ETV Bharat / bharat

ಪಂಜಾಬ್​​ ಚುನಾವಣೆಗೂ ಮುನ್ನ AAPಗೆ ಆನೆಬಲ.. ಚಂಡೀಗಢ ಮುನ್ಸಿಪಲ್​ ಎಲೆಕ್ಷನ್​​ನಲ್ಲಿ ಭರ್ಜರಿ ಜಯಭೇರಿ

author img

By

Published : Dec 27, 2021, 3:54 PM IST

Chandigarh Municipal Corp poll results: ಚಂಡೀಗಢ ಮುನ್ಸಿಪಲ್​​ ಕಾರ್ಪೂರೇಷನ್​​ ಎಲೆಕ್ಷನ್​ ಫಲಿತಾಂಶ ಬಹಿರಂಗಗೊಂಡಿದ್ದು, ಆಮ್​ ಆದ್ಮಿ ಪಕ್ಷ 14 ವಾರ್ಡ್​​ಗಳಲ್ಲಿ ಭರ್ಜರಿ ಗೆಲುವು ದಾಖಲು ಮಾಡಿದೆ.

Chandigarh Municipal Corp poll results
Chandigarh Municipal Corp poll results

ಚಂಡೀಗಢ(ಪಂಜಾಬ್​​): ಮುಂದಿನ ವರ್ಷದ ಆರಂಭದಲ್ಲೇ ಪಂಜಾಬ್​ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಬಿಜೆಪಿ, ಕಾಂಗ್ರೆಸ್​​ ಸೇರಿದಂತೆ ಆಮ್​ ಆದ್ಮಿ ಕೂಡ ಭರ್ಜರಿಯಾಗಿ ತಯಾರಿ ಮಾಡಿಕೊಳ್ಳುತ್ತಿದೆ. ಇದರ ಮಧ್ಯೆ ಚಂಡೀಗಢ ಮುನ್ಸಿಪಲ್​ ಕಾರ್ಪೋರೇಷನ್​​ ಚುನಾವಣೆಯಲ್ಲಿ ಎಎಪಿ ಭರ್ಜರಿ ಗೆಲುವು ದಾಖಲು ಮಾಡಿದೆ.

  • Chandigarh Municipal Corp poll results | Aam Aadmi Party wins in 14 wards, BJP wins in 12 wards, Congress wins in 8 wards, Shiromani Akali Dal wins in 1 ward, as per State Election Commission pic.twitter.com/pab67hMnLr

    — ANI (@ANI) December 27, 2021 " class="align-text-top noRightClick twitterSection" data=" ">

35 ವಾರ್ಡ್​​​ಗಳ ಪೈಕಿ ಆಮ್​​ ಆದ್ಮಿ 14 ವಾರ್ಡ್​​​ಗಳಲ್ಲಿ ಗೆಲುವು ದಾಖಲು ಮಾಡಿದ್ದು, ಬಿಜೆಪಿ 12, ಕಾಂಗ್ರೆಸ್​​ 8 ಹಾಗೂ ಶಿರೋಮಣಿ ಅಕಾಲಿ ದಳ 1 ಸ್ಥಾನದಲ್ಲಿ ಗೆಲುವು ಸಾಧಿಸಿದೆ.

ಆಮ್​ ಆದ್ಮಿ ಭರ್ಜರಿ ಗೆಲುವು ದಾಖಲು ಮಾಡುತ್ತಿದ್ದಂತೆ ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​​, ಚಂಡೀಗಢ ಮುನ್ಸಿಪಲ್​ ಕಾರ್ಪೋರೇಷನ್​​ ಗೆಲುವು ಮುಂಬರುವ ಪಂಜಾಬ್​ ಚುನಾವಣೆಗೆ ದಿಕ್ಸೂಚಿಯಾಗಲಿದ್ದು, ಭ್ರಷ್ಟ ಅಧಿಕಾರದ ವಿರುದ್ಧ ಕಂಗೆಟ್ಟ ಜನರು ಇದೀಗ ಎಎಪಿಗೆ ಮತ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

  • चंडीगढ़ नगर निगम में आम आदमी पार्टी की ये जीत पंजाब में आने वाले बदलाव का संकेत है।चंडीगढ़ के लोगों ने आज भ्रष्ट राजनीति को नकारते हुए AAP की ईमानदार राजनीति को चुना है।

    AAP के सभी विजयी उम्मीदवारों एवं सभी कार्यकर्ताओं को बहुत-बहुत बधाई।

    इस बार पंजाब बदलाव के लिए तैयार है।

    — Arvind Kejriwal (@ArvindKejriwal) December 27, 2021 " class="align-text-top noRightClick twitterSection" data=" ">

ಇದನ್ನೂ ಓದಿರಿ: ಶೂಟಿಂಗ್​​ ವೇಳೆ ಪಾಪ್​ ಗಾಯಕಿಗೆ ಕಚ್ಚಿದ ಹಾವು.. ವಿಡಿಯೋ ವೈರಲ್​​

ವಿಶೇಷವೆಂದರೆ ಚುನಾವಣೆಯಲ್ಲಿ ಬಿಜೆಪಿ ಮೇಯರ್​ಗಳಾಗಿದ್ದ ರವಿ ಕಾಂತ್​ ಶರ್ಮಾ ಹಾಗೂ ದೇವಿಸ್​​ ಮುದ್ಗಿಲ್​​​ ಆಮ್​​ ಆದ್ಮಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಸೋಲು ಕಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 20 ವಾರ್ಡ್​​​ಗಳಲ್ಲಿ ಗೆಲುವು ದಾಖಲು ಮಾಡಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಆದರೆ, ಈ ಸಲ ಎಎಪಿ ಮೇಲುಗೈ ಸಾಧಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.