ETV Bharat / bharat

ಎಸ್​ಪಿಗೆ ಮತಹಾಕಿದರೆ ಗೂಂಡಾರಾಜ್​ ಬೆಂಬಲಿಸಿದಂತೆ : ಮಾಯಾವತಿ ಆರೋಪ

author img

By

Published : Feb 23, 2022, 12:21 PM IST

ಸಮಾಜವಾದಿ ಪಕ್ಷವನ್ನು ಜನರು ಚುನಾವಣೆಗೂ ಮೊದಲೇ ತಿರಸ್ಕರಿಸಿದ್ದಾರೆ. ಸಮಾಜವಾದಿ ಪಕ್ಷವೆಂದರೇನೆ ಗೂಂಡಾ ಪಕ್ಷ. ಈ ಪಕ್ಷಕ್ಕೆ ಮತ ಹಾಕುವುದೆಂದರೆ 'ಗೂಂಡಾರಾಜ್​, ಮಾಫಿಯಾ ರಾಜ್​'ಗೆ ಮತ ಹಾಕಿದಂತೆ ಎಂದು ಬಿಎಸ್​​ಪಿ ನಾಯಕಿ ಮಾಯಾವತಿ ಆರೋಪಿಸಿದ್ದಾರೆ..

mayawati-criticizes
ಮಾಯಾವತಿ ಕಿಡಿ

ಲಖನೌ(ಉತ್ತರಪ್ರದೇಶ) : ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ 4ನೇ ಹಂತದ ಮತದಾನ ನಡೆಯುತ್ತಿದೆ. ಬಹುಜನ ಸಮಾಜವಾದಿ ಪಕ್ಷದ(ಬಿಎಸ್​ಪಿ) ನಾಯಕಿ ಮಾಯಾವತಿ ಅವರು ಲಖನೌದ ಮುನ್ಸಿಪಲ್ ನರ್ಸರಿ ಶಾಲೆಯಲ್ಲಿ ಮತದಾನ ಮಾಡಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮಾಯಾವತಿ ಅವರು, ಸಮಾಜವಾದಿ ಪಕ್ಷವನ್ನು ಜನರು ಚುನಾವಣೆಗೂ ಮೊದಲೇ ತಿರಸ್ಕರಿಸಿದ್ದಾರೆ. ಸಮಾಜವಾದಿ ಪಕ್ಷವೆಂದರೇನೆ ಗೂಂಡಾ ಪಕ್ಷ. ಈ ಪಕ್ಷಕ್ಕೆ ಮತ ಹಾಕುವುದೆಂದರೆ 'ಗೂಂಡಾರಾಜ್​, ಮಾಫಿಯಾ ರಾಜ್​'ಗೆ ಮತ ಹಾಕಿದಂತೆ ಎಂದು ಟೀಕಿಸಿದ್ದಾರೆ.

  • Muslims are not happy with Samajwadi Party. They will not vote for them. People of UP have rejected SP even before voting as voting for SP means Gunda raj, Mafia raj. Riots happened in SP govt. The face of SP leaders tell that they are not coming in power: BSP chief Mayawati pic.twitter.com/bXy1JY5zt8

    — ANI UP/Uttarakhand (@ANINewsUP) February 23, 2022 " class="align-text-top noRightClick twitterSection" data=" ">

ಸಮಾಜವಾದಿ ಪಕ್ಷದಿಂದ ಮುಸ್ಲಿಂ ಮತದಾರರು ದೂರವಿದ್ದಾರೆ. ಈ ಪಕ್ಷ ಅಧಿಕಾರದಲ್ಲಿದ್ದಾಗ ಹಲವಾರು ಬಾರಿ ಕೋಮುಗಲಭೆ ನಡೆದಿವೆ. ಮತ್ತೆ ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಮಾತನಾಡಿ, ಬಿಎಸ್​ಪಿ ವರಿಷ್ಠೆ ಮಾಯಾವತಿ 5ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ.

ರಾಜ್ಯದಲ್ಲಿ ಬಿಎಸ್‌ಪಿ ಸಂಪೂರ್ಣ ಬಹುಮತ ಪಡೆಯಲಿದೆ. 2007ರ ತೀರ್ಪಿನ ಮಾದರಿಯಲ್ಲಿ ಈ ಬಾರಿಯೂ ಪಕ್ಷ ಸಂಪೂರ್ಣ ಬಹುಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಓದಿ: ಯುಪಿ ಚುನಾವಣೆ: 9 ಜಿಲ್ಲೆಗಳ 59 ಕ್ಷೇತ್ರಗಳಲ್ಲಿ 4ನೇ ಹಂತದ ಮತದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.