ETV Bharat / bharat

'ಅಧಿಕೃತ ಸಂಖ್ಯೆಗಿಂತ ದೇಶದಲ್ಲಿನ ಕೋವಿಡ್ ಸೋಂಕಿತರ​ ಸಾವು 7 ಪಟ್ಟು ಹೆಚ್ಚಿದೆ' - ವರದಿ ತಳ್ಳಿಹಾಕಿದ ಭಾರತ

author img

By

Published : Jun 13, 2021, 8:35 AM IST

ಭಾರತದ ಕೋವಿಡ್​​ ಸಾವಿನ ಕುರಿತು ಅಂತಾರಾಷ್ಟ್ರೀಯ ನಿಯತಕಾಲಿಕೆ ನೀಡಿದ ಮಾಹಿತಿ ಸಂಪೂರ್ಣವಾಗಿ ತಪ್ಪು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

Centre rejects the report that says India Covid Deaths 7 Times More than official
ಭಾರತದ ಕೋವಿಡ್​ ಸಾವು

ನವದೆಹಲಿ: ಅಧಿಕೃತ ಮಾಹಿತಿಗಿಂತ ಭಾರತದದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಐದರಿಂದ ಏಳು ಪಟ್ಟು ಹೆಚ್ಚಿದೆ ಎಂದು ಅಂತಾರಾಷ್ಟ್ರೀಯ ನಿಯತಕಾಲಿಕೆಯೊಂದು ವರದಿ ಮಾಡಿದ್ದು, ಇದನ್ನು ಭಾರತ ಸರ್ಕಾರ ತಳ್ಳಿಹಾಕಿದೆ. ಇದು ಸಂಪೂರ್ಣವಾಗಿ ಆಧಾರರಹಿತವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

'ದಿ ಎಕನಾಮಿಸ್ಟ್' ಮ್ಯಾಗಜಿನ್​​ ಹೀಗೆ ವರದಿ ಮಾಡಿದ್ದು, ಈ ವಿಶ್ಲೇಷಣೆಯು ಯಾವುದೇ ಸಾಂಕ್ರಾಮಿಕ ರೋಗಶಾಸ್ತ್ರೀಯ ಪುರಾವೆಗಳಿಲ್ಲದೆ ತಪ್ಪು ದತ್ತಾಂಶವನ್ನು ನೀಡಿದೆ. ಅಂದಾಜಿನಂತೆ ನಿಯತಕಾಲಿಕೆಯು ಮಾಡುವ ಅಧ್ಯಯನಗಳು ಯಾವುದೇ ದೇಶ ಅಥವಾ ಪ್ರದೇಶದ ಮರಣ ಪ್ರಮಾಣವನ್ನು ನಿರ್ಧರಿಸುವ ಸಾಧನವಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಕೋವ್ಯಾಕ್ಸಿನ್​ನಲ್ಲಿ ವೈಜ್ಞಾನಿಕ ಮಾನದಂಡ ಕಾಯ್ದುಕೊಳ್ಳಲು ಬದ್ಧ: ಭಾರತ್ ಬಯೋಟೆಕ್ ಆಶ್ವಾಸನೆ

ಅಲ್ಲದೇ ಕೋವಿಡ್​-19 ಸಂಬಂಧಿತ ಸಾವು-ನೋವುಗಳ ಸಂಖ್ಯೆಯಲ್ಲಿ ಯಾವುದೇ ಊಹಾಪೋಹ ತಪ್ಪಿಸಲು, ವಿಶ್ವ ಆರೋಗ್ಯ ಸಂಸ್ಥೆ (WHO) ಶಿಫಾರಸು ಮಾಡಿದಂತೆ ಸರ್ಕಾರವು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮಾರ್ಗಸೂಚಿಗಳನ್ನು ಅನುಸರಿಸುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಕೊರೊನಾ ಎರಡನೇ ಅಲೆಯ ಭೀಕರ ಪರಿಸ್ಥಿತಿ ಎದುರಿಸುತ್ತಿರುವ ಭಾರತದಲ್ಲಿ ಒಟ್ಟು 2,93,59,155 ಮಂದಿಗೆ ವೈರಸ್​ ಅಂಟಿದ್ದು, 3,67,081 ಜನರು ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ ಇದಕ್ಕಿಂತಲೂ ಐದರಿಂದ ಏಳು ಪಟ್ಟು ಹೆಚ್ಚಿದೆ ಎಂದು 'ದಿ ಎಕನಾಮಿಸ್ಟ್' ನಿಯತಕಾಲಿಕೆ ವರದಿ ಮಾಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.