ETV Bharat / bharat

ಹಿಮಾಚಲ ಪ್ರದೇಶ ಚುನಾವಣೆ: ಇಲ್ಲೂ ಜಾತಿರಾಜಕಾರಣಕ್ಕೇ ಪ್ರಾಮುಖ್ಯತೆ.. ಹೀಗಿದೆ ಇಲ್ಲಿನ ಜಾತಿ ಸಮೀಕರಣ!

author img

By

Published : Nov 11, 2022, 5:05 PM IST

Updated : Nov 14, 2022, 1:00 PM IST

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ - ಕಾಂಗ್ರೆಸ್​ ನೇರ ಹಣಾಹಣಿ ನಡೆಸಲಿದ್ದು, ಎರಡೂ ಪಕ್ಷದರೂ 28 ಕ್ಷೇತ್ರಗಳಲ್ಲಿ ರಜಪೂತ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದಾರೆ. ಈ ಮೂಲಕ ಜಾತಿ ರಾಜಕಾರಣ ಅದರಲ್ಲೂ ರಜಪೂತ ಸಮುದಾಯದ ಪ್ರಭಾವವನ್ನು ರಾಜ್ಯದಲ್ಲಿ ತೋರಿಸುವಂತೆ ಮಾಡಿದೆ.- ಸಂಜಯ್‌ ಕಪೂರ್, ರಾಜಕೀಯ ವಿಶ್ಲೇಷಕರು.

ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ ಜಾತಿ ರಾಜಕಾರಣ
caste politics will play a crucial role in the Himachal Pradesh elections

ಶಿಮ್ಲಾ: ನಾಳೆ ನಡೆಯಲಿರುವ ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜಾತಿ ರಾಜಕೀಯ ಅತ್ಯಂತ ನಿರ್ಣಯಕ ಪಾತ್ರ ವಹಿಸಲಿದೆ. ಉತ್ತರ ಪ್ರದೇಶ - ಬಿಹಾರದಲ್ಲಿನ ಮಾದರಿಯಲ್ಲಿ ಇಲ್ಲಿ ಜಾತಿ ಸಮೀಕರಣ ನಡೆಯದೇ ಹೋದರೂ ಸಿಎಂ ಜೈ ರಾಮ್​ ಠಾಕೂರ್​​ ಸೇರಿದಂತೆ ಆರರಲ್ಲಿ ಐದು ಮಂದಿ ರಜಪೂತ್​ ಸಮುದಾಯಕ್ಕೆ ಸೇರಿದವರು. ಠಾಕೂರ್​ ಹೊರತಾಗಿ ರಾಜ್ಯದ ಮೊದಲ ಸಿಎಂ ಆಗಿದ್ದ ಯಶವಂತ್​ ಪರ್ಮಾರ್​ ಕೂಡ ರಾಜಪೂತ್​​ ಸಮುದಾಯಕ್ಕೆ ಸೇರಿದ್ದವರಾಗಿದ್ದು, ನಾಲ್ಕು ಬಾರಿ ಅಧಿಕಾರದಲ್ಲಿದ್ದರು ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.

ಆರು ಬಾರಿ ಸಿಎಂ ಆಗಿದ್ದ ವೀರಭದ್ರ ಸಿಂಗ್​: ರಾಮಲಾಲ್​​ ಠಾಕೂರ್​​ ಎರಡು ಬಾರಿ ಹಿಮಾಚಲ ಸಿಎಂ ಆಗಿದ್ದರೆ, ಕಾಂಗ್ರೆಸ್​ನ ವೀರ್​ಭದ್ರ ಸಿಂಗ್​​ ಆರು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಇನ್ನು ಬಿಜೆಪಿಯ ಪ್ರೇಮ್​ ಕುಮಾರ್​ ಧುಮಲ್​ ಎರಡು ಬಾರಿ ರಾಜ್ಯದ ಸಿಎಂ ಆಗಿ ಚಿಕ್ಕಾಣಿ ಹಿಡಿದಿದ್ದರು. ಶಾಂತಕುಮಾರ್​ ರಾಜ್ಯದಲ್ಲಿ ಅಧಿಕಾರ ನಡೆಸಿದ ಏಕೈಕ ಬ್ರಾಹ್ಮಣ ಸಿಎಂ. ಇವರು ಎರಡು ಬಾರಿ ಸಿಎಂ ಆಗಿದ್ದರು.

ಹಿಮಾಚಲದಲ್ಲಿ ಶೇ 50 ರಷ್ಟು ಮೇಲ್ವರ್ಗದ ಜನ: 2011ರ ಜನಗಣತಿ ಅನುಸಾರ ಹಿಮಾಚಲ ಪ್ರದೇಶದಲ್ಲಿ ಶೇ 50ರಷ್ಟು ಮಂದಿ ಮೇಲ್ಜಾತಿಗೆ ಸೇರಿದ ಮತದಾರರೇ ಇದ್ದಾರೆ. ಇದರಲ್ಲಿ ರಜಪೂತರು ಶೇ 32.72ರಷ್ಟಿದ್ದರೆ, ಬ್ರಾಹ್ಮಣರು ಶೇ 18ರಷ್ಟಿದ್ದಾರೆ. ಇನ್ನು 25.22ರಷ್ಟು ಜನ ಪರಿಶಿಷ್ಟ ಜಾತಿಯವರಿದ್ದರೆ, ಶೇ 5.71ರಷ್ಟು ಜನ ಪ. ಪಂಗಡಕ್ಕೆ ಸೇರಿದವರು. ಒಬಿಸಿ ಶೇ 13.25ರಷ್ಟಿದ್ದರೆ, ಹಿಂದುಳಿದ ವರ್ಗದವರು ಶೇ 4.83ರಷ್ಟು ಮಂದಿ ರಾಜ್ಯದಲ್ಲಿದ್ದಾರೆ

ಡಿ.13ಕ್ಕೆ 13ನೇ ವಿಧಾನಸಭೆ ಅವಧಿ ಮುಕ್ತಾಯ: ಹಿಮಾಚಲ ಪ್ರದೇಶದ 13ನೇ ವಿಧಾನಸಭಾ ಅವಧಿ ಇದೇ ಡಿಸೆಂಬರ್​ನಲ್ಲಿ ಅಂತ್ಯವಾಗುತ್ತಿದೆ. ಈ ಸರ್ಕಾರದಲ್ಲಿ ಬಹುತೇಕ ಶಾಸಕರು ರಜಪೂತ್​ ಸಮುದಾಯಕ್ಕೆ ಸೇರಿದ್ದವರಾಗಿದ್ದಾರೆ. ಒಟ್ಟು 68 ಸ್ಥಾನ ಹೊಂದಿದ್ದು, ಇದರಲ್ಲಿ 48 ಸ್ಥಾನ ಮೀಸಲು ರಹಿತವಾಗಿದೆ. ಇದರಲ್ಲಿ ರಜಪೂತ್​ ಸಮುದಾಯಕ್ಕೆ ಸೇರಿದ 33 ಶಾಸಕರಿದ್ದು, ಇದರಲ್ಲಿ 18 ಮಂದಿ ಬಿಜೆಪಿ ಶಾಸಕರು. ಉಳಿದ 12 ಮಂದಿ ಕಾಂಗ್ರೆಸ್ಸಿಗರಾದರೆ, ಒಬ್ಬರು ಸಿಪಿಐಎಂ, ಮತ್ತಿಬ್ಬರು ಸ್ವತಂತ್ರ ಅಭ್ಯರ್ಥಿಗಳಾಗಿದ್ದಾರೆ.

ರಜಪೂತ್​ ಸಮುದಾಯದ ಪ್ರಾಬಲ್ಯ: ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ- ಕಾಂಗ್ರೆಸ್​ ನೇರ ಹಣಾಹಣಿ ನಡೆಸಲಿದ್ದು, ಎರಡೂ ಪಕ್ಷದರೂ 28 ಕ್ಷೇತ್ರಗಳಲ್ಲಿ ರಜಪೂತ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದಾರೆ. ಈ ಮೂಲಕ ಜಾತಿ ರಾಜಕಾರಣ ಅದರಲ್ಲೂ ರಜಪೂತ ಸಮುದಾಯದ ಪ್ರಭಾವವನ್ನು ತೋರಿಸಿದೆ. ಸಿಎಂ ಜೈರಾಮ್​ ಠಾಕೂರ್​ ಸೇರಿದಂತೆ 12 ಕ್ಯಾಬಿನೆಟ್ ಸದಸ್ಯರಲ್ಲಿ ಆರು ಶಾಸಕರಾದ ಮಹೇಂದ್ರ ಸಿಂಗ್​​, ವಿರೇಂದ್ರ ಕನ್ವರ್​, ಬಿಕ್ರಂ ಸಿಂಗ್​, ಗೋಬಿಂದ್​ ಸಿಂಗ್​ ಠಾಕೂರ್​, ರಾಕೇಶ್​ ಪಾಥನಿಯ ರಜಪೂತ್​ ಸಮುದಾಯದವರಾಗಿದ್ದಾರೆ. ​

ಈ ಬಾರಿ ಚುನಾವಣೆಯಿಂದ ಹಿಂದೆ ಸರಿದಿರುವ ಮಹೇಂದ್ರ ಠಾಕೂರ್ ಮಂಡಿ ಜಿಲ್ಲೆಯ ಧರಮ್ಪರ್​​ನಿಂದ ತಮ್ಮ ಮಗ ರಜತ್​​ ಠಾಕೂರ್​​ಗೆ ಟಿಕೆಟ್​ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಹಿಮಾಚಲ ಪ್ರದೇಶದ ರಾಜಕೀಯ ಆರಂಭವಾಗಿನಿಂದಲೂ ರಜಪೂತ್​ ಸಮುದಾಯ ಅತ್ಯಂತ ಪ್ರಭಾವಿಯಾಗಿದೆ.

ಹಿರಿಯ ನಾಯಕರಾದ ​​ಡಾ ವೈಎಸ್ ಪರ್ಮಾರ್, ವೀರಭದ್ರ ಸಿಂಗ್, ರಾಮಲಾಲ್ ಠಾಕೂರ್, ಪ್ರೇಮ್ ಕುಮಾರ್ ಧುಮಾಲ್, ಕರ್ಮ್ ಸಿಂಗ್ ಠಾಕೂರ್, ಠಾಕೂರ್ ಜಗದೇವ್ ಚಂದ್, ಜೈ ರಾಮ್ ಠಾಕೂರ್, ಅನುರಾಗ್ ಠಾಕೂರ್, ಜೆಬಿಎಲ್ ಖಚಿ, ಕೌಲ್ ಸಿಂಗ್ ಠಾಕೂರ್, ಗುಲಾಬ್ ಸಿಂಗ್ ಠಾಕೂರ್, ಮಹೇಶ್ವರ್ ಸಿಂಗ್, ಗಂಗಾ ಸಿಂಗ್ ಠಾಕೂರ್, ಮಹೇಂದ್ರ ಸಿಂಗ್ ಠಾಕೂರ್ , ಕುಂಜಲಾಲ್ ಠಾಕೂರ್, ಗೋವಿಂದ್ ಸಿಂಗ್ ಠಾಕೂರ್, ಮೇಜರ್ ವಿಜಯ್ ಸಿಂಗ್ ಮಂಕೋಟಿಯಾ, ಪ್ರತಿಭಾ ಸಿಂಗ್, ಸುಜನ್ ಸಿಂಗ್ ಪಠಾನಿಯಾ, ಗುಮಾನ್ ಸಿಂಗ್ ಠಾಕೂರ್, ಹರ್ಷವರ್ಧನ್ ಸಿಂಗ್, ರಾಮಲಾಲ್ ಠಾಕೂರ್, ಸುಖ್ವಿಂದರ್ ಸಿಂಗ್ ಠಾಕರ್​ ಕೂಡ ಇದೇ ರಜಪೂತ್​ ಸಮುದಾಯಕ್ಕೆ ಸೇರಿದ ನಾಯಕರೇ ಆಗಿದ್ದಾರೆ.

ರಜಪೂತರನ್ನು ಬಿಟ್ಟರೆ ಬ್ರಾಹ್ಮಣ ಹಾಗೂ ಒಬಿಸಿಗಳೇ ಇಲ್ಲಿ ನಿರ್ಣಾಯಕ:​​ ರಜಪೂತ್​​ ಹೊರತಾಗಿ ಬ್ರಾಹ್ಮಣರು ಮತ್ತು ಒಬಿಸಿ ರಾಜ್ಯ ರಾಜಕಾರಣದಲ್ಲಿ ಕಿಂಗ್​ ಮೇಕರ್​ ಆಗಿದ್ದಾರೆ. 2011ರ ಜನಗಣತಿ ಅನುಸಾರ ರಾಜ್ಯದಲ್ಲಿ ಶೇ 11ರಷ್ಟು ಮಂದಿ ಬ್ರಾಹ್ಮಣರಾಗಿದ್ದಾರೆ. ರಾಜ್ಯದ ಚುನಾವಣೆಯಲ್ಲಿ ಬ್ರಾಹ್ಮಣರ ಪ್ರಮುಖ ಛಾಪು ಮೂಡಿಸಿದ್ದಾರೆ. ಬ್ರಾಹ್ಮಣರಾಗಿರುವ ಶಾಂತಕುಮಾರ್​​ ಎರಡು ಬಾರಿ ಸಿಎಂ ಪದವಿ ಅನುಭವಿಸಿದ್ದರು. ಇವರ ಹೊರತಾಗಿ ಕೇಂದ್ರ ಸಚಿವ ಪಂಡಿತ್​ ಸುಕ್ರಂ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸುರೇಶ್​ ಭಾರದ್ವಾಜ್​ ಮತ್ತು ಆನಂದ್​ ಶರ್ಮ ಕೂಡ ಇದೇ ಸಮುದಾಯಕ್ಕೆ ಸೇರಿದ ನಾಯಕರಾಗಿದ್ದಾರೆ.

ಒಬಿಸಿಗಳನ್ನು ಕಡೆಗಣಿಸುವಂತಿಲ್ಲ: ರಾಜ್ಯದಲ್ಲಿ ಒಬಿಸಿ ಸಮುದಾಯದವರು ಶೇ 13. 52ರಷ್ಟಿದ್ದು, ಈ ಒಬಿಸಿ ಮತ ಬ್ಯಾಂಕ್​ಗಳು ಕೂಡ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಮತಗಳಾಗಿವೆ. ಅದರಲ್ಲೂ ಕಂಗ್ರಾ ಜಿಲ್ಲೆಯಲ್ಲಿ 15 ಮಂದಿ ಈ ಸಮುದಾಯಕ್ಕೆ ಸೇರಿದವರಿದ್ದಾರೆ. ಇಲ್ಲಿ ಶೇ 50ರಷ್ಟು ಮಂದಿ ಒಬಿಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ರಾಜ್ಯದ ರಾಜಕೀಯದಲ್ಲಿ ಈ ಸಮುದಾಯದ ಪ್ರಮುಖ ಮುಖಗಳು ಕಾಣದೇ ಹೋದರೂ ಚಂದ್ರ ಕುಮಾರ್​​, ಪವನ್​ ಕಜಾಲ್​ ಮತ್ತು ಸರ್ವೀನ್​ ಚೌದರಿ ಅವರು ತಮ್ಮ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದಾರೆ. ರಾಜ್ಯದ 68 ಕ್ಷೇತ್ರದಲ್ಲಿ ರಜಪೂತರ ಹೊರತಾಗಿ ಎರಡನೇ ದೊಡ್ಡ ಜಾತಿಯಾಗಿರುವ ಪ.ಜಾತಿಗೆ 17 ಸ್ಥಾನಗಳು ಮೀಸಲಾಗಿದೆ.

ಇದನ್ನೂ ಓದಿ: ಹಿಮಾಚಲ ಚುನಾವಣೆ: ಮತ ಪ್ರಧಾನಿಗೋ ಅಥವಾ ಸರ್ಕಾರದ ಕೆಲಸಕ್ಕಾ?

Last Updated :Nov 14, 2022, 1:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.