ETV Bharat / bharat

5 ದಿನ ಸಿಬಿಐ ಕಸ್ಟಡಿಗೆ ದೆಹಲಿ ಸಚಿವ ಮನೀಶ್​ ಸಿಸೋಡಿಯಾ; ಆಪ್​ನಿಂದ ತೀವ್ರ ಪ್ರತಿಭಟನೆ

ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿರುವ ದೆಹಲಿ ಸರ್ಕಾರದ​ ಸಚಿವ ಮನೀಶ್​ ಸಿಸೋಡಿಯಾರನ್ನು ಐದು ದಿನ ಸಿಬಿಐ ಕಸ್ಟಡಿಗೆ ನೀಡಿ ವಿಶೇಷ ಕೋರ್ಟ್​ ಆದೇಶಿಸಿದೆ. ಇನ್ನೊಂದೆಡೆ, ಆಪ್​ ಕಾರ್ಯಕರ್ತರು ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಅಬಕಾರಿ ಹಗರಣ
ಅಬಕಾರಿ ಹಗರಣ
author img

By

Published : Feb 27, 2023, 4:04 PM IST

Updated : Feb 27, 2023, 5:48 PM IST

ಸಿಬಿಐ ಕೋರ್ಟ್​ ಮುಂದೆ ಮನೀಶ್​ ಸಿಸೋಡಿಯಾ ಹಾಜರು

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಸಿಬಿಐ ವಿಶೇಷ ಕೋರ್ಟ್​ 5 ದಿನ ಸಿಬಿಐ ಕಸ್ಟಡಿಗೆ ನೀಡಿದೆ. ಇಂದು ಮಧ್ಯಾಹ್ನ ಅಧಿಕಾರಿಗಳು ರೌಸ್​ ಅವೆನ್ಯೂ ಕೋರ್ಟ್​ಗೆ ಹಾಜರುಪಡಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ಸಿಸೋಡಿಯಾರನ್ನು 5 ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡಬೇಕು ಎಂದು ಸಿಬಿಐ ಕೋರಿತ್ತು. ಅಧಿಕಾರಿಗಳ ಮನವಿ ಪುರಸ್ಕರಿಸಿದ ಕೋರ್ಟ್​, ಮಾರ್ಚ್​ 4ರ ವರೆಗೂ ಸಿಸೋಡಿಯಾರನ್ನು ಸಿಬಿಐ​ ವಶಕ್ಕೆ ನೀಡಲಾಗಿದೆ.

ಹಗರಣದಲ್ಲಿ ಪ್ರಮುಖ ಆರೋಪಿತರಾಗಿರುವ ಮನೀಶ್​ ಸಿಸೋಡಿಯಾರನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ನಿನ್ನೆ 8 ಗಂಟೆಗಳ ಕಾಲ ವಿಚಾರಣೆ ನಡೆಸಿ ನಂತರ ಬಂಧಿಸಿತ್ತು. ಇದು ಆಮ್​ ಆದ್ಮಿ ಪಕ್ಷದ ಆಕ್ರೋಶಕ್ಕೆ ಕಾರಣವಾಗಿದೆ. ಭಾನುವಾರದಿಂದ ಪ್ರತಿಭಟನೆ ನಡೆಸುತ್ತಿರುವ ಆಪ್​ ಕಾರ್ಯಕರ್ತರು ಮತ್ತು ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ, ಸಿಬಿಐ ಕಚೇರಿಗೆ ಬಿಗಿ ಭದ್ರತೆ: ಮನೀಶ್ ಸಿಸೋಡಿಯಾ ಬಂಧನದ ಬಳಿಕ ಆಪ್​ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ನಗರದ ಬಿಜೆಪಿ ಮತ್ತು ಸಿಬಿಐ ಕಚೇರಿಗಳಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಎಎಪಿ ಪ್ರತಿಭಟನಾಕಾರರು ಡಿಡಿಯು ಮಾರ್ಗದಲ್ಲಿರುವ ಬಿಜೆಪಿ ಕಚೇರಿಯತ್ತ ಮೆರವಣಿಗೆ ನಡೆಸಲು ಪ್ರಯತ್ನಿಸಿದರು. ಆದರೆ, ಪೊಲೀಸರು ತಡೆದರು. ಬ್ಯಾರಿಕೇಡ್‌ಗಳನ್ನು ಅಡ್ಡಹಾಕಿ ಕಚೇರಿಯ ಕಡೆಗೆ ಸಾಗದಂತೆ ತಡೆದರು.

ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ಮಧ್ಯೆ ತೀವ್ರ ತಳ್ಳಾಟ, ನೂಕಾಟ ನಡೆಯಿತು. ಬ್ಯಾರಿಕೇಡ್​ಗಳನ್ನು ದಾಟಿ ಮುನ್ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ತಮ್ಮ ವಾಹನಗಳಲ್ಲಿ ಕರೆದೊಯ್ದರು. ಪ್ರತಿಭಟನೆಯ ವೇಳೆ ಆಪ್​ ಕಾರ್ಯಕರ್ತರು ಬಿಜೆಪಿ ಮತ್ತು ದೆಹಲಿ ಲೆಫ್ಟಿನೆಂಟ್​ ಗವರ್ನರ್​ ವಿರುದ್ಧ ಘೋಷಣೆಗಳನ್ನು ಕೂಗಿದರು.

144 ಸೆಕ್ಷನ್​ ಜಾರಿ: ದೆಹಲಿ ಡಿಸಿಎಂ ಬಂಧನ ಬಳಿಕ ಉಂಟಾಗುವ ಪ್ರತಿರೋಧ ತಡೆಯಲು ಅಲ್ಲಿನ ಪೊಲೀಸರು, ಸಿಬಿಐ ಕಚೇರಿಯ ಸುತ್ತಲೂ ಸಿಆರ್‌ಪಿಸಿ ಸೆಕ್ಷನ್ 144 ಜಾರಿ ಮಾಡಿದೆ. ಇದರಿಂದ ಕಚೇರಿಯ ಸುತ್ತ ಎಲ್ಲೂ ಪ್ರತಿಭಟನೆ ನಡೆಸದಂತೆ ನಿರ್ಬಂಧಿಸಲಾಗಿದೆ. ಪ್ರತಿಭಟನೆ ನಡೆಸದಂತೆ ಪೊಲೀಸರು ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದರು. ಪರಿಸ್ಥಿತಿಯ ಮೇಲ್ವಿಚಾರಣೆಗಾಗಿ ಡ್ರೋನ್‌ಗಳನ್ನು ಬಳಸಲಾಗುತ್ತಿದೆ.

'ಬಿಜೆಪಿ ಸರ್ವಾಧಿಕಾರಿ ಧೋರಣೆ': ಸಿಸೋಡಿಯಾ ಅವರ ಬಂಧನಕ್ಕೆ ಕಿಡಿಕಾರಿರುವ ಆಪ್​, "ಇದು ಬಿಜೆಪಿಯ ಸರ್ವಾಧಿಕಾರದ ಪರಮಾವಧಿ. ಪಕ್ಷದ ಕಚೇರಿಗೆ ನುಗ್ಗಿ ನಾಯಕರನ್ನು ಬಂಧಿಸಲು ಪ್ರಯತ್ನಿಸುತ್ತಿದೆ. ಸರ್ಕಾರ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರ ಜನಪ್ರಿಯತೆಗೆ ಹೆದರಿ ಪಕ್ಷದ ನಾಯಕರನ್ನು ಬಂಧಿಸಲಾಗುತ್ತಿದೆ" ಎಂದು ಆಪ್​ ಮುಖಂಡರು ಹರಿಹಾಯ್ದಿದ್ದಾರೆ.

ಹಲವೆಡೆ ಪ್ರತಿಭಟನೆ: ಸಿಸೋಡಿಯಾ ಬಂಧನ ವಿರೋಧಿಸಿ ಎಎಪಿ ನಾಯಕರು ಮತ್ತು ಕಾರ್ಯಕರ್ತರು ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಗಿ ಭದ್ರತೆಯ ನಡುವೆಯೂ ಚಂಡೀಗಢ, ದೆಹಲಿ, ಮಧ್ಯಪ್ರದೇಶದ ಭೋಪಾಲ್ ಸೇರಿದಂತೆ ಇತರ ನಗರಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಪ್ರತಿಭಟನೆಗೆ ತಮ್ಮ ತಮ್ಮ ಕ್ಷೇತ್ರಗಳಿಂದ ಜನರನ್ನು ಒಟ್ಟುಗೂಡಿಸಲು ಎಲ್ಲಾ ಶಾಸಕರಿಗೆ ಪಕ್ಷ ತಿಳಿಸಿದೆ ಎಂದು ವರದಿಯಾಗಿದೆ.

ಕಳೆದ ವರ್ಷ ದೆಹಲಿಯ ಆಗಿನ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಬಂಧನದ ನಂತರ ಸಿಸೋಡಿಯಾ ಬಂಧನವಾಗಿದೆ. ಆಪ್​ ಪಕ್ಷದ ಇಬ್ಬರು ಸಚಿವರನ್ನು ಸಿಬಿಐ ಬಂಧಿಸಿದಂತಾಗಿದೆ. ಶಿಕ್ಷಣ ಮತ್ತು ಆರೋಗ್ಯ ಸಚಿವರ ಬಂಧನದಿಂದ ಪಕ್ಷ ಇಕ್ಕಟ್ಟಿಗೆ ಸಿಲುಕಿದೆ. ಸಿಸೋಡಿಯಾ ಅವರು ಶಿಕ್ಷಣ, ಹಣಕಾಸು ಸೇರಿದಂತೆ 18 ಖಾತೆಗಳನ್ನು ನಿಭಾಯಿಸುತ್ತಿದ್ದರು. ಇದೀಗ ಅವರ ಬಂಧನದ ಬಳಿಕ ಸರ್ಕಾರ ಒತ್ತಡಕ್ಕೆ ಸಿಲುಕುವ ಸಾಧ್ಯತೆ ಇದೆ.

ಇದನ್ನೂ ಓದಿ: ಅಬಕಾರಿ ಹಗರಣ.. ಸಿಬಿಐ ಅಧಿಕಾರಿಗಳಿಂದ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಅರೆಸ್ಟ್​

Last Updated : Feb 27, 2023, 5:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.