ETV Bharat / bharat

2050ರ ಹೊತ್ತಿಗೆ ಭಾರತದಲ್ಲಿ ಕುಡಿಯುವ ನೀರಿನ ಕೊರತೆ ತೀವ್ರ- ವಿಶ್ವಸಂಸ್ಥೆ ವರದಿ

author img

By

Published : Mar 23, 2023, 2:05 PM IST

ಜಲ ಸಂರಕ್ಷಣೆಯ ಕುರಿತು ವಿಶ್ವಸಂಸ್ಥೆಯಲ್ಲಿ ಮಹತ್ವದ ಸಭೆ ನಡೆಸಲಾಗಿದ್ದು, ಈ ವೇಳೆ ಮಂಡನೆಯಾದ ನೀರಿನ ಕೊರತೆ ವರದಿ, ಜಾಗತಿಕ ಮಟ್ಟದಲ್ಲಿ ತಲೆದೋರಲಿರುವ ನೀರಿನ ಸಮಸ್ಯೆಯ ಕುರಿತು ಎಚ್ಚರಿಕೆ ಸಂದೇಶ ರವಾನಿಸಿದೆ.

By 2050, India will face severe water scarcity
By 2050, India will face severe water scarcity

ಜಾಗತಿಕವಾಗಿ ನೀರಿನ ಕೊರತೆ ಅನುಭವಿಸುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತವೂ ಭವಿಷ್ಯದಲ್ಲಿ ತೀವ್ರತರ ಪರಿಣಾಮಕ್ಕೆ ತುತ್ತಾಗುವ ನಿರೀಕ್ಷೆ ಇದೆ. ಈಗಾಗಲೇ 2016ರಿಂದ 933 ಮಿಲಿಯನ್​ ಜನರು ಕುಡಿಯುವ ನೀರಿನ ಸಂಕಷ್ಟ ಎದುರಿಸುತ್ತಿದ್ದು, 2050ರ ಹೊತ್ತಿಗೆ 1.7 ರಿಂದ 2.4 ಬಿಲಿಯನ್​ ನೀರಿನ ಬಿಕ್ಕಟ್ಟಿಗೆ ಒಳಗಾಗಬಹುದು ಎಂದು ವಿಶ್ವಸಂಸ್ಥೆ ವರದಿ ಮಾಡಿದೆ.

"ವರದಿ ಪಾಲುದಾರಿಕೆಗಳು ಮತ್ತು ನೀರಿಗಾಗಿ ಸಹಕಾರ" ಎಂಬ ಅಡಿಯಲ್ಲಿ 2023ರ ಮಾರ್ಚ್​ 21ರಂದು ಜಲ ಸಂರಕ್ಷಣೆ ಕುರಿತು ಮಹತ್ವದ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಮಂಡನೆಯಾದ ವರದಿ ಅನುಸಾರ, ಶೇ 80ರಷ್ಟು ಏಷ್ಯಾ ಖಂಡದ ಮಂದಿ ಈಗಾಗಲೇ ನೀರಿನ ಬವಣೆ ಕಾಣುತ್ತಿದ್ದಾರೆ. ಇದರಲ್ಲಿ ವಾಯುವ್ಯ ಚೀನಾ ಜೊತೆಗೆ ಭಾರತ, ಪಾಕಿಸ್ತಾನಗಳೂ ಸೇರಿವೆ.

2016ರಲ್ಲಿ 933 ಮಿಲಿಯನ್​ ಜನರು ನೀರಿನ ತೊಂದರೆ ಎದುರಿಸಿದ್ದಾರೆ. 2050ರ ಹೊತ್ತಿಗೆ ಜಗತ್ತಿನ ಮೂರನೇ ಒಂದು ಭಾಗದ ಜನರು ನೀರಿನ ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಭವಿಷ್ಯದಲ್ಲಿ ಭಾರತವನ್ನೂ ಕೂಡಾ ಕುಡಿಯುವ ನೀರಿನ ಬಾಧೆ ಕಾಡಲಿದೆ.

ಕೈ ಮೀರಿ ಹೋಗುತ್ತಿರುವ ಜಾಗತಿಕ ನೀರಿನ ಬಿಕ್ಕಟ್ಟಿನ ವಿಚಾರವಾಗಿ ತುರ್ತಾಗಿ ಬಲವಾದ ಅಂತಾರಾಷ್ಟ್ರೀಯ ಮಟ್ಟದ ತಡೆಗಟ್ಟುವ ಕಾರ್ಯವಿಧಾನ ರೂಪಿಸಬೇಕಿದೆ ಎಂದು ಯುನೆಸ್ಕೋ ಡೈರೆಕ್ಟರ್​ ಜನರಲ್​ ಆಡ್ರೆ ಅಜೌಲ್​ ತಿಳಿಸಿದ್ದಾರೆ. ಭವಿಷ್ಯಕ್ಕೆ ನೀರು ಬೇಕಿದೆ. ಇದನ್ನು ಸಮಾನವಾಗಿ ಹಂಚಿಕೊಳ್ಳಲು ಮತ್ತು ಸುಸ್ಥಿರವಾಗಿ ನಿರ್ವಹಿಸಲು ಒಟ್ಟಾಗಿ ಕಾರ್ಯನಿರ್ವಹಿಸುವುದು ಅತ್ಯಗತ್ಯ ಎಂದಿದ್ದಾರೆ.

ಜಾಗತಿಕವಾಗಿ ಕೈ ಜೋಡಿಸಬೇಕಿದೆ: ಅನಿಶ್ಚಿತತೆ ಮುಂದುವರೆಯುತ್ತಿದೆ. ಈ ಬಗ್ಗೆ ನಾವು ಗಮನ ಹರಿಸದಿದ್ದರೆ, ಇದು ಜಾಗತಿಕ ಸಮಸ್ಯೆಯಾಗಲಿದೆ ಎಂದು ವರದಿಯ ಮುಖ್ಯ ಸಂಪಾದಕ ರಿಚರ್ಡ್​ ಕೊನ್ನೊರ್​ ಎಚ್ಚರಿಸಿದ್ದಾರೆ. ನೀರಿನ ಲಭ್ಯತೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಿದೆ. ಇದು ನೀರಿನ ಕೊರತೆಯನ್ನು ತೋರಿಸುತ್ತಿದೆ. ನಗರ ಮತ್ತು ಕೈಗಾರಿಕಾ ಬೆಳವಣಿಗೆಯಿಂದ ಕೃಷಿಯವರೆಗೆ ಜಾಗತಿಕವಾಗಿ ಶೇ 70 ಪ್ರತಿಶತದಷ್ಟು ಪೂರೈಕೆಯನ್ನು ಮಾತ್ರ ಬಳಸಲಾಗುತ್ತಿದೆ.

ನೀರು ಮಾನವೀಯತೆಯ ಜೀವಾಳವಾಗಿದೆ. ಅದನ್ನು ಉಳಿಸುವುದು ಅತ್ಯವಶ್ಯಕ. ಜನರ ಮತ್ತು ಗ್ರಹದ ಸುಸ್ಥಿರ ಅಭಿವೃದ್ಧಿ ನೀರು ಅತ್ಯವಶಕ್ಯವಾಗಿದೆ ಎಂದು ವಿಶ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಕರೆ ನೀಡಿದ್ದಾರೆ. ಮಾನವೀಯತೆ ಅಪಾಯದ ಹಾದಿಯೆಡೆ ಪ್ರಯಾಣ ಮಾಡುತ್ತಿದೆ. ನೀರಿನ ಅತಿಯಾದ ಬಳಕೆ, ಮೀತಿ ಮೀರಿದ ಅಭಿವೃದ್ಧಿ, ಮಾಲಿನ್ಯ, ಜಾಗತಿಕ ತಾಪಮಾನದ ಪರಿಶೀಲನೆ ನಡೆಸುತ್ತಿರುವುದು ಕೂಡ ನೀರಿನ ಕೊರತೆಗೆ ಕಾರಣ. ಭವಿಷ್ಯದ ಪೀಳಿಗೆಗೆ ನೀರಿನ ಸಂಪನ್ಮೂಲವನ್ನು ರಕ್ಷಿಸುವುದು, ಸಂರಕ್ಷಿಸುವುದು ಪಾಲುದಾರಿಕೆಯನ್ನು ಅವಲಂಬಿಸಿರುತ್ತದೆ. ಜಾಗತಿಕವಾಗಿ ಸರ್ಕಾರ, ವ್ಯಾಪಾರ, ವಿಜ್ಞಾನಿಗಳು, ನಾಗರಿಕ ಸಮಾಜ ನೀರಿನ ಬಳಕೆಯ ಕುಶಲ ನಿರ್ವಹಣೆ ಮತ್ತು ಸಂರಕ್ಷಣೆ ಮಾಡಬೇಕಿದೆ.

ಇದನ್ನೂ ಓದಿ: ವಿಶ್ವ ಜಲದಿನ 2023 : 40 ವರ್ಷಗಳಲ್ಲಿ ಜಾಗತಿಕವಾಗಿ ನೀರಿನ ಬಳಕೆಯು ಪ್ರತಿವರ್ಷ 1 ಪ್ರತಿಶತದಷ್ಟು ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.