ETV Bharat / bharat

ಉಪಚುನಾವಣೆ ಫೈಟ್​​: ಮೂರು ಲೋಕಸಭೆ, 29 ವಿಧಾನಸಭೆ ಸ್ಥಾನಗಳಿಗೆ ಇಂದು ಮತದಾನ

author img

By

Published : Oct 30, 2021, 3:37 AM IST

ದೇಶದ ವಿವಿಧ ರಾಜ್ಯಗಳಲ್ಲಿ ತೆರವಾಗಿರುವ ಮೂರು ಲೋಕಸಭೆ ಹಾಗೂ 29 ವಿಧಾನಸಭೆ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯಲಿದ್ದು, ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ.

By election
By election

ಹೈದರಾಬಾದ್​: ಮೂರು ಲೋಕಸಭೆ ಮತ್ತು 29 ವಿಧಾನಸಭೆ ಸ್ಥಾನಗಳಿಗೆ ಇಂದು ಮತದಾನ ನಡೆಯಲಿದ್ದು, ಕೇಂದ್ರ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.

ದಾದ್ರಾ ನಗರ ಹವೇಲಿ, ಮಧ್ಯಪ್ರದೇಶದ ಖಾಂಡ್ವಾ ಮತ್ತು ಹಿಮಾಚಲ ಪ್ರದೇಶದ ಮಂಡಿಯ ಲೋಕಸಭೆ ಕ್ಷೇತ್ರಗಳಿಗೆ ಬೈಎಲೆಕ್ಷನ್​ ನಡೆಯುತ್ತಿದ್ದು, ಆಂಧ್ರಪ್ರದೇಶದ 1 ಕ್ಷೇತ್ರ, ಅಸ್ಸೋಂನ 5, ಬಿಹಾರದಲ್ಲಿ 2, ಹರಿಯಾಣದಲ್ಲಿ 1, ಹಿಮಾಚಲ ಪ್ರದೇಶದಲ್ಲಿ 3, ಕರ್ನಾಟಕದಲ್ಲಿ 2, ಮಧ್ಯಪ್ರದೇಶದಲ್ಲಿ 3, ಮಹಾರಾಷ್ಟ್ರದಲ್ಲಿ 1, ಮೇಘಾಲಯದಲ್ಲಿ 3, ನಾಗಾಲ್ಯಾಂಡಿನಲ್ಲಿ 1, ರಾಜಸ್ಥಾನದಲ್ಲಿ 2 , ತೆಲಂಗಾಣ. ಪಶ್ಚಿಮ ಬಂಗಾಳದ ಒಂದು ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.

ಇದನ್ನೂ ಓದಿರಿ: ಹಾನಗಲ್​​-ಸಿಂದಗಿ ಉಪಚುನಾವಣೆ: ಎರಡು ಕ್ಷೇತ್ರಗಳಲ್ಲಿಂದು ಮತದಾನ

ಎಲ್ಲ ಕ್ಷೇತ್ರಗಳಲ್ಲಿ ಪ್ರಮುಖವಾಗಿ ಬಿಜೆಪಿ-ಕಾಂಗ್ರೆಸ್​ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದ್ದು, ಕೆಲವೊಂದು ರಾಜ್ಯಗಳಲ್ಲಿ ಸ್ಥಳೀಯ ಪಕ್ಷಗಳು ಪಾರಮ್ಯ ಮೆರೆಯುವ ಸಾಧ್ಯತೆ ದಟ್ಟವಾಗಿದೆ. ಮುಂದಿನ ವರ್ಷ ನಡೆಯಲಿರುವ ಪಂಚರಾಜ್ಯ ಚುನಾವಣೆ ದೃಷ್ಠಿಯಿಂದ ಬಿಜೆಪಿ ಹಾಗೂ ಕಾಂಗ್ರೆಸ್​ಗೆ ಈ ಚುನಾವಣೆ ಮಹತ್ವದ್ದಾಗಿದೆ. ಕರ್ನಾಟಕದ ಸಿಂದಗಿ-ಹಾನಗಲ್​ ಸೇರಿದಂತೆ ಎಲ್ಲ ಕ್ಷೇತ್ರಗಳ ಮತದಾನ ಫಲಿತಾಂಶ ನವೆಂಬರ್​ 2ರಂದು ಬಹಿರಂಗಗೊಳ್ಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.