ETV Bharat / bharat

ಉದ್ಯಮಿ ಹತ್ಯೆಗೈದು ಶವವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದ ದುಷ್ಕರ್ಮಿಗಳು

author img

By

Published : May 26, 2023, 2:31 PM IST

ಕೇರಳದ ಕೋಝಿಕ್ಕೋಡ್‌ನಲ್ಲಿ ಉದ್ಯಮಿಯೊಬ್ಬರನ್ನು ಕೊಂದು ಶವವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ.

kozhikode
ಸಿದ್ದಿಕ್- ಹತ್ಯೆಯಾದ ಉದ್ಯಮಿ

ಕೋಝಿಕ್ಕೋಡ್ (ಕೇರಳ): ಉದ್ಯಮಿಯೊಬ್ಬರನ್ನು ಕೊಂದು ಶವವನ್ನು ತುಂಡು ತುಂಡಾಗಿ ಕತ್ತರಿಸಿ ಟ್ರಾಲಿ ಬ್ಯಾಗ್‌ನಲ್ಲಿ ಹಾಕಿ ಅಟ್ಟಪಾಡಿ ಘಾಟ್ ರಸ್ತೆಯಲ್ಲಿ ಪಾಸ್‌ನಲ್ಲಿ ಎಸೆದ ಭೀಕರ ಘಟನೆ ನಡೆದಿದೆ. ತಿರೂರು ಮೂಲದ ಸಿದ್ದಿಕ್ (58) ಕೊಲೆಯಾದವರು. ಘಟನೆಗೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ಇಬ್ಬರು ಯುವತಿಯರನ್ನು ಚೆನ್ನೈನಲ್ಲಿ ಬಂಧಿಸಿದ್ದಾರೆ. ಸಿದ್ದಿಕ್ ಅವರ ಹೋಟೆಲ್ ಉದ್ಯೋಗಿ ಶಿಬಿಲಿ (22) ಮತ್ತು ಆಕೆಯ ಗೆಳತಿ ಫರ್ಹಾನಾ (18) ಬಂಧಿತರು.

ಸಿದ್ದಿಕ್ ಕೋಝಿಕ್ಕೋಡ್​ನಲ್ಲಿ ಹೋಟೆಲ್ ನಡೆಸುತ್ತಿದ್ದರು. ದೂರವಾಣಿ ಸಂಪರ್ಕಕ್ಕೆ ಸಿಗದಿದ್ದಾಗ ಸಿದ್ದಿಕ್ ಅವರ ಮಗ ತಿರೂರ್ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಆತನ ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಮಾಡಿರುವುದು ಪತ್ತೆಯಾಗಿದೆ. ಬಳಿಕ ಅವರ ಒಡೆತನದ ಹೋಟೆಲ್ ಉದ್ಯೋಗಿಗಳು ನಾಪತ್ತೆಯಾಗಿದ್ದು ಅನುಮಾನ ಹೆಚ್ಚಿಸಿದೆ. ನಂತರ ನಡೆದ ವಿಸ್ತೃತ ತನಿಖೆಯಲ್ಲಿ ಕೊಲೆ ಪ್ರಕರಣ ಬಯಲಾಗಿದೆ.

ಮೇ 22ರಂದು ಕೋಝಿಕ್ಕೋಡ್‌ನ ಎರನ್ಹಿಪಾಲಂನ ಹೋಟೆಲ್‌ನಲ್ಲಿ ಸಿದ್ದಿಕ್‌ನನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಆರೋಪಿಗಳು ಕೊಲೆ ಮಾಡಿದ ಬಳಿಕ ಶವವನ್ನು ಟ್ರಾಲಿ ಬ್ಯಾಗ್​ನಲ್ಲಿ ಇರಿಸಿ ಅಟ್ಟಪ್ಪಾಡಿ ಘಾಟ್ ರಸ್ತೆಯಲ್ಲಿ ಎಸೆದು ಚೆನ್ನೈಗೆ ಓಡಿಹೋಗಿದ್ದರು. ಬ್ಯಾಗ್​ನಲ್ಲಿ ಸಿದ್ದಿಕ್ ನ ದೇಹದ ಭಾಗಗಳು ಪತ್ತೆಯಾಗಿವೆ. ಕೊಲೆ ನಡೆದ ಹೋಟೆಲ್ ಕೊಠಡಿಯನ್ನು ಸ್ವತಃ ಸಿದ್ದಿಕ್ ಬಾಡಿಗೆಗೆ ಪಡೆದಿದ್ದ ಎಂದು ತಿಳಿದು ಬಂದಿದೆ.

ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸಿದ್ದಿಕ್ ಹೊಟೇಲ್ ಕೋಣೆಗೆ ಹೋಗುತ್ತಿರುವುದು ಕಂಡು ಬಂದಿದೆ. ಆದರೆ ಆತ ಅಲ್ಲಿಂದ ಹೊರಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿಲ್ಲ. ಸಿದ್ದಿಕ್ ನಂತರ ಇಬ್ಬರು ಯುವತಿಯರು ಕೊಠಡಿ ಪ್ರವೇಶಿಸಿದ್ದಾರೆ. ಬಳಿಕ ಅವರು ಟ್ರಾಲಿ ಬ್ಯಾಗ್‌ನೊಂದಿಗೆ ತೆರಳುತ್ತಿರುವುದು ಕಂಡು ಬಂದಿದೆ. ವಿವಿಧ ಜನರನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು ಇಬ್ಬರು ಶಿಬಿಲಿ ಮತ್ತು ಫರ್ಹಾನಾ ಎಂಬ ಇಬ್ಬರು ಯುವತಿಯರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಪೊಲೀಸರ ವಶದಲ್ಲಿರುವ ಆರೋಪಿಗಳನ್ನು ಕೇರಳ ಪೊಲೀಸರು ವಶಕ್ಕೆ ಪಡೆಯುವ ಪ್ರಕ್ರಿಯೆ ಆರಂಭಿಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: IPL ಬೆಟ್ಟಿಂಗ್ ದಂಧೆಗೆ ಮಂಡ್ಯದಲ್ಲಿ ಎಳನೀರು ವ್ಯಾಪಾರಿ ಬಲಿ

ಇಬ್ಬರ ಬರ್ಬರ ಹತ್ಯೆ: ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದ ಘಟನೆ ನಗರದ ಕಮಲಾಪುರ ಹೊರವಲಯದಲ್ಲಿ ಕಳೆದ ರಾತ್ರಿ ನಡೆದಿದೆ. ಮಹಮ್ಮದ್ ಕುಡಚಿ ಕೊಲೆಯಾದ ರಿಯಲ್ ಎಸ್ಟೇಟ್ ಉದ್ಯಮಿ. ಇವರ ಕುಡಚಿ ಮನೆ ಎದುರು ಘಟನೆ ನಡೆದಿದೆ. ರಾತ್ರಿ 10 ರಿಂದ 11 ಗಂಟೆಯ ಸುಮಾರಿಗೆ ಮನೆ ಎದುರು ಕುಳಿತಿದ್ದಾಗ ದುಷ್ಕರ್ಮಿಗಳ ಗುಂಪೊಂದು ಸ್ಥಳಕ್ಕೆ ಧಾವಿಸಿ ಬಂದು ಏಕಾಏಕಿ ದಾಳಿ ಮಾಡಿ ಪರಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ನಡೆದ ಕುಡಚಿ ನಿವಾಸದ ಅನತಿ ದೂರದಲ್ಲಿಯೇ ಮತ್ತೊಂದು ಅಪರಿಚಿತ ಶವ ಪತ್ತೆಯಾಗಿದೆ. ಮೃತದೇಹ ರಕ್ತಸಿಕ್ತ ಸ್ಥಿತಿಯಲ್ಲಿತ್ತು. ಈತ ಕುಡಚಿ ಮನೆಯಿಂದಲೇ ಓಡಿ ಹೋಗಿರುವ ವ್ಯಕ್ತಿ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಧಾರವಾಡದಲ್ಲಿ ರಾತ್ರೋರಾತ್ರಿ ಡಬಲ್​ ಮರ್ಡರ್​: ಉದ್ಯಮಿ ಸೇರಿ ಇಬ್ಬರ ಬರ್ಬರ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.