ETV Bharat / bharat

ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ ನೀಡುತ್ತಿದ್ದಂತೆ ಈ ರೀತಿ ಕಾಲೆಳೆದ ಕ್ಯಾ. ಅಮರೀಂದರ್ ಸಿಂಗ್​!

author img

By

Published : Sep 28, 2021, 4:12 PM IST

ನವಜೋತ್ ಸಿಂಗ್ ಸಿಧು ರಾಜೀನಾಮೆಗೆ ಖಂಡನೆ ವ್ಯಕ್ತಪಡಿಸಿರುವ ಕ್ಯಾ. ಅಮರೀಂದರ್​ ಸಿಂಗ್​​, ಪಂಜಾಬ್​ನಂತಹ ಗಡಿ ರಾಜ್ಯಕ್ಕೆ ಆತ ಸೂಕ್ತವಲ್ಲ ಹಾಗೂ ಸ್ಥಿರ ವ್ಯಕ್ತಿ ಅಲ್ಲ ಎಂದು ಈಗಾಗಲೇ ನಾನು ನಿಮಗೆ ತಿಳಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ..

Caption Amrinder Singh
Caption Amrinder Singh

ಚಂಡಿಗಢ (ಪಂಜಾಬ್​) : ಪಂಜಾಬ್​ ಕಾಂಗ್ರೆಸ್​ ರಾಜಕೀಯದಲ್ಲಿ ನಿರಂತರವಾದ ವಿಭಿನ್ನ ರೀತಿಯ ಬೆಳವಣಿಗೆ ಕಂಡು ಬರುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾಪ್ಟನ್​ ಅಮರೀಂದರ್​ ಸಿಂಗ್ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಪಂಜಾಬ್ ಪ್ರಾದೇಶಿಕ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ನವಜೋತ್​ ಸಿಂಗ್ ಸಿಧು ಕೂಡ ರಾಜೀನಾಮೆ ನೀಡಿದ್ದಾರೆ.

ಪಂಜಾಬ್​ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಇದರ ಬೆನ್ನಲ್ಲೇ ಈ ರೀತಿಯ ಬೆಳವಣಿಗೆ ಕಂಡು ಬರುತ್ತಿದೆ. ಇದು ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಸ್ಥಾನಕ್ಕೆ ನವಜೋತ್​ ಸಿಂಗ್ ಸಿಧು ದಿಢೀರ್ ರಾಜೀನಾಮೆ ನೀಡುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್​ ಟ್ವೀಟ್ ಮಾಡಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

  • I told you so…he is not a stable man and not fit for the border state of punjab.

    — Capt.Amarinder Singh (@capt_amarinder) September 28, 2021 " class="align-text-top noRightClick twitterSection" data=" ">

ಇದನ್ನೂ ಓದಿರಿ: ಪಂಜಾಬ್ ಪ್ರದೇಶ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ.. ರಾಜಕೀಯ ವಿಪ್ಲವ ಕಾರಣವಾಯ್ತೇ!?

ಕ್ಯಾ.ಅಮರೀಂದರ್ ಸಿಂಗ್ ಟ್ವೀಟ್

ನವಜೋತ್ ಸಿಂಗ್ ಸಿಧು ರಾಜೀನಾಮೆಗೆ ಖಂಡನೆ ವ್ಯಕ್ತಪಡಿಸಿರುವ ಕ್ಯಾ. ಅಮರೀಂದರ್​ ಸಿಂಗ್​​, ಪಂಜಾಬ್​ನಂತಹ ಗಡಿ ರಾಜ್ಯಕ್ಕೆ ಆತ ಸೂಕ್ತವಲ್ಲ ಹಾಗೂ ಸ್ಥಿರ ವ್ಯಕ್ತಿ ಅಲ್ಲ ಎಂದು ಈಗಾಗಲೇ ನಾನು ನಿಮಗೆ ತಿಳಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಕಳೆದ ಕೆಲ ತಿಂಗಳಿಂದ ಪಂಜಾಬ್​ ಕಾಂಗ್ರೆಸ್​ನಲ್ಲಿ ಎರಡು ಬಣಗಳು ಹುಟ್ಟಿಕೊಂಡಿವೆ. ಕ್ಯಾಪ್ಟನ್​ ಅಮರೀಂದರ್ ಸಿಂಗ್ ಹಾಗೂ ನವಜೋತ್ ಸಿಂಗ್ ಸಿಧು ನಡುವೆ ವೈರತ್ವವಿತ್ತು. ಇದರ ಮಧ್ಯೆ ಕೂಡ ಹೈಕಮಾಂಡ್ ಮಾತಿನಂತೆ ಅಮರೀಂದರ್ ಸಿಂಗ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ನವಜೋತ್ ಸಿಂಗ್​ ಸಿಧು ಮೇಲೆ ಗಂಭೀರ ಆರೋಪ ಮಾಡಿ, ಅವರಿಗೆ ಪಾಕ್​​ ಪ್ರಧಾನಿ ಜೊತೆ ಸಂಪರ್ಕವಿದೆ ಎಂದು ಹೇಳಿದ್ದರು.

ಇನ್ನು, ಮುಖ್ಯಮಂತ್ರಿ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿರುವ ಕ್ಯಾಪ್ಟನ್​ ಅಮರೀಂದರ್ ಸಿಂಗ್ ಇಂದು ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಬಿಜೆಪಿ ಹೈಕಮಾಂಡ್​ ಭೇಟಿ ಮಾಡಿ, ಮಹತ್ವದ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.