ETV Bharat / bharat

BJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ರಚನೆ, ವರುಣ್​, ಮನೇಕಾ ಗಾಂಧಿಗೆ ಕೊಕ್​​​, ರಾಜ್ಯದಿಂದ ಇವರಿಗೆಲ್ಲ ಸ್ಥಾನ!

author img

By

Published : Oct 7, 2021, 3:04 PM IST

ಬಿಜೆಪಿ ಹಿರಿಯ ನಾಯಕರಾಗಿರುವ ಎಲ್​​.ಕೆ ಅಡ್ವಾಣಿ, ಮುರುಳಿ ಮನೋಹರ್​ ಜೋಶಿಯಂತಹ ಅನುಭವಿ ನಾಯಕರು ಸೇರಿದಂತೆ 80 ಜನರ ರಾಷ್ಟ್ರೀಯ ಕಾರ್ಯಕಾರಿಣಿ ಪಟ್ಟಿ ರಿಲೀಸ್​ ಮಾಡಲಾಗಿದೆ.

BJP
BJP

ನವದೆಹಲಿ: ಭಾರತೀಯ ಜನತಾ ಪಾರ್ಟಿ ಹೊಸದಾಗಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ರಚನೆ ಮಾಡಿದ್ದು, ಇದರಲ್ಲಿ 80 ಸದಸ್ಯರಿಗೆ ಅವಕಾಶ ನೀಡಲಾಗಿದೆ. ಉತ್ತರ ಪ್ರದೇಶ ಲಖಿಂಪುರ್​​ ಹಿಂಸಾಚಾರದ ಬಗ್ಗೆ ಮಾತನಾಡಿದ್ದಕ್ಕಾಗಿ ಸಂಸದ ವರುಣ್​ ಗಾಂಧಿ, ಮನೇಕಾ ಗಾಂಧಿ ಹಾಗೂ ಕೇಂದ್ರ ಮಾಜಿ ಸಚಿವ ಚೌಧರಿ ಬಿರೇಂದ್ರ ಸಿಂಗ್​ಗೆ ಕೊಕ್​ ನೀಡಲಾಗಿದೆ.

ಕಾರ್ಯಕಾರಿ ಸಮಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ,ರಕ್ಷಣಾ ಸಚಿವ ರಾಜನಾಥ್​ ಸಿಂಗ್​​, ಗೃಹ ಸಚಿವ ಅಮಿತ್​ ಶಾ, ನಿತಿನ್​ ಗಡ್ಕರಿ, ಪಿಯೂಷ್​ ಗೊಯಲ್​​​ ಹಾಗೂ ಹಿರಿಯ ಬಿಜೆಪಿ ಮುಖಂಡರಾಗಿರುವ ಎಲ್​.ಕೆ ಅಡ್ವಾಣಿ ಹಾಗೂ ಮುರುಳಿ ಮನೋಹರ್​ ಜೋಶಿಗೆ ಸ್ಥಾನ ನೀಡಲಾಗಿದೆ.

  • भाजपा राष्ट्रीय अध्यक्ष श्री @JPNadda ने राष्ट्रीय कार्यसमिति एवं राष्ट्रीय कार्यसमिति के लिए विशेष आमंत्रित और स्थायी आमंत्रित (पदेन) सदस्यों की नियुक्ति की। https://t.co/7FRFUICsx7

    — BJP (@BJP4India) October 7, 2021 " class="align-text-top noRightClick twitterSection" data=" ">

ಈ ಕಾರ್ಯಕಾರಿಣಿಯಲ್ಲಿ 80 ಸಾಮಾನ್ಯ ಸದಸ್ಯರ ಜೊತೆಗೆ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ 50 ವಿಶೇಷ ಆಹ್ವಾನಿತರು ಹಾಗೂ 179 ಖಾಯಂ ಆಹ್ವಾನಿತರು ಇರಲಿದ್ದು, ಪ್ರಮುಖವಾಗಿ ರಾಷ್ಟ್ರೀಯ ಮೋರ್ಚಾ ಅಧ್ಯಕ್ಷರು, ರಾಜ್ಯ ಪ್ರಭಾರಿಗಳು, ರಾಜ್ಯ ಅಧ್ಯಕ್ಷರು, ರಾಜ್ಯದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸಂಘಟಕರು ಇರಲಿದ್ದಾರೆ.

ರಾಜ್ಯದಿಂದ ಯಾರಿಗೆಲ್ಲ ಮಣೆ?

  • ಪ್ರಹ್ಲಾದ್​ ಜೋಶಿ
  • ನಿರ್ಮಲಾ ಸೀತಾರಾಮನ್​​
  • ಸಿಟಿ ರವಿ
  • ಡಾ. ಉಮೇಶ್​ ಜಾಧವ್​​
  • ತೇಜಸ್ವಿ ಸೂರ್ಯ
  • ಬಸವರಾಜ ಬೊಮ್ಮಾಯಿ
  • ಸಂದಾನಂದಗೌಡ
  • ಜಗದೀಶ್​ ಶೆಟ್ಟರ್​
  • ಬಿ.ಎಸ್​​.ಯಡಿಯೂರಪ್ಪ
  • ಕೆ.ಎಸ್​​.ಈಶ್ವರಪ್ಪ
  • ಆರ್​.ಅಶೋಕ್​
  • ಗೋವಿಂದ್​ ಕಾರಜೋಳ
  • ಅಶ್ವತ್ಥ್ ನಾರಾಯಣ್
  • ಲಕ್ಷ್ಮಣ್ ಸವದಿ
  • ನಳಿನ್ ಕುಮಾರ್​ ಕಟೀಲ್​
  • ಅರುಣ್​ ಕುಮಾರ್​
  • ಡಿ.ಕೆ. ಅರುಣಾ
  • ಅರುಣ್​ ಸಿಂಗ್​
ETV Bharat Logo

Copyright © 2024 Ushodaya Enterprises Pvt. Ltd., All Rights Reserved.