ETV Bharat / bharat

ದೇಶದಲ್ಲಿ ಪ್ರಾಬಲ್ಯ ವೃದ್ಧಿಸಿಕೊಂಡ ಕೇಸರಿ ಪಡೆ: ಯಾವ ರಾಜ್ಯದಲ್ಲಿ? ಯಾರ ಸರ್ಕಾರ?

author img

By

Published : Mar 11, 2022, 10:41 AM IST

Updated : Mar 11, 2022, 10:49 AM IST

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಬಳಿಕ ಪಂಜಾಬ್​ನಲ್ಲಿ ಮಾತ್ರ ಆಡಳಿತ ಚುಕ್ಕಾಣಿ ಬದಲಾಗಿದೆ. ಕಾಂಗ್ರೆಸ್​ ಬದಲಿಗೆ ಆಮ್​ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಿದೆ. ಇತರ ನಾಲ್ಕು ರಾಜ್ಯಗಳಲ್ಲಿ ಈ ಹಿಂದೆಯೇ ಬಿಜೆಪಿ ಅಧಿಕಾರದಲ್ಲಿ ಇತ್ತು. ಈ ಚುನಾವಣೆಯಿಂದ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರದ ಗುದ್ದುಗೆ ಏರುವ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿದೆ.

bjp
bjp

ನವದೆಹಲಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ ತನ್ನ ಪ್ರಾಬಲ್ಯವನ್ನು ವಿಸ್ತರಿಸಿಕೊಂಡಿದೆ. ಆದರೆ, ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬರಲು ಯಶಸ್ವಿಯಾಗಿದ್ದರೂ, ಕಳೆದ ಬಾರಿಗಿಂತ ಈ ಬಾರಿ ಅದರ ಸಾಧನೆ ಅಷ್ಟೊಂದು ಉತ್ತಮವಾಗಿಲ್ಲ ಎಂದೇ ವಿಶ್ಲೇಷಿಸಲಾಗಿದೆ.

ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಈ ಹಿಂದೆಯೇ ಬಿಜೆಪಿ ಅಧಿಕಾರದಲ್ಲಿ ಇತ್ತು. ಪಂಜಾಬ್​ನಲ್ಲಿ ಅಧಿಕಾರ ಹಿಡಿಯಬೇಕೆಂಬ ಪ್ರಯತ್ನ ಫಲಿಸಿಲ್ಲ ಅಷ್ಟೇ. ಉತ್ತರ ಪ್ರದೇಶ ಸೇರಿ ಗೋವಾ, ಮಣಿಪುರ, ಉತ್ತರಾಖಂಡ್​​ನಲ್ಲಿ ತನ್ನ ಅಧಿಪತ್ಯಕ್ಕೆ ಗಟ್ಟಿ ನೆಲೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದರೂ, ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರದ ಗುದ್ದುಗೆ ಏರುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

40 ಸದಸ್ಯ ಬಲದ ಗೋವಾದಲ್ಲಿ ಈ ಹಿಂದೆ 17 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ ಈ ಬಾರಿ 20 ಸ್ಥಾನಗಳು ಪಡೆದಿದೆ. 60 ಸದಸ್ಯ ಬಲದ ಮಣಿಪುರದಲ್ಲಿ 21ರಿಂದ 32 ಸ್ಥಾನಗಳಿಗೆ ತನ್ನ ಪ್ರಬಲ್ಯ ಹೆಚ್ಚಿಸಿಕೊಂಡಿದೆ. 70 ಸದಸ್ಯ ಬಲದ ಉತ್ತರಾಖಂಡ್​ನಲ್ಲೂ ಕಳೆದ ಬಾರಿ 57 ಪಡೆದಿದ್ದ ಬಿಜೆಪಿ ಈ ಬಾರಿ 47 ಸ್ಥಾನಗಳಲ್ಲಿ ವಿಜಯ ಸಾಧಿಸಿ ಮತ್ತೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇತ್ತ, 117 ಸಂಖ್ಯಾಬಲದ ಪಂಜಾಬ್​ನಲ್ಲಿ 3ರಿಂದ 2 ಸ್ಥಾನಕ್ಕೆ ಬಿಜೆಪಿ ಕುಸಿದು ಹಿನ್ನಡೆ ಅನುಭವಿಸಿದೆ.

403 ಸದಸ್ಯ ಬಲದ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಪತ್ಯ ಸಾಧಿಸಿದೆ. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ 312 ಸ್ಥಾನಗಳನ್ನು ಗೆದ್ದಿದ್ದ ಕೇಸರಿ ಪಡೆ ಈ ಬಾರಿ 255 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮೈತ್ರಿಯೊಂದಿಗೆ ಒಟ್ಟಾರೆ 274 ಸ್ಥಾನಗಳಲ್ಲಿ ಗೆದ್ದಿದೆ. ಆದರೆ, ಯೋಗಿ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಕೇಶವಪ್ರಸಾದ್ ಮೌರ್ಯ ಸೇರಿ 11 ಜನ ಸಚಿವರು ಈ ಬಾರಿ ಸೋಲು ಕಂಡಿದ್ದಾರೆ ಎಂಬುದು ಗಮನಾರ್ಹ.

ಯಾವ ರಾಜ್ಯದಲ್ಲಿ? ಯಾರ ಸರ್ಕಾರ?. ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಬಳಿಕ ಪಂಜಾಬ್​ನಲ್ಲಿ ಮಾತ್ರ ಆಡಳಿತ ಚುಕ್ಕಾಣಿ ಬದಲಾಗಿದೆ. ದೆಹಲಿಯಲ್ಲಿ ಅಧಿಕಾರದಲ್ಲಿರುವ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಆಮ್​ ಆದ್ಮಿ ಪಕ್ಷದ ಪಂಜಾಬ್​ಗೂ ತನ್ನ ಅಧಿಕಾರವನ್ನು ವಿಸ್ತರಿಸಿದೆ. ಈ ಮೂಲಕ ಎರಡು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿರುವ ಹೆಗ್ಗಳಿಕೆಗೆ ಆಪ್​ ಪಾತ್ರವಾಗಿದೆ.

ಕೇಂದ್ರದ ಆಡಳಿತಾರೂಢ ಬಿಜೆಪಿ, ಈ ಪಂಚರಾಜ್ಯಗಳ ಚುನಾವಣೆ ಬಳಿಕ ಒಟ್ಟಾರೆ 18 ರಾಜ್ಯಗಳಲ್ಲಿ ಅಧಿಕಾರದಲ್ಲಿ ಮುಂದುವರೆದಿದೆ. 8 ರಾಜ್ಯಗಳಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ನಡೆಸುತ್ತಿದ್ದರೆ, 10 ರಾಜ್ಯಗಳಲ್ಲಿ ಬಿಜೆಪಿ ಮೈತ್ರಿಕೂಟದ ಸರ್ಕಾರಗಳಿವೆ. ದೇಶದ ಹಳೆ ಪಕ್ಷ ಕಾಂಗ್ರೆಸ್​ ಎರಡು ರಾಜ್ಯಗಳಲ್ಲಿ ಸ್ವಂತ ಬಲದ ಸರ್ಕಾರ ಹೊಂದಿದೆ. ಇತರ ಎರಡು ಕಡೆಗಳಲ್ಲಿ ಕಾಂಗ್ರೆಸ್​ ಪಾಲುದಾರ ಸರ್ಕಾರಗಳು ಅಧಿಕಾರದಲ್ಲಿವೆ.

ಬಿಜೆಪಿ ಅಧಿಕಾರದ ರಾಜ್ಯಗಳು

  • ಅರುಣಾಚಲ ಪ್ರದೇಶ
  • ಗೋವಾ
  • ಗುಜರಾತ್​
  • ಹಿಮಾಚಲ ಪ್ರದೇಶ
  • ಕರ್ನಾಟಕ
  • ಮಧ್ಯಪ್ರದೇಶ
  • ಉತ್ತರ ಪ್ರದೇಶ
  • ಉತ್ತರಾಖಂಡ
  • ಅಸ್ಸೋಂ (ಬಿಜೆಪಿ-ಎಜಿಪಿ-ಯುಪಿಎಲ್)
  • ಬಿಹಾರ (ಬಿಜೆಪಿ-ಜೆಡಿಯು-ಎಚ್​​ಎಎಂ-ವಿಐಪಿ)
  • ಹರಿಯಾಣ (ಬಿಜೆಪಿ-ಜೆಜೆಪಿ)
  • ಮೇಘಾಲಯ (ಎನ್​ಎನ್​ಪಿ-ಯುಡಿಪಿ-ಪಿಡಿಎಫ್​-ಬಿಜೆಪಿ
  • ಮಿಜೋರಾಂ (ಎಂಎನ್​ಎಫ್​-ಬಿಜೆಪಿ)
  • ಪುದುಚೇರಿ (ಎಐಎನ್​ಆರ್​ಸಿ-ಬಿಜೆಪಿ)
  • ನಾಗಾಲ್ಯಾಂಡ್​ (ಎನ್​ಡಿಪಿಪಿ-ಬಿಜೆಪಿ)
  • ಸಿಕ್ಕಿಂ (ಎಸ್​ಕೆಎಂ-ಬಿಜೆಪಿ)
  • ತ್ರಿಪುರ ಬಿಜೆಪಿ-ಐಪಿಎಫ್​ಟಿ
  • ಮಣಿಪುರ-ಬಿಜೆಪಿ-ಎನ್​​ಪಿಪಿ-ಎಲ್​ಜೆಪಿ

ಕಾಂಗ್ರೆಸ್​ ಅಧಿಕಾರದ ರಾಜ್ಯಗಳು

  • ಛತ್ತೀಸ್‌ಗಢ
  • ರಾಜಸ್ಥಾನ (ಆರ್​ಎಲ್​​ಡಿ ಮೈತ್ರಿ)

ಪ್ರಾದೇಶಿಕ ಪಕ್ಷಗಳ ಸರ್ಕಾರಗಳು

  • ಆಂಧ್ರಪ್ರದೇಶ- ವೈಎಸ್​ಆರ್​ ಕಾಂಗ್ರೆಸ್​
  • ಕೇರಳ -ಸಿಪಿಐಎಂ-ಸಿಪಿಐ
  • ಒಡಿಶಾ-ಆರ್​ಜೆಡಿ
  • ತಮಿಳುನಾಡು -ಡಿಎಂಕೆ​
  • ತೆಲಂಗಾಣ-ಟಿಆರ್​ಎಸ್​
  • ಪಶ್ಚಿಮ ಬಂಗಾಳ- ಟಿಎಂಸಿ

ಆಮ್​ ಆದ್ಮಿ ಪಕ್ಷ

  • ದೆಹಲಿ
  • ಪಂಜಾಬ್

ಇತರ ಮೈತ್ರಿ ಸರ್ಕಾರಗಳು

  • ಜಾರ್ಖಂಡ್​ (ಜೆಎಂಎಂ-ಕಾಂಗ್ರೆಸ್​-ಆರ್​ಜೆಡಿ-ಎನ್​ಸಿಪಿ)
  • ಮಹಾರಾಷ್ಟ್ರ (ಶಿವಸೇನೆ-ಕಾಂಗ್ರೆಸ್​-ಎನ್​ಪಿಸಿ)
Last Updated : Mar 11, 2022, 10:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.