈಜೀರಿಯ ಪಾಸ್‌ಪೋರ್ಟ್ ಹೊಂದಿದ್ದ ವ್ಯಕ್ತಿಯನ್ನು ಅಧಿಕಾರಿಗಳು ತಪಾಸಣೆ ನಡೆಸಿದಾಗ ಆತನ ಬಳಿ ಹೈಪರ್‌ಡೆನ್ಸ್ ಸಿಲಿಂಡರ್​ ಆಕಾರದ ಬಂಡಲ್‌ಗಳು ಪತ್ತೆಯಾಗಿದ್ದವು, ನಂತರ ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಎಂದು ಕಸ್ಟಮ್ಸ್ ಪ್ರಧಾನ ಆಯುಕ್ತರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಸ್ಟಮ್ಸ್ ಆಕ್ಟ್, 1962 ರ ಅಡಿ 12 ಕೋಟಿ ರೂ.ಗಳ ಮೌಲ್ಯದ 1201 ಗ್ರಾಂ ತೂಕದ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ಹೆಚ್ಚಿನ ತನಿಖೆಗೆ ಬಳಪಡಿಸಲಾಗಿದೆ ಎಂದು ಕಸ್ಟಮ್ಸ್ ಪ್ರಧಾನ ಆಯುಕ್ತರ ಕಚೇರಿ ಮಾಹಿತಿ ನೀಡಿದೆ.

ಈಜಿಪ್ಟ್​ನಿಂದ ಬಂದ ಹಡಗಿನಲ್ಲಿ 200 ಕೋಟಿ ಮೌಲ್ಯದ ಕೊಕೇನ್​ ಪತ್ತೆ(ಒಡಿಶಾ): ಇತ್ತೀಚಿಗೆ, ಒಡಿಶಾದ ಪಾರಾದೀಪ್ ಬಂದರಿನಲ್ಲಿ ಸರಕು ಸಾಗಣೆಯ ಮಾಡುವ ಹಡಗಿನಿಂದ 200 ಕೋಟಿ ರೂಪಾಯಿ ಮೌಲ್ಯದ 22 ಪ್ಯಾಕೆಟ್ ಕೊಕೇನ್ ಅನ್ನು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿತ್ತು. ಕೊಕೇನ್ ಕಳ್ಳಸಾಗಣೆಯ ಮೂಲಕ ಭಾರತಕ್ಕೆ ಬರುತ್ತಿರುವುದರ ಬಗ್ಗೆ ಮಾಹಿತಿ ಪಡೆದ ಕಸ್ಟಮ್ಸ್ ಮತ್ತು ಸಿಐಎಸ್ಎಫ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ತಪಾಸಣೆ ವೇಳೆ ಅಕ್ರಮ ಮಾದಕ ವಸ್ತು ಇರುವುದು ಪತ್ತೆಯಾಗಿತ್ತು.

ಹಡಗು ಈಜಿಪ್ಟ್ ಹಾಗೂ ಇಂಡೋನೇಷ್ಯಾಗಳನ್ನು ದಾಟಿ ಪಾರಾದೀಪ್ ಬಂದರಿಗೆ ಬಂದಿತ್ತು. ಪಾರದೀಪ್ ಬಂದರಿನಿಂದ ಸ್ಟೀಲ್ ಪ್ಲೇಟ್​​ಗಳನ್ನು ಹೊತ್ತು ಡೆನ್ಮಾರ್ಕ್‌ಗೆ ಒಯ್ಯುತ್ತಿತ್ತು. ಸ್ಟೀಲ್ ಪ್ಲೇಟ್‌ಗಳನ್ನು ಲೋಡ್ ಮಾಡಲು ಸಿದ್ಧತೆ ನಡೆಸುತ್ತಿದ್ದಾಗ, ಮೂಲವೊಂದು ಹಡಗಿನಲ್ಲಿ ಕೊಕೇನ್ ಇರುವ ಬಗ್ಗೆ ಕಸ್ಟಮ್ಸ್ ಇಲಾಖೆಗೆ ಮಾಹಿತಿ ನೀಡಿತ್ತು. ಮಾಹಿತಿ ಪಡೆದ ಸಿಐಎಸ್ಎಫ್, ಕೋಸ್ಟ್ ಗಾರ್ಡ್ ಮತ್ತು ಪೊಲೀಸರು ಶೋಧ ಕಾರ್ಯಾಚರಣೆಯನ್ನು ನಡೆಸಿದ್ದರು. ಎರಡು ಗಂಟೆಗಳ ಸುದೀರ್ಘ ಶೋಧ ಕಾರ್ಯಾಚರಣೆಯಲ್ಲಿ ಮೊದಲು 10 ಕೋಕೂನ್ ಪ್ಯಾಕೆಟ್‌ ದೊರೆತಿತ್ತು. ನಂತರ ಸಂಜೆ 4 ಗಂಟೆಯವರೆಗೆ ಹಡಗನ್ನು ತಪಾಸಣೆ ನಡೆಸಲಾಗಿತ್ತು. ಈ ವೇಳೆಗೆ ಒಟ್ಟು 22 ಪ್ಯಾಕೆಟ್ ಕೊಕೇನ್ ವಶಪಡಿಸಿಕೊಳ್ಳಲಾಗಿತ್ತು. ನಂತರ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ತನಿಖಾ ಸಂಸ್ಥೆ ಹೆಚ್ಚಿನ ವಿಚಾರಣೆ ನಡೆಸಿದ್ದರು.

ಇದನ್ನೂ ಓದಿ: ಕೊರಿಯರ್ ಕಂಪನಿ ಹೆಸರಲ್ಲಿ ಕರೆ, ವೆರಿಫಿಕೇಷನ್ ನೆಪದಲ್ಲಿ 1.98 ಕೋಟಿ ರೂಪಾಯಿ ವಂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.