ETV Bharat / bharat

ನುಹ್ ಹಿಂಸಾಚಾರ ಪ್ರಕರಣ: ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಬಿಟ್ಟು ಬಜರಂಗಿ

author img

By ETV Bharat Karnataka Team

Published : Aug 31, 2023, 12:27 PM IST

ನುಹ್ ಹಿಂಸಾಚಾರದ ಆರೋಪಿ ಬಿಟ್ಟು ಬಜರಂಗಿ ಜೈಲಿನಿಂದ ಹೊರಬಂದಿದ್ದಾರೆ. ಆರೋಪಿಗೆ ಬುಧವಾರ ನುಹ್ ಜಿಲ್ಲಾ ನ್ಯಾಯಾಲಯದಿಂದ ಜಾಮೀನು ದೊರೆತಿದ್ದು, ಫರಿದಾಬಾದ್‌ನ ನೀಮ್ಕಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

Bittu Bajrangi Released from Jail  Bittu bajrangi gets bail  Nuh violence accused Bittu Bajrangi  vhp on bittu bajrangi  nuh violence update  ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಬಿಟ್ಟು ಬಜರಂಗಿ  ನುಹ್ ಹಿಂಸಾಚಾರ ಪ್ರಕರಣ  ನುಹ್ ಹಿಂಸಾಚಾರದ ಆರೋಪಿ ಬಿಟ್ಟು ಬಜರಂಗಿ  ನುಹ್ ಜಿಲ್ಲಾ ನ್ಯಾಯಾಲಯದಿಂದ ಜಾಮೀನು  ರಿದಾಬಾದ್‌ನ ನೀಮ್ಕಾ ಜೈಲಿನಿಂದ ಬಿಡುಗಡೆ
ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಬಿಟ್ಟು ಬಜರಂಗಿ

ಫರಿದಾಬಾದ್(ಹರಿಯಾಣ): ನುಹ್ ಹಿಂಸಾಚಾರದ ಆರೋಪಿ ಬಿಟ್ಟು ಬಜರಂಗಿಗೆ ಬುಧವಾರ ನುಹ್ ಜಿಲ್ಲಾ ನ್ಯಾಯಾಲಯದಿಂದ ಜಾಮೀನು ಸಿಕ್ಕಿದೆ. ಜಾಮೀನು ಪಡೆದ ನಂತರ ಬಿಟ್ಟು ಬಜರಂಗಿ ಬುಧವಾರ ಸಂಜೆ ಫರಿದಾಬಾದ್‌ನ ನೀಮ್ಕಾ ಜೈಲಿನಿಂದ ಬಿಡುಗಡೆಯಾದರು. ಜೈಲಿನಿಂದ ಹೊರಬಂದ ಬಿಟ್ಟು ಬಜರಂಗಿ ಅವರನ್ನು ಬೆಂಬಲಿಗರು ಹೂವಿನ ಹಾರ ಹಾಕಿ ಸ್ವಾಗತಿಸಿದರು. ಪೊಲೀಸರು ಮಾಡಿರುವ ಆರೋಪವನ್ನು ಬಿಟ್ಟು ಬಜರಂಗಿ ನಿರಾಕರಿಸಿದ್ದಾರೆ.

ಫರಿದಾಬಾದ್ ನೀಮ್ಕಾ ಜೈಲಿನಿಂದ ಹೊರಬಂದ ಬಜರಂಗಿ ಮಾತನಾಡಿ, ನನ್ನನ್ನು ಆಗಸ್ಟ್ 17 ರಂದು ನೀಮ್ಕಾ ಜೈಲಿಗೆ ಕಳುಹಿಸಲಾಯಿತು. ಇಂದು ನನಗೆ ಜಾಮೀನು ಸಿಕ್ಕಿತು. ನನ್ನ ವಿರುದ್ಧ ವಿಧಿಸಿರುವ ಸೆಕ್ಷನ್‌ಗಳು ತಪ್ಪು ಎಂದು ಹೇಳಿದ್ದಾರೆ. ಪೊಲೀಸ್ ಆಡಳಿತದ ಕ್ರಮದಿಂದಾಗಿ ನಾನು ಜೈಲಿನೊಳಗೆ ಹೋಗಿದ್ದೆ. ಆದರೆ ನನಗೆ ಜಾಮೀನು ಸಿಕ್ಕಿದೆ. ನಂತರ ಮೊದಲಿನಂತೆ ಗೋಸಂರಕ್ಷಣೆ ಮತ್ತು ಧರ್ಮದ ಒಳಿತಿಗಾಗಿ ಸಕ್ರಿಯವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

  • राज कुमार उर्फ बिट्टू बजरंगी, जिसे बजरंग दल कार्यकर्ता बताया जा रहा है, उसका बजरंग दल से कभी कोई संबंध नहीं रहा। उसके द्वारा कथित रूप से जारी किए गए वीडियो की सामग्री को भी विश्व हिन्दू परिषद उचित नहीं मानती।

    — Vishva Hindu Parishad -VHP (@VHPDigital) August 16, 2023 " class="align-text-top noRightClick twitterSection" data=" ">

ನುಹ್ ಹಿಂಸಾಚಾರದ ಆರೋಪಿ ಬಿಟ್ಟು ಬಜರಂಗಿ ತನ್ನನ್ನು ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ನ ನಾಯಕ ಎಂದು ಕರೆದುಕೊಳ್ಳುತ್ತಿದ್ದಾರೆ. ಆದರೆ ಅವರು ಹಿಂಸಾಚಾರದ ಆರೋಪದ ಮೇಲೆ ಜೈಲಿಗೆ ಹೋದ ನಂತರ ವಿಶ್ವ ಹಿಂದೂ ಪರಿಷತ್ ಅವರಿಂದ ದೂರವಾಯಿತು. ಬಿಟ್ಟು ಬಜರಂಗಿಗೆ ಬಜರಂಗದಳ ಅಥವಾ ವಿಎಚ್‌ಪಿಗೆ ಯಾವುದೇ ಸಂಬಂಧವಿಲ್ಲ ಎಂದು ವಿಎಚ್‌ಪಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಬಜರಂಗದಳದ ಕಾರ್ಯಕರ್ತ ಎಂದು ಬಣ್ಣಿಸಲಾಗುತ್ತಿರುವ ರಾಜ್ ಕುಮಾರ್ ಅಲಿಯಾಸ್ ಬಿಟ್ಟು ಬಜರಂಗಿಗೆ ಬಜರಂಗದಳದೊಂದಿಗೆ ಯಾವುದೇ ಸಂಬಂಧವಿರಲಿಲ್ಲ ಎಂದು ಹೇಳಲಾಗಿದೆ.

ಜುಲೈ 31 ರಂದು ಬ್ರಜ್ ಮಂಡಲ್ ಯಾತ್ರೆಯ ಸಂದರ್ಭದಲ್ಲಿ ನುಹ್‌ನಲ್ಲಿ ಹಿಂಸಾಚಾರ ಸಂಭವಿಸಿತ್ತು. ಈ ಹಿಂಸಾಚಾರದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ದುಷ್ಕರ್ಮಿಗಳು 100ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಹಿಂಸಾಚಾರದ ನಂತರ, ನುಹ್‌ನಲ್ಲಿ ಕರ್ಫ್ಯೂ ವಿಧಿಸಲಾಯಿತು ಮತ್ತು 8 ಜಿಲ್ಲೆಗಳಲ್ಲಿ ಸೆಕ್ಷನ್ 144 ವಿಧಿಸಬೇಕಾಗಿತ್ತು. ಬಿಟ್ಟು ಬಜರಂಗಿ ವಿರುದ್ಧ ಬ್ರಜ್ ಮಂಡಲ್ ಯಾತ್ರೆಗೆ ಸಂಬಂಧಿಸಿದಂತೆ ಉದ್ರೇಕಕಾರಿ ಹೇಳಿಕೆಗಳನ್ನು ನೀಡುವುದು ಮತ್ತು ಅಸ್ತ್ರಗಳನ್ನು ಬೀಸುವುದು ಸೇರಿದಂತೆ ಹಲವು ಗಂಭೀರ ಆರೋಪಗಳಿವೆ. ನಂತರ ತಪಾಡು ಸಿಐಎ ಆರೋಪಿ ಬಿಟ್ಟು ಬಜರಂಗಿಯನ್ನು ಆಗಸ್ಟ್ 15 ರಂದು ಫರಿದಾಬಾದ್‌ನಲ್ಲಿ ಬಂಧಿಸಿದರು.

ಬಿಟ್ಟು ಬಜರಂಗಿ ವಿರುದ್ಧ ಐಪಿಸಿಯ ಸೆಕ್ಷನ್‌ 148 (ಗಲಭೆ), 149 (ಗುಂಪಾಗಿ ಯಾರೊಬ್ಬರ ಮೇಲೆ ಹಲ್ಲೆ), 332 (ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು), 353 (ಸಾರ್ವಜನಿಕ ನೌಕರನ ಮೇಲೆ ಹಲ್ಲೆ) ಸೇರಿದಂತೆ ಅಕ್ರಮ ಶಸ್ತ್ರಾಸ್ತ್ರ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಈ ಪ್ರಕರಣಕ್ಕೆ 186 (ಸಾರ್ವಜನಿಕ ಸೇವಕನ ಕೆಲಸಕ್ಕೆ ಅಡ್ಡಿಪಡಿಸುವುದು), 395 (ದರೋಡೆ), 397 (ಅಕ್ರಮ ಶಸ್ತ್ರಾಸ್ತ್ರ), 506 (ಅಪರಾಧ ಬೆದರಿಕೆ) ಸೆಕ್ಷನ್​ಗಳನ್ನು ಸೇರಿಸಲಾಗಿದೆ. ಈ ಪ್ರಕಣದ ತನಿಖೆ ಮುಂದುವರಿದಿದೆ.

ಓದಿ: ಹರಿಯಾಣ: ವಿಎಚ್‌ಪಿ ಯಾತ್ರೆಗಿಲ್ಲ ಅನುಮತಿ, ನೂಹ್‌ ಜಿಲ್ಲೆಯಲ್ಲಿ ಬಿಗಿ ಭದ್ರತೆ, ಸೆಕ್ಷನ್ 144 ಜಾರಿ...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.