ETV Bharat / bharat

ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಉರುಳಿಬಿತ್ತು ಕಟ್ಟಡ, ಸುಟ್ಟು ಭಸ್ಮವಾದ ಕಾರು

author img

By

Published : Apr 9, 2022, 10:30 AM IST

ಇಂದು ಬೆಳ್ಳಂಬೆಳಗ್ಗೆ ಉತ್ತರ ದೆಹಲಿಯ ಆಜಾದ್ ಮಾರ್ಕೆಟ್‌ನಲ್ಲಿರುವ ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ತೀವ್ರತೆಯಿಂದ ಮೂರು ಕಟ್ಟಡಗಳ ಪೈಕಿ ಒಂದು ಕಟ್ಟಡ ಕುಸಿದು ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ.

fire in Delhi  Building collapsed during fierce fire  fierce fire in Azad Market at Delhi  shop and car burnt in Delhi  ನವದೆಹಲಿಯಲ್ಲಿ ಬೆಂಕಿ  ನವದೆಹಲಿಯಲ್ಲಿ ಬೆಂಕಿಯಿಂದ ನೆಲಕ್ಕುರುಳಿದ ಕಟ್ಟಡ  ದೆಹಲಿಯ ಆಜಾದ್​ ಮಾರ್ಕೆಟ್​ನಲ್ಲಿ ಬೆಂಕಿ  ದೆಹಲಿಯಲ್ಲಿ ಅಂಗಡಿ ಮತ್ತು ಕಾರು ಬೆಂಕಿಗಾಹುತಿ
ಬೆಂಕಿಯ ಕೆನ್ನಾಲೆಗೆ ಉರುಳಿ ಬಿದ್ದ ಕಟ್ಟಡ, ಸುಟ್ಟು ಭಸ್ಮವಾದ ಕಾರು

ನವದೆಹಲಿ: ಶನಿವಾರ ಮುಂಜಾನೆ 4 ಗಂಟೆ ಸುಮಾರಿಗೆ ಮಾರುಕಟ್ಟೆವೊಂದರ ಅಂಗಡಿಗಳಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ತೀವ್ರತೆಯಿಂದಾಗಿ ಮೂರು ಕಟ್ಟಡಗಳ ಪೈಕಿ ಕಟ್ಟಡವೊಂದು ನೆಲಕ್ಕುರುಳಿದ ಘಟನೆ ಉತ್ತರ ದೆಹಲಿಯ ಆಜಾದ್​ ನಗರದಲ್ಲಿ ನಡೆದಿದೆ.

ಬೆಂಕಿಯ ಕೆನ್ನಾಲೆಗೆ ಉರುಳಿ ಬಿದ್ದ ಕಟ್ಟಡ, ಸುಟ್ಟು ಭಸ್ಮವಾದ ಕಾರು

ಇಂದು ಬೆಳಗ್ಗೆ ಆಜಾದ್​ ನಗರದ ಮಾರ್ಕೆಟ್​ನ ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿ ಅಂಗಡಿ, ಮನೆ, ವಾಹನಗಳಿಗೂ ವ್ಯಾಪಿಸಿದೆ. ನೋಡು-ನೋಡುತ್ತಲೇ ಬೆಂಕಿ ಕೆನ್ನಾಲಿಗೆ ಮುಗಿಲಿಗೆ ಮುಟ್ಟುವಂತೆ ಕಾಣಿಸಿದೆ. ಬೆಂಕಿಯಿಂದ ಕಾರೊಂದು ಸುಟ್ಟು ಭಸ್ಮವಾಗಿದೆ.

ಓದಿ: ವಿದ್ಯುತ್​ ಶಾರ್ಟ್ ಸರ್ಕ್ಯೂಟ್​ ಆಗಿ ನಾಲ್ವರು ಸಾವು.. ಇಳಿಯ ವಯಸ್ಸಿನಲ್ಲಿ ಮಗ-ಸೊಸೆ, ಮೊಮ್ಮಕ್ಕಳನ್ನು ಕಳೆದುಕೊಂಡ ಅಜ್ಜ-ಅಜ್ಜಿ

ಸುದ್ದಿ ತಿಳಿಯುತ್ತಿದ್ದಂತೆ ವಿವಿಧ ಅಗ್ನಿಶಾಮಕ ಠಾಣೆಗಳಿಂದ 36ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿವೆ. ನೂರಾರು ಸಿಬ್ಬಂದಿಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಹಲವು ಗಂಟೆಗಳ ನಂತರ ಬೆಂಕಿ ಹತೋಟಿಗೆ ಬಂದಿದೆ. ಘಟನಾ ಸ್ಥಳಕ್ಕೆ ಹಿಂದೂ ರಾವ್ ಪೊಲೀಸ್ ಠಾಣೆಯ ಪೊಲೀಸ್ ತಂಡ ಮತ್ತು ಸಿವಿಲ್ ಡಿಫೆನ್ಸ್ ತಂಡ ದೌಡಾಯಿಸಿದ್ದವು. ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.