ETV Bharat / bharat

ಸಿಬಿಎಸ್‌ಸಿ: ತಾಯಿ ಸಾವಿನ ಬಳಿಕ ತಂದೆಯಿಂದಲೂ ದೂರಾಗಿ 99.4% ಅಂಕಗಳಿಸಿದ ವಿದ್ಯಾರ್ಥಿನಿ

author img

By

Published : Jul 25, 2022, 9:00 AM IST

ಸಿಬಿಎಸ್​ಸಿ 10 ನೇ ತರಗತಿ ಪರೀಕ್ಷೆಯಲ್ಲಿ ಶ್ರೀಜಾ ಎಂಬ ವಿದ್ಯಾರ್ಥಿನಿ ಅದ್ವಿತೀಯ ಸಾಧನೆ ಮಾಡಿ ಬಿಹಾರ ರಾಜ್ಯಕ್ಕೆ ಟಾಪರ್​ ಆಗಿ ಹೊರಹೊಮ್ಮಿದ್ದಾಳೆ.

ಸಿಬಿಎಸ್​​ಇ 10th ಟಾಪರ್
CBSE 10th Board

ನವದೆಹಲಿ: ಬಿಹಾರದ ವಿದ್ಯಾರ್ಥಿನಿಯೊಬ್ಬಳು ಸಿಬಿಎಸ್‌ಇ 10ನೇ ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿದ್ದಾಳೆ. ತಾಯಿಯ ಮರಣಾ ನಂತರ ತಂದೆಯಿಂದಲೂ ದೂರವಾಗಿ ಅತೀ ಹೆಚ್ಚು ಅಂಕ ಗಳಿಸುವ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.

ಶ್ರೀಜಾ ಎಂಬ ಬಾಲಕಿ ಪರೀಕ್ಷೆಯಲ್ಲಿ ಶೇ 99.4ರಷ್ಚು ಅಂಕ ಗಳಿಸಿದ್ದು ರಾಜ್ಯಕ್ಕೆ ಅಗ್ರಸ್ಥಾನ ಪಡೆದಿದ್ದಾಳೆ. ಶ್ರೀಜಾಳ ಈ ಸಾಧನೆಯಿಂದ ಆಕೆಯ ಕುಟುಂಬಸ್ಥರಷ್ಟೇ ಅಲ್ಲದೇ, ಶಾಲೆ, ಸಮಾಜವೂ ಸಂತಸ ವ್ಯಕ್ತಪಡಿಸಿದೆ. ಮಾಧ್ಯಮಗಳೊಂದಿಗೆ ಸಂತಸದ ಕ್ಷಣ ಹಂಚಿಕೊಂಡ ವಿದ್ಯಾರ್ಥಿನಿ, "ನಾನು ನನ್ನ ಅಜ್ಜಿ, ಚಿಕ್ಕಪ್ಪ-ಚಿಕ್ಕಮ್ಮನೊಂದಿಗೆ ವಾಸಿಸುತ್ತಿದ್ದೇನೆ, ನನ್ನ ತಾಯಿಯ ಮರಣದ ನಂತರ ನಾನು ತಂದೆಯೊಂದಿಗೆ ಇಲ್ಲ. ಕೌಟುಂಬಿಕ ವಿಚಾರಗಳ ಕಡೆ ಹೆಚ್ಚು ಗಮನ ನೀಡದೆ, ಓದಿನಲ್ಲಿ ತೊಡಗಿಸಿಕೊಂಡೆ" ಎಂದಳು.

ಈ ಬಾರಿಯ ಸಿಬಿಎಸ್​ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ.94.40ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ.95.21ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದರೆ, ಶೇ.93.80ರಷ್ಟು ಹುಡುಗರು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಇದನ್ನೂ ಓದಿ: ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಪ್ರಕಟ: ಶೇ.94.40ರಷ್ಟು ವಿದ್ಯಾರ್ಥಿಗಳು ಪಾಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.