ETV Bharat / bharat

ಕೋಟಿ ಕೋಟಿ ಖೋಟಾ ನೋಟು; ಜ್ಯೋತಿಷಿಯ ಮನೆಯಲ್ಲಿತ್ತು 17 ಕೋಟಿ ರೂ. ನಕಲಿ ನೋಟು

author img

By

Published : Jun 23, 2021, 2:44 PM IST

ಜ್ಯೋತಿಷಿ ಮುರಳಿ ಕೃಷ್ಣ ಶರ್ಮಾ ಎಂಬಾತ ಎರಡು ದಿನಗಳ ಹಿಂದೆ ತನ್ನ ಮನೆಯಲ್ಲಿದ್ದ ಬೆಲೆಬಾಳುವ ಹವಳ, ವಜ್ರಗಳು, ಚಿನ್ನದ ಆಭರಣಗಳು ಕಳುವಾಗಿವೆ ಎಂದು ಎಲ್​ಬಿ ನಗರ ಠಾಣೆಗೆ ದೂರು ನೀಡಿದ್ದನು. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದರು. ಆದರೆ ತನಿಖಾ ಹಂತದಲ್ಲಿ ಪೊಲೀಸರಿಗೆ ದೂರಿನ ಮೇಲೆ ಅನುಮಾನ ಮೂಡಿದೆ. ಆತ ಸುಳ್ಳು ದೂರು ನೀಡಿರುವುದಾಗಿ ತಿಳಿದು ಬಂದಿದೆ.

ನಕಲಿ ನೋಟು
ನಕಲಿ ನೋಟು

ಹೈದರಾಬಾದ್(ತೆಲಂಗಾಣ): ನಗರದ ಎಲ್​ಬಿ ನಗರದಲ್ಲಿ ಜ್ಯೋತಿಷ್ಯರೋರ್ವರು ತಮ್ಮ ಮನೆಯಲ್ಲಿ ಆಭರಣ, ವಜ್ರಗಳು ಕಳುವಾಗಿದೆ ಎಂದು ಠಾಣೆಗೆ ದೂರು ನೀಡಿದ್ದರು. ಆದರೆ ಈಗ ಈ ಕಹಾನಿಗೆ ಟ್ವಿಸ್ಟ್​ ದೊರಕಿದೆ. ಆ ಜ್ಯೋತಿಷ್ಯನ ಮನೆಯಲ್ಲಿ ಕೋಟಿ ಕೋಟಿ ಖೋಟಾ ನೋಟುಗಳು ಪತ್ತೆಯಾಗಿವೆ.

ನಗರದ ನಾಗೋಲ್​ನ ಬಂಗ್ಲಗೂಡ ನಿವಾಸಿಯಾಗಿರುವ ಜ್ಯೋತಿಷಿ ಮುರಳಿ ಕೃಷ್ಣ ಶರ್ಮಾ ಎಂಬಾತ ಎರಡು ದಿನಗಳ ಹಿಂದೆ ತನ್ನ ಮನೆಯಲ್ಲಿದ್ದ ಬೆಲೆಬಾಳುವ ಹವಳ, ವಜ್ರಗಳು, ಚಿನ್ನದ ಆಭರಣಗಳು ಕಳುವಾಗಿದೆ ಎಂದು ಎಲ್​ಬಿ ನಗರ ಠಾಣೆಗೆ ದೂರು ನೀಡಿದ್ದನು. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದರು. ಆದರೆ ತನಿಖಾ ಹಂತದಲ್ಲಿ ಪೊಲೀಸರಿಗೆ ದೂರಿನ ಮೇಲೆ ಅನುಮಾನ ಮೂಡಿದೆ. ಆತ ಸುಳ್ಳು ದೂರು ನೀಡಿರುವುದಾಗಿ ತಿಳಿದು ಬಂದಿದೆ.

ಅನುಮಾನದ ಮೇಲೆ ಪೊಲೀಸರು ಆತನ ಮನೆ ಜಪ್ತಿ ಮಾಡಿದ್ದಾರೆ. ಈ ಸಂದರ್ಭ ಮುರಳಿ ಕೃಷ್ಣನ ಮನೆಯಲ್ಲಿ 17.72 ಕೋಟಿ ರೂಪಾಯಿಯ ನಕಲಿ 2000 ರೂ. ಮುಖಬೆಲೆಯ ಗರಿಗರಿ ನೋಟು ಪತ್ತೆಯಾಗಿವೆ.

ಜ್ಯೋತಿಷಿಯ ಕರಾಳ ಮುಖ:

ಜ್ಯೋತಿಷಿಯ ಮುಖವಾಡ ಧರಿಸಿದ ಈತ ಈ ಹಿಂದೆ ಹವಾಲಾ ದಂಧೆ ನಡೆಸುತ್ತಿದ್ದ. 90 ಕೋಟಿ ರೂ. ಹವಾಲಾ ಹಣದ ಪ್ರಕರಣದಲ್ಲಿ ಒಂದು ಬಾರಿ ಜೈಲಿಗೂ ಹೋಗಿ ಬಂದಿರುವುದಾಗಿ ತಿಳಿದುಬಂದಿದೆ. ಈತನ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಿದ ಪೊಲೀಸರು ಹಲವಾರು ಮಾಹಿತಿಗಳನ್ನು ಕೆದಕಿದ್ದಾರೆ. ಈ ಮುರಳಿ ಕೃಷ್ಣನ ದೂರದ ಸಂಬಂಧಿಯೋರ್ವ ಈತನೊಂದಿಗೆ ಕೆಲಸ ಮಾಡಲು ಪವನ್​ ಎಂಬಾತನನ್ನು ಪರಿಚಯಿಸಿದ್ದ. ಆತನನ್ನು ಕೆಲಸಕ್ಕಾಗಿ ಶರ್ಮಾ ಹೈದರಾಬಾದ್​ಗೆ ಕರೆತಂದಿದ್ದನು. ಮುರಳಿ ಕೃಷ್ಣನ ಎಲ್ಲಾ ಚಲನವಲನಗಳನ್ನು ಪವನ್​ ಗಮನಿಸುತ್ತಿದ್ದನು. ಆತನ ಹವಾಲಾ ದಂಧೆ, ಐಶಾರಾಮಿ ಜೀವನದ ಮೇಲೆ ಕಣ್ಣಿಟ್ಟಿದ್ದ ಪವನ್​ ಹಣ ದೋಚಲು ಸ್ಕೆಚ್​ ಹಾಕಿದ್ದನು. ಅದರಂತೆ ಕೆಲ ಜನರನ್ನು ಒಟ್ಟು ಸೇರಿಸಿ ಹಣ ಕಳ್ಳತನ ಮಾಡಿದ್ದನು.

ಇತ್ತ ಹಣ ಕಳೆದುಕೊಂಡ ಮುರಳಿ ಕೃಷ್ಣ ಶರ್ಮಾ ಹಣದ ವಿಚಾರ ತಿಳಿಸದೆ ಕೇವಲ ಆಭರಣಗಳ ಕುರಿತು ಮಾತ್ರ ಪೊಲೀಸರಿಗೆ ದೂರು ನೀಡಿದ್ದನು. ಇದೀಗ ವಿಚಾರಣೆಯಲ್ಲಿ ಎಲ್ಲವೂ ಬಟಾಬಯಲಾಗಿದ್ದು, ಮುರಳಿ ಕೃಷ್ಣನ ಬಳಿಯಿದ್ದ 17.72 ಕೋಟಿ ರೂ ಖೋಟಾ ನೋಟು ಹಾಗೂ 90 ಕೋಟಿ ರೂ. ಹವಾಲಾ ಹಣದ ಪ್ರಕರಣದಲ್ಲಿ ಎಲ್​ಬಿ ನಗರ ಪೊಲೀಸರು ಬಂಧಿಸಿದ್ದಾರೆ. ಈತನೊಂದಿಗೆ ಇನ್ನೂ 6 ಮಂದಿಯನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.