ETV Bharat / bharat

ಕಾರ್ತಿ ಚಿದಂಬರಂ ಆಪ್ತ ಎಸ್.ಭಾಸ್ಕರ್ ರಾಮನ್ ಬಂಧಿಸಿದ ಸಿಬಿಐ

author img

By

Published : May 18, 2022, 9:23 AM IST

ಕಾರ್ತಿ ಚಿದಂಬರಂ
ಕಾರ್ತಿ ಚಿದಂಬರಂ

ವೀಸಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಕಾರ್ತಿ ಚಿದಂಬರಂ ಅವರ ಸಹವರ್ತಿ ಎಸ್‌.ಭಾಸ್ಕರ್​ ರಾಮನ್‌ ವಿರುದ್ಧವೂ ಲಂಚ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಭಾಸ್ಕರ್ ರಾಮನ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಿಬಿಐ, ಬಳಿಕ ಬಂಧಿಸಿದೆ.

ನವದೆಹಲಿ: ವೀಸಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಅವರ ನಿಕಟವರ್ತಿ ಎಸ್.ಭಾಸ್ಕರ್ ರಾಮನ್ ಅವರನ್ನು ನಿನ್ನೆ ತಡರಾತ್ರಿ ವಿಚಾರಣೆ ನಡೆಸಿದ ಬಳಿಕ ಬಂಧಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ನಾಯಕ ಕಾರ್ತಿ ಚಿದಂಬರಂ ಅವರಿಗೆ ಸೇರಿದ ಮುಂಬೈ ಮತ್ತು ಚೆನ್ನೈನಲ್ಲಿರುವ ಮನೆ ಹಾಗು ಕಚೇರಿಗಳ ಮೇಲೆ ಮಂಗಳವಾರ (ನಿನ್ನೆ) ಬೆಳಗ್ಗೆ ಕೇಂದ್ರ ತನಿಖಾ ದಳ (ಸಿಬಿಐ) ದಾಳಿ ನಡೆಸಿತ್ತು. ನಿಯಮ ಮೀರಿ ನೆಲೆಸಿದ್ದ 260ಕ್ಕೂ ಹೆಚ್ಚು ಚೀನಿ ಪ್ರಜೆಗಳಿಗೆ ವೀಸಾ ಕೊಡಿಸಿ ಅದಕ್ಕೆ ಪ್ರತಿಯಾಗಿ 50 ಲಕ್ಷ ರೂ. ಲಂಚ ಪಡೆದಿರುವ ಗಂಭೀರ ಆರೋಪ ಸಂಬಂಧ ಸಿಬಿಐ ಹೊಸ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: ಕಾರ್ತಿ ಚಿದಂಬರಂ ನಿವಾಸ, ಕಚೇರಿಗಳ ಮೇಲೆ ಸಿಬಿಐ ದಾಳಿ

ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಕಾರ್ತಿ ಚಿದಂಬರಂ ಅವರ ಸಹವರ್ತಿ ಎಸ್‌. ಭಾಸ್ಕರ್​ ರಾಮನ್‌ ವಿರುದ್ಧವೂ ಲಂಚದ ಆರೋಪ ಕೇಳಿಬಂದಿತ್ತು. ಈ ಹಿಂದೆ ಐಎನ್‌ಎಕ್ಸ್‌ ಮೀಡಿಯಾ ಹಾಗೂ ಏರ್‌ಸೆಲ್ ಮ್ಯಾಕ್ಸಿಸ್ ಹಗರಣದಲ್ಲೂ ಸಿಬಿಐ ಕಾರ್ತಿ ಚಿದಂಬರಂ ಅವರನ್ನು ಹಲವು ಬಾರಿ ವಿಚಾರಣೆಗೊಳಪಡಿಸಿತ್ತು.

ಇದನ್ನೂ ಓದಿ: ಏರ್‌ಸೆಲ್ ಮ್ಯಾಕ್ಸಿಸ್ ಪ್ರಕರಣ: ಪಿ ಚಿದಂಬರಂಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದ ದೆಹಲಿ ಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.