ETV Bharat / bharat

ವಿಕ್ರಮ್​ನನ್ನು ಕಂಡು ಹಿಡಿದ ಚಂದ್ರಯಾನ 2 ಆರ್ಬಿಟರ್​.. ಟ್ವೀಟ್​ ಪೋಸ್ಟ್​ ಡಿಲೀಟ್​ ಮಾಡಿದ ಇಸ್ರೋ..

author img

By ETV Bharat Karnataka Team

Published : Aug 25, 2023, 11:10 AM IST

Updated : Aug 25, 2023, 12:05 PM IST

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಎರಡು ಚಿತ್ರಗಳನ್ನು ಹಂಚಿಕೊಂಡಿತ್ತು. ಅದರಲ್ಲಿ ಚಂದ್ರಯಾನ 2 ರ ಆರ್ಬಿಟರ್ ಹೈ-ರೆಸಲ್ಯೂಶನ್ ಕ್ಯಾಮೆರಾದಿಂದ ಸೆರೆಹಿಡಿಯಲಾಗಿದ್ದ ಫೋಟೋವನ್ನು ಬಾಹ್ಯಾಕಾಶ ಸಂಸ್ಥೆ ಡಿಲಿಟ್​ ಮಾಡಿದೆ.

Orbiter circling Moon captures Vikram Lander  ISRO shares  deletes X post  Chandrayaan 2 Orbiter  ಟ್ವೀಟ್​ ಪೋಸ್ಟ್​ ಡಿಲೀಟ್​ ಮಾಡಿದ ಇಸ್ರೋ  ವಿಕ್ರಮ್​ನನ್ನು ಕಂಡು ಹಿಡಿದ ಚಂದ್ರಯಾನ 2 ಆರ್ಬಿಟರ್  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ  ಚಂದ್ರಯಾನ 2 ರ ಆರ್ಬಿಟರ್  ಭಾರತೀಯ ಮಿಷನ್ ಮೂನ್ ಅಂದರೆ ಚಂದ್ರಯಾನ  ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯಿತು  ಹೈ ರೆಸಲ್ಯೂಶನ್ ಕ್ಯಾಮೆರಾ
ಟ್ವೀಟ್​ ಪೋಸ್ಟ್​ ಡಿಲೀಟ್​ ಮಾಡಿದ ಇಸ್ರೋ..

ಹೈದರಾಬಾದ್: ಭಾರತೀಯ ಮಿಷನ್ ಮೂನ್ ಅಂದರೆ ಚಂದ್ರಯಾನ-3 ಬುಧವಾರ ಸಂಜೆ 6:04 ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯಿತು. ಇದರೊಂದಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಗುರುವಾರ, ರೋವರ್ ಪ್ರಗ್ಯಾನ್ ಲ್ಯಾಂಡರ್‌ನಿಂದ ಹೊರಬಂದು ಕೆಲಸ ಮಾಡಲು ಪ್ರಾರಂಭಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ. ಇಂದು ಅಂದರೆ ಶುಕ್ರವಾರದಂದು ಇಸ್ರೋ ವಿಕ್ರಮ್ ಲ್ಯಾಂಡರ್‌ನ ಹೊಸ ಚಿತ್ರವನ್ನು ಸೆರೆ ಹಿಡಿದಿದೆ. ಇದು ಚಂದ್ರಯಾನ 2 ರ ಆರ್ಬಿಟರ್‌ನ ಫೋಟೋವಾಗಿದೆ.

ಚಂದ್ರಯಾನ-2 ಆರ್ಬಿಟರ್‌ನಲ್ಲಿ ಹೈ ರೆಸಲ್ಯೂಶನ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದೀಗ ಚಂದ್ರನ ಸುತ್ತ ಇರುವ ಕ್ಯಾಮೆರಾಗಳಲ್ಲಿ ಇದು ಅತ್ಯುತ್ತಮ ರೆಸಲ್ಯೂಶನ್ ಹೊಂದಿರುವ ಕ್ಯಾಮೆರಾವಾಗಿದೆ. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ನಂತರ ಈ ಚಿತ್ರವನ್ನು ತೆಗೆದುಕೊಳ್ಳಲಾಗಿದೆ. ಚಂದ್ರಯಾನ-2 ರ ಆರ್ಬಿಟರ್ ಚಂದ್ರನ ಕಕ್ಷೆಯಲ್ಲಿ ಚಂದ್ರನ ಸುತ್ತ ಸುತ್ತುತ್ತಿದೆ. ಚಂದ್ರಯಾನ-2 ಆರ್ಬಿಟರ್ ಚಂದ್ರಯಾನ-3 ಲ್ಯಾಂಡರ್‌ಗೆ 'ನಾನು ನಿನ್ನನ್ನು ಗಮನಿಸುತ್ತಿದ್ದೇನೆ' ಎಂದು ಹೇಳಿದೆ ಅಂತಾ ಇಸ್ರೋ ಟ್ವೀಟ್‌ನಲ್ಲಿ ಬರೆದಿದೆ. ಆದರೆ, ಈ ಟ್ವೀಟ್ ಅನ್ನು ಇಸ್ರೋ ನಂತರ ಡಿಲಿಟ್ ಮಾಡಿದೆ.

ಚಂದ್ರಯಾನ-3 ಮಿಷನ್ ಅಡಿಯಲ್ಲಿ ಲ್ಯಾಂಡರ್ ವಿಕ್ರಮ್‌ನ ಎಲ್ಲ ಚಟುವಟಿಕೆಗಳು ಮತ್ತು ವ್ಯವಸ್ಥೆಗಳು ಸಾಮಾನ್ಯವಾಗಿದೆ. ಲ್ಯಾಂಡರ್ ಮಾಡ್ಯೂಲ್‌ನ ILSA, RAMBHA ಮತ್ತು ChaSTE ಪೇಲೋಡ್‌ಗಳನ್ನು ಕಾರ್ಯಗತಗೊಳಿಸಲಾಗಿದೆ. ರೋವರ್ ಪ್ರಗ್ಯಾನ್ ಕೂಡ ಕಾರ್ಯಾಚರಣೆ ಆರಂಭಿಸಿದೆ ಎಂದು ಇಸ್ರೋ ಈ ಹಿಂದೆ ಟ್ವೀಟ್‌ನಲ್ಲಿ ತಿಳಿಸಿದೆ.

ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲೆ ಇಳಿಯುವ ಮೊದಲು ಕೆಲವು ಚಿತ್ರಗಳನ್ನು ಸಹ ತೆಗೆದಿದೆ, ಇದನ್ನು ಇಸ್ರೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಚಂದ್ರಯಾನ-3 ಮಿಷನ್‌ನ ಯಶಸ್ಸಿನೊಂದಿಗೆ, ಭಾರತವು ಅಮೆರಿಕ, ರಷ್ಯಾ ಮತ್ತು ಚೀನಾದ ನಂತರ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದ ನಾಲ್ಕನೇ ದೇಶವಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಇಸ್ರೋ ಬಿಡುಗಡೆ ಮಾಡಿರುವ ಹೊಸ ಚಿತ್ರದಲ್ಲಿ ಚಂದ್ರಯಾನ-2ರ ಆರ್ಬಿಟರ್ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದಕ್ಕೂ ಮುನ್ನ ಇಸ್ರೋ ಗುರುವಾರ ಬೆಳಗ್ಗೆ ಟ್ವೀಟ್​ನಲ್ಲಿ ಮಾಹಿತಿ ನೀಡಿದ್ದು, “ಚಂದ್ರಯಾನ-3 ರೋವರ್: ಮೇಡ್ ಇನ್ ಇಂಡಿಯಾ ಮೇಡ್ ಫಾರ್ ದಿ ಮೂನ್! ರೋವರ್ ಲ್ಯಾಂಡರ್‌ನಿಂದ ಕೆಳಗಿಳಿದು ಚಂದ್ರನ ಮೇಲೆ ಕಾಲಿಟ್ಟಿತು ಎಂದು ತಿಳಿಸಿತ್ತು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದರೆ ಇಸ್ರೋ ಕಳೆದ ತಿಂಗಳು ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಅನ್ನು ಉಡಾವಣೆ ಮಾಡಿತ್ತು. ಈಗ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಚಂದ್ರನ ಮೇಲೆ ಇಳಿದಿದ್ದು, 14 ದಿನಗಳವರೆಗೆ ಕೆಲಸ ಮಾಡುತ್ತದೆ. ಇದು 1 ಚಂದ್ರನ ಒಂದು ದಿನಕ್ಕೆ ಸಮಾನವಾಗಿರುತ್ತದೆ.

ಓದಿ: ಲ್ಯಾಂಡರ್ ಸೆರೆಹಿಡಿದ ಚಂದ್ರನ ಚಿತ್ರಗಳ ವಿಡಿಯೋ ಬಿಡುಗಡೆಗೊಳಿಸಿದ ಇಸ್ರೋ-ನೋಡಿ

Last Updated : Aug 25, 2023, 12:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.