ETV Bharat / bharat

ಶಬರಿಧಾಮ ಮಂದಿರ ಟ್ರಸ್ಟಿ ಸ್ಥಾನದಿಂದ ಗುಜರಾತ್​ ಬಿಜೆಪಿ ಶಾಸಕ ವಜಾ: ಕಾರಣ ನಿಗೂಢ

author img

By

Published : Jun 9, 2022, 5:58 PM IST

ಶಾಸಕ ವಿಜಯ್​​ ಪಟೇಲ್ ಇತ್ತೀಚೆಗೆ ಕ್ರಿಶ್ಚಿಯನ್ ಸಮುದಾಯದವರನ್ನು ದೇವಸ್ಥಾನದೊಳಗೆ ಕರೆದುಕೊಂಡು ಹೋಗಿದ್ದರು. ಹೀಗಾಗಿ ಅವರನ್ನು ಟ್ರಸ್ಟಿ ಸ್ಥಾನದಿಂದ ತೆಗೆದು ಹಾಕಲಾಗಿದೆ ಎನ್ನಲಾಗುತ್ತಿದೆ.

BJP MLA sacked as trustee of Shabridham temple
ಶಬರಿಧಾಮ ಮಂದಿರ ಟ್ರಸ್ಟಿ ಸ್ಥಾನದಿಂದ ಗುಜರಾತ್​ನ ಬಿಜೆಪಿ ಶಾಸಕ ವಜಾ

ಅಹ್ಮದಾಬಾದ್​ (ಗುಜರಾತ್​): ಗುಜರಾತ್​ನ ಬಿಜೆಪಿ ಶಾಸಕ ವಿಜಯ್​ ಪಟೇಲ್​ ಅವರನ್ನು ಶಬರಿಧಾಮ ಮಂದಿರ ಟ್ರಸ್ಟ್​​ನಿಂದ ವಜಾಗೊಳಿಸಲಾಗಿದೆ. ಆದರೆ, ಟ್ರಸ್ಟ್​​ನಿಂದ ಅವರನ್ನು ಕೈಬಿಟ್ಟಿರುವುದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಡಾಂಗ್​ ಕ್ಷೇತ್ರದ ಶಾಸಕರಾದ ವಿಜಯ್​​ ಪಟೇಲ್ ಇತ್ತೀಚೆಗೆ ಕ್ರಿಶ್ಚಿಯನ್ ಸಮುದಾಯದವರನ್ನು ದೇವಸ್ಥಾನದೊಳಗೆ ಕರೆದುಕೊಂಡು ಹೋಗಿದ್ದರು. ಹೀಗಾಗಿ ಅವರನ್ನು ಟ್ರಸ್ಟಿ ಸ್ಥಾನದಿಂದ ತೆಗೆದು ಹಾಕಲಾಗಿದೆ ಎನ್ನಲಾಗುತ್ತಿದೆ. ಆದರೆ, ಇದನ್ನೂ ಸ್ವತಃ ಶಾಸಕರೇ ತಳ್ಳಿ ಹಾಕಿದ್ದಾರೆ.

ಈ ಬಗ್ಗೆ ಮತ್ತೊಬ್ಬ ಟ್ರಸ್ಟಿ ಕಿಶೋರ್​ ಗವೀತ್​ ಮಾತನಾಡಿದ್ದು, ಜೂ.6ರಂದು ವಿಜಯ್​​ ಪಟೇಲ್ ಕ್ರಿಶ್ಚಿಯನ್ ಸಮುದಾಯವರನ್ನು ದೇವಸ್ಥಾನದೊಳಗೆ ಕರೆದುಕೊಂಡು ಬಂದಿದ್ದರು. ಇದು ದೇವಸ್ಥಾನದ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ ಅವರ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ, ಪಟೇಲ್​ ಅವರೊಂದಿಗೆ ಆದಿವಾಸಿ ಕಲ್ಯಾಣ ಖಾತೆಯ ಮಾಜಿ ಸಚಿವ ಗಣಪತ್​ ಸಿನ್ಹಾ ಹಾಗೂ ಮೂರ್ನಾಲ್ಕು ಜನ ಕ್ರಿಶ್ಚಿಯನ್ ಸಮುದಾಯದವರೂ ಗರ್ಭದ್ವಾರ ಬಳಿಗೆ ತೆರಳಿದ್ದರು ಎಂದು ತಿಳಿಸಿದ್ದಾರೆ.

ಮುಂದುವರೆದು, ಆದಿವಾಸಿ ಜನರನ್ನು ಕ್ರಿಶ್ಚಿಯನ್​ಗೆ ಮತಾಂತರವಾಗುವುದನ್ನು ತಡೆಯುವ ಉದ್ದೇಶದಿಂದಲೇ 2014ರಲ್ಲಿ ಶಬರಿಧಾಮ ಮಂದಿರ ಸ್ಥಾಪಿಸಲಾಗಿದೆ. ಶ್ರೀರಾಮನಿಗೆ ಹಣ್ಣುಗಳನ್ನು ತಿನ್ನಿಸಿದ ಆದಿವಾಸಿ ಮಹಿಳೆ ಶಬರಿ ನೆನಪಿನಲ್ಲಿ ಈ ದೇವಸ್ಥಾನ ನಿರ್ಮಿಸಲಾಗಿದೆ. ರಾಮಾಯಣದ ಸಂದರ್ಭದಲ್ಲಿ ಶಬರಿ ಇದೇ ಸ್ಥಳದಲ್ಲಿ ವಾಸುತ್ತಿದ್ದರು ಎಂಬ ನಂಬಿಕೆ ಎಂದು ಕಿಶೋರ್ ವಿವರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ವಿಜಯ್​ ಪಟೇಲ್, ನಾನು ಯಾವ ಕ್ರಿಶ್ಚಿಯನ್ ಸಮುದಾಯದವರನ್ನು ದೇವಸ್ಥಾನದೊಳಗೆ ಕರೆದುಕೊಂಡು ಹೋಗಿಲ್ಲ. ನನ್ನನ್ನು ವಜಾ ಮಾಡುವ ಬಗ್ಗೆ ಬರೆದ ಪತ್ರದಲ್ಲೂ ನಿಖರ ಕಾರಣ ಕೊಟ್ಟಿಲ್ಲ. ಆದರೆ, ದೇವಸ್ಥಾನದ ಟ್ರಸ್ಟ್​ನ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂಓದಿ: ನೂಪುರ್​ ಶರ್ಮಾ, ಓವೈಸಿ, ಸ್ವಾಮಿ ಯತಿ ನರಸಿಂಹಾನಂದ ಸೇರಿ 10 ಮಂದಿ ವಿರುದ್ಧ ಪ್ರಕರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.