ETV Bharat / bharat

2 ತಿಂಗಳ ಬಳಿಕ ತಾಜ್‌ ವೀಕ್ಷಣೆಗೆ ಸಿಕ್ತು ಚಾನ್ಸ್; ಫೋಟೋ ತೆಗೆದು ಪ್ರವಾಸಿಗರು ಖುಷ್!

author img

By

Published : Jun 16, 2021, 12:20 PM IST

ಆಗ್ರಾದಲ್ಲಿರುವ ಪ್ರೇಮ ಸ್ಮಾರಕ ತಾಜ್​ಮಹಲ್ ಸೇರಿದಂತೆ, ಕೇಂದ್ರ ಸರ್ಕಾರದಿಂದ ಸಂರಕ್ಷಿಸಲ್ಪಡುವ ಎಲ್ಲಾ ಸ್ಮಾರಕಗಳನ್ನು ಇಂದಿನಿಂದ ಮತ್ತೆ ತೆರೆಯಲಾಗಿದೆ. ಸ್ಮಾರಕಗಳಿಗೆ ಭೇಟಿ ನೀಡುವವರು ಕಡ್ಡಾಯವಾಗಿ ಮಾಸ್ಕ್​​ ಧರಿಸಿರಬೇಕು ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಭಾರತೀಯ ಪುರಾತತ್ವ ಇಲಾಖೆ ಸೂಚನೆ ನೀಡಿದೆ.

Centrally protected monuments open from today
ಪ್ರವಾಸಿಗರಿಗೆ ತಾಜ್​ಮಹಲ್​ ಪ್ರವೇಶಕ್ಕೆ ಅವಕಾಶ

ನವದೆಹಲಿ: ಕೊರೊನಾ ಕಾರಣದಿಂದಾಗಿ ದೇಶದಲ್ಲಿ ಬಹುತೇಕ ಪ್ರವಾಸಿ ತಾಣಗಳು ಮುಚ್ಚಲ್ಪಟ್ಟಿದ್ದವು. ಸೋಂಕು ಕ್ರಮೇಣ ಕಡಿಮೆಯಾಗುತ್ತಿದ್ದು ಕೇಂದ್ರ ಸರ್ಕಾರದಿಂದ ಸಂರಕ್ಷಿತ ಸ್ಮಾರಕಗಳು/ತಾಣಗಳು ಮತ್ತು ವಸ್ತು ಸಂಗ್ರಹಾಲಯಗಳನ್ನು ಪ್ರವಾಸಿಗರಿಗೆ ತೆರೆಯಲು ನಿರ್ಧರಿಸಲಾಗಿದೆ.

Centrally protected monuments open from today
ತಾಜ್​ಮಹಲ್​ ಪ್ರವೇಶಕ್ಕೂ ಮುನ್ನ ಪೊಲೀಸ್ ಸಿಬ್ಬಂದಿಯಿಂದ ತಪಾಸಣೆ

ಆಗ್ರಾದಲ್ಲಿರುವ ಐತಿಹಾಸಿಕ ಪ್ರೇಮ ಸ್ಮಾರಕ ತಾಜ್​ಮಹಲ್ ಸೇರಿದಂತೆ, ಕೇಂದ್ರ ಸರ್ಕಾರದಿಂದ ಸಂರಕ್ಷಿಸಲ್ಪಡುವ ಎಲ್ಲಾ ಸ್ಮಾರಕಗಳನ್ನು ಇಂದಿನಿಂದ ಮತ್ತೆ ತೆರೆಯಲಾಗಿದೆ. ಸುಮಾರು 2 ತಿಂಗಳ ಬಳಿಕ ತಾಜ್​ಮಹಲ್​ ಪ್ರವೇಶಕ್ಕೆ ಅವಕಾಶ ದೊರೆತಿದ್ದು, ಪ್ರವಾಸಿಗರು ಫೋಟೋ ತೆಗೆದು ಖುಷಿಪಟ್ಟರು.

  • All CPMs, sites & Museums under @ASIGoI to be opened from 16th June 2021. The opening will be in strict compliance with local administration orders. https://t.co/B9ZVAGeCDr

    — Archaeological Survey of India (@ASIGoI) June 14, 2021 " class="align-text-top noRightClick twitterSection" data=" ">

ತಾಜ್​ಮಹಲ್​ಗೆ ಏಕಕಾಲಕ್ಕೆ 650 ಕ್ಕೂ ಹೆಚ್ಚು ಜನರನ್ನು ಅನುಮತಿಸಲಾಗುವುದಿಲ್ಲ. ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಸ್ಮಾರಕದ ಯಾವುದೇ ಭಾಗವನ್ನು ಮುಟ್ಟುವಂತಿಲ್ಲ. ಭೇಟಿ ನೀಡುವವರು ಕಡ್ಡಾಯವಾಗಿ ಮಾಸ್ಕ್​​ ಧರಿಸಿರಬೇಕು ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಭಾರತೀಯ ಪುರಾತತ್ವ ಇಲಾಖೆ ಸೂಚನೆ ನೀಡಿದೆ.

Centrally protected monuments open from today
ಆಗ್ರಾದಲ್ಲಿರುವ ತಾಜ್​ಮಹಲ್​ ವಿಹಂಗಮ ನೋಟ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.