ETV Bharat / bharat

ಯುಪಿ ಎಲೆಕ್ಷನ್​​ಗೆ ಮೋದಿ, ನಡ್ಡಾ, ಯೋಗಿ ಸ್ಟಾರ್​ ಕ್ಯಾಂಪೇನರ್ಸ್​.. ಲಿಸ್ಟ್​ನಿಂದ ವರುಣ್​, ಮನೇಕಾ ಔಟ್​

author img

By

Published : Jan 19, 2022, 4:08 PM IST

Uttar Pradesh Election-2022: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲು ಸ್ಟಾರ್ ಕ್ಯಾಂಪೇನರ್ ಲಿಸ್ಟ್ ರಿಲೀಸ್​ ಆಗಿದ್ದು, ಮೋದಿ, ನಡ್ಡಾ ಸೇರಿದಂತೆ 30 ಮುಖಂಡರಿಗೆ ಮಣೆ ಹಾಕಲಾಗಿದೆ.

up assembly elections 2022
up assembly elections 2022

ನವದೆಹಲಿ: ಬಹುನಿರೀಕ್ಷಿತ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಈಗಾಗಲೇ ಮುಹೂರ್ತ ಫಿಕ್ಸ್​​​ ಆಗಿದ್ದು, ಫೆ. 10ರಂದು ಮೊದಲ ಹಂತದ ಮತದಾನ ನಡೆಯಲಿದೆ. ಇದಕ್ಕೋಸ್ಕರ ಆಡಳಿತ ಪಕ್ಷ ಬಿಜೆಪಿ ಅಭ್ಯರ್ಥಿಗಳ ಮೊದಲ ಲಿಸ್ಟ್​​ ರಿಲೀಸ್ ಮಾಡಿದೆ. ಇದೀಗ ಚುನಾವಣೆಯಲ್ಲಿ ಪ್ರಚಾರ ನಡೆಸಲು ಸ್ಟಾರ್ ಕ್ಯಾಂಪೇನರ್ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​​ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಪ್ರಮುಖರಾಗಿದ್ದು, ಒಟ್ಟು 30 ಮುಖಂಡರು ಪಟ್ಟಿಯಲ್ಲಿದ್ದಾರೆ. ಆದರೆ, ಬಿಜೆಪಿ ಸಂಸದರಾಗಿರುವ ವರುಣ್ ಗಾಂಧಿ ಹಾಗೂ ಮನೇಕಾ ಗಾಂಧಿಗೆ ಕೊಕ್​ ನೀಡಲಾಗಿದೆ.

ಕ್ಯಾಂಪೇನರ್​​​ ಲಿಸ್ಟ್​ನಲ್ಲಿ ಯಾರೆಲ್ಲ ಇದ್ದಾರೆ..

  • ಪ್ರಧಾನಿ ನರೇಂದ್ರ ಮೋದಿ
  • ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ
  • ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
  • ಕೇಂದ್ರ ಗೃಹ ಸಚಿವ ಅಮಿತ್​ ಶಾ
  • ರಕ್ಷಣಾ ಸಚಿವ ರಾಜನಾಥ್​ ಸಿಂಗ್​
  • ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್
  • ಕೇಂದ್ರ ಸಚಿವ ಧರ್ಮೇಂದ್ರ ಪ್ರದಾನ್
  • ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಅನೇಕರು ಲಿಸ್ಟ್​ನಲ್ಲಿದ್ದಾರೆ.
    • BJP releases a list of 30 leaders who will campaign for the party's candidates in the first phase of the upcoming #UttarPradeshElection2022

      PM Modi, party chief JP Nadda, Defence Minister Rajnath Singh, HM Amit Shah, CM Yogi Adityanath, party MP Hema Malini & others to campaign. pic.twitter.com/w0IKkHkQZ6

      — ANI (@ANI) January 19, 2022 " class="align-text-top noRightClick twitterSection" data=" ">

ಕಳೆದ ಕೆಲ ತಿಂಗಳಿಂದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಉತ್ತರ ಪ್ರದೇಶದ ಪಿಲಿಭಿತ್​​ ಕ್ಷೇತ್ರದ ಸಂಸದ ವರುಣ್ ಗಾಂಧಿ ಹಾಗೂ ಸುಲ್ತಾನ್​ಪುರ್​ ಸಂಸದೆ ಮನೇಕಾ ಗಾಂಧಿಗೆ ಕೈಬಿಡಲಾಗಿದೆ. ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಕ್ರಮವಾಗಿ ಫೆಬ್ರವರಿ 10, 14, 20, 23, 27 ಮಾರ್ಚ್​​ 3 ಹಾಗೂ 7ರಂದು ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ದೇಶದಲ್ಲಿ ಕೊರೊನಾ ಮೂರನೇ ಅಲೆ ಜೋರಾಗಿರುವ ಕಾರಣ ಬಹುತೇಕ ಎಲ್ಲರೂ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಸಭೆ-ಸಮಾರಂಭಗಳನ್ನುದ್ದೇಶಿಸಿ ಮಾತನಾಡುವ ಸಾಧ್ಯತೆ ಕೂಡ ದಟ್ಟವಾಗಿದೆ.

ಇದನ್ನೂ ಓದಿರಿ: ಸಾಲ ತೀರಿಸದ್ದಕ್ಕೆ ರೈತರ ಜಮೀನು ಹರಾಜು ಹಾಕಿದ ಬ್ಯಾಂಕ್​​ ಸಿಬ್ಬಂದಿ.. ಮನವಿಗೂ ಸಿಗದ ಮನ್ನಣೆ

ಕಳೆದ ಸಲ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಕ್ಕೆ ಟಾಂಗ್​ ನೀಡಿದ್ದ ಬಿಜೆಪಿ ಅತಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಸರ್ಕಾರ ರಚಿಸಿತ್ತು. ಇದೀಗ, ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಸರತ್ತು ನಡೆಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.