ETV Bharat / bharat

ಪಂಜಾಬ್​ ಚುನಾವಣೆಗೆ ಚರಣ್‌ಜಿತ್ ಸಿಂಗ್ ಚನ್ನಿ ಸಿಎಂ ಅಭ್ಯರ್ಥಿ: ರಾಹುಲ್ ಗಾಂಧಿ ಘೋಷಣೆ

author img

By

Published : Feb 6, 2022, 5:48 PM IST

ಪಂಜಾಬ್ ವಿಧಾನಸಭಾ ಚುನಾವಣೆಗೆ ಸಿಎಂ ಅಭ್ಯರ್ಥಿ ಟಿಕೆಟ್​ ಫೈಟ್​ನಲ್ಲಿ ಮುಂಚೂಣಿಯಲ್ಲಿದ್ದ ನವಜೋತ್ ಸಿಂಗ್ ಸಿಧು ಅವರನ್ನು ಬಿಟ್ಟು ಹಾಲಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರಿಗೆ ಕಾಂಗ್ರೆಸ್​ ಮಣೆ ಹಾಕಿದೆ.

channi
ಪಂಜಾಬ್​ ಚುನಾವಣೆಗೆ ಚರಣ್‌ಜಿತ್ ಸಿಂಗ್ ಚನ್ನಿ ಸಿಎಂ ಅಭ್ಯರ್ಥಿ

ಲುಧಿಯಾನ (ಪಂಜಾಬ್​): ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಹಾಲಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿ ಎಂದು ರಾಹುಲ್ ಗಾಂಧಿ ಇಂದು ಘೋಷಿಸಿದ್ದಾರೆ.

ಇಂದು ಲುಧಿಯಾನದಲ್ಲಿ ನಡೆದ ವರ್ಚುವಲ್ ರ್ಯಾಲಿಯಲ್ಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತು ಚನ್ನಿ ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡು ತಮ್ಮೊಳಗಿನ ಕೋಪವನ್ನು ತೊರೆದಿದ್ದಾರೆ. ಅಚ್ಚರಿಯ ಒಡನಾಟವನ್ನು ಕಂಡ ರಾಹುಲ್​ ಗಾಂಧಿ ಅವರು ಇದರ ಬೆನ್ನಲ್ಲೇ "ಚನ್ನಿ ಅವರು ಬಡ ಕುಟುಂಬದಿಂದ ಬಂದವರು, ಇವರು ಚುನಾವಣೆಯನ್ನು ಎದುರಿಸಲಿದ್ದಾರೆ" ಎಂದು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಅವರ ಹೆಸರನ್ನು ಸೂಚಿಸಿದ್ದಾರೆ. ಸಿಎಂ ಅಭ್ಯರ್ಥಿ ಟಿಕೆಟ್​ ಫೈಟ್​ನಲ್ಲಿ ಸಿಧು ಮುಂಚೂಣಿಯಲ್ಲಿದ್ದರು. ಆದರೆ ಚನ್ನಿಗೆ ಮಣೆ ಹಾಕಲಾಗಿದೆ.

  • #WATCH | Congress leader Rahul Gandhi announces Congress' chief ministerial candidate for the upcoming Punjab Assembly elections 2022

    "Punjab CM will come from a poor family, Chaani will be CM face for the upcoming Punjab Assembly elections," says Rahul Gandhi pic.twitter.com/SvnhvYAY3r

    — ANI (@ANI) February 6, 2022 " class="align-text-top noRightClick twitterSection" data=" ">

ಬಳಿಕ ಮಾತನಾಡಿದ ನವಜೋತ್ ಸಿಂಗ್ ಸಿಧು, "ರಾಹುಲ್ ಗಾಂಧಿಯವರ ನಿರ್ಧಾರವನ್ನು ನಾನು ಒಪ್ಪಿಕೊಂಡಿದ್ದೇನೆ. ನನಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಿದರೆ, ನಾನು ಮಾಫಿಯಾವನ್ನು ಕೊನೆಗೊಳಿಸುತ್ತೇನೆ. ಜನರ ಜೀವನವನ್ನು ಸುಧಾರಿಸುತ್ತೇನೆ. ಅಧಿಕಾರ ನೀಡದಿದ್ದರೆ, ನೀವು ಯಾರನ್ನು ಸಿಎಂ ಮಾಡುತ್ತೀರೋ ಅವರ ಜೊತೆ ನಗುನಗುತ್ತಾ ನಡೆಯುತ್ತೇನೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: 'ಕೈ' ವಿರುದ್ಧ ತೊಡೆತಟ್ಟಿದ ಪಂಜಾಬ್​ ಸಿಎಂ ಸಹೋದರ: ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚನ್ನಿ, "ಎಲ್ಲರಿಗೂ ಧನ್ಯವಾದಗಳು. ಇದು ನಾನು ಒಬ್ಬಂಟಿಯಾಗಿ ಹೋರಾಡಲು ಸಾಧ್ಯವಾಗದ ದೊಡ್ಡ ಯುದ್ಧ. ನನ್ನಲ್ಲಿ ಹಣವಿಲ್ಲ, ಹೋರಾಡಲು ಧೈರ್ಯವಿಲ್ಲ. ಪಂಜಾಬ್‌ನ ಜನರು ಈ ಯುದ್ಧದಲ್ಲಿ ಹೋರಾಡುತ್ತಾರೆ" ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.