ETV Bharat / bharat

ಪೋಷಕರನ್ನು ನಿರ್ಲಕ್ಷಿಸುವ ಮಕ್ಕಳನ್ನು ಮನೆಯಿಂದ ಹೊರಹಾಕುವುದರಲ್ಲಿ ತಪ್ಪಿಲ್ಲ: ಬಾಂಬೆ ಹೈಕೋರ್ಟ್​

author img

By

Published : Apr 30, 2022, 5:24 PM IST

ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳದ ಮಕ್ಕಳನ್ನು ಮನೆಯಿಂದ ಹೊರಹಾಕುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬ ಸ್ಥಳೀಯ ನ್ಯಾಯಾಲಯದ ಆದೇಶವನ್ನು ಬಾಂಬೆ ಹೈಕೋರ್ಟ್​ ಎತ್ತಿಹಿಡಿದಿದೆ.

Bombay Highcourt
ಮುಂಬೈ ಹೈಕೋರ್ಟ್​

ನಾಗ್ಪುರ್(ಮಹಾರಾಷ್ಟ್ರ): ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಗೆ ಕಿರುಕುಳ ನೀಡಿದ್ದಕ್ಕಾಗಿ ಮಗನನ್ನು ಸಂಬಂಧಿಕರು ಆತನ ತಂದೆ ತಾಯಿ ಮನೆಯಿಂದ ಹೊರಹಾಕಿದ ಆರೋಪದ ಮೇಲೆ ಸ್ಥಳೀಯ ನ್ಯಾಯಾಲಯ ನೀಡಿದ್ದ ಆದೇಶವನ್ನು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಎತ್ತಿಹಿಡಿದಿದೆ.

ಪೋಷಕರಿಗೆ ಸುರಕ್ಷಿತ ಮತ್ತು ತೃಪ್ತಿಕರ ವಾತಾವರಣವನ್ನು ಒದಗಿಸದ ಮಕ್ಕಳನ್ನು ಮನೆಯಿಂದ ಹೊರಹಾಕುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬ ವಾದವನ್ನು ನ್ಯಾಯಮೂರ್ತಿ ರೋಹಿತ್ ಡಿಯೋ ಅವರಿದ್ದ ಏಕ ಸದಸ್ಯ ಪೀಠವು ಬೆಂಬಲಿಸಿದೆ. ಆದ್ದರಿಂದ ಕಾನೂನಿನ ಪ್ರಕಾರ ಮಗ ಮನೆ ಖಾಲಿ ಮಾಡುವಂತೆ ನೀಡಿದ್ದ ನ್ಯಾಯಮಂಡಳಿ ತೀರ್ಮಾನ ಸೂಕ್ತ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ನಾಗ್ಪುರದ ಹಂಸಪುರಿ ಪ್ರದೇಶದ ದಂಪತಿ, 78 ವರ್ಷದ ವ್ಯಕ್ತಿ ಮತ್ತು ಅವರ 65 ವರ್ಷದ ಪತ್ನಿ, ತಮ್ಮ ಮಗ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಜನವರಿ 21, 2020 ರಂದು ನ್ಯಾಯಾಧಿಕರಣಕ್ಕೆ ದೂರು ನೀಡಿದ್ದರು. ಆ ವ್ಯಕ್ತಿ ಮನೆಯನ್ನು ಆಕ್ರಮಿಸಿಕೊಂಡಿದ್ದಾನೆ ಎನ್ನಲಾಗ್ತಿದೆ. ಆತನ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಬೈಪಾಸ್ ಶಸ್ತ್ರಚಿಕಿತ್ಸೆಯ ಅಗತ್ಯವಿದೆ.

ಆದರೆ, ಚಿಕಿತ್ಸೆಗೆ ಭರಿಸಲು ದಂಪತಿ ಬಳಿ ಹಣವಿಲ್ಲ, ಮಗನೂ ಹಣದ ಸಹಾಯ ನೀಡುತ್ತಿಲ್ಲ. ಮನೆಗೂ ಯಾವುದೇ ಸಹಾಯವನ್ನು ನೀಡುತ್ತಿಲ್ಲ. ತಮ್ಮ ಪೋಷಕರನ್ನೂ ಗೌರವಯುತವಾಗಿ ನೋಡಿಕೊಳ್ಲುತ್ತಿಲ್ಲ. ಹೊಡೆದು ನಿಂದಿಸಿದ್ದಾನೆ ಎಂದು ದೂರಿನಲ್ಲಿ ಹೇಳಿದ್ದರು. ಜತೆಗೆ ಆರೋಪಿ ತನ್ನ ಅಜ್ಜ-ಅಜ್ಜಿಯನ್ನೂ ಮನೆಗೆ ಬಂದು ಅಪ್ಪ-ಅಮ್ಮನನ್ನು ನೋಡಲು ಬಿಟ್ಟಿಲ್ಲ. ಇದು ಇನ್ನಷ್ಟು ಮಾನಸಿಕ ಹಿಂಸೆಯನ್ನು ನೀಡಿತ್ತು ಎಂದು ಪೋಷಕರು ಹೇಳಿದ್ದರು.

ಸ್ಥಳೀಯ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದನ್ನು ಹೈಕೋರ್ಟ್ ತಿರಸ್ಕರಿಸಿದೆ.

ಇದನ್ನೂ ಓದಿ: ತಂದೆಯಂತಿದ್ದ ವ್ಯಕ್ತಿಯಿಂದ ಅಪ್ರಾಪ್ತಳ ಮೇಲೆ ಅತ್ಯಾಚಾರ: ಮಗುವಿಗೆ ಜನ್ಮ ನೀಡಿದ ಸಂತ್ರಸ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.