ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಗೆ ಮಹಿಳೆಯರ ಬಟ್ಟೆ ತೊಳೆದು, ಇಸ್ತ್ರಿ ಹಾಕುವ ಶಿಕ್ಷೆ ನೀಡಿದ ಕೋರ್ಟ್

author img

By

Published : Sep 24, 2021, 7:06 PM IST

Bihar Court

ಅಪರಾಧಿಯೊಬ್ಬನಿಗೆ ಗ್ರಾಮದಲ್ಲಿನ ಎಲ್ಲ ಮಹಿಳೆಯರ ಬಟ್ಟೆ ತೊಳೆದು, ಇಸ್ತ್ರಿ ಮಾಡಿಕೊಡುವ ಶಿಕ್ಷೆ ನೀಡಿರುವ ಕೋರ್ಟ್​​ ಮುಂದಿನ 6 ತಿಂಗಳ ಕಾಲ ಈ ಕೆಲಸ ಮಾಡುವಂತೆ ಆದೇಶದಲ್ಲಿ ತಿಳಿಸಿದೆ. ಇಷ್ಟಕ್ಕೂ ವ್ಯಕ್ತಿ ಮಾಡಿರುವ ತಪ್ಪೇನು? ಘಟನೆ ನಡೆದಿದ್ದು ಎಲ್ಲಿ? ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ..

ಮಧುಬನಿ(ಬಿಹಾರ): ಮಹಿಳೆಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ಬಿಹಾರದ ಕೋರ್ಟ್​ ವಿಚಿತ್ರ ಶಿಕ್ಷೆ ನೀಡಿದೆ. ಕೋರ್ಟ್​​ ಇತಿಹಾಸದಲ್ಲಿ ಈ ರೀತಿಯ ಶಿಕ್ಷೆ ನೀಡಿರುವುದು ಇದೇ ಮೊದಲು ಎಂದು ಹೇಳಲಾಗ್ತಿದೆ.

20 ವರ್ಷದ ಲಾಲನ್​​ ಕುಮಾರ್​​ ಬಟ್ಟೆ ತೊಳೆಯುವ (ಧೋಬಿ) ಕೆಲಸ ಮಾಡ್ತಿದ್ದ. ಈ ವೇಳೆ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಕಳೆದ ಏಪ್ರಿಲ್​​ ತಿಂಗಳಲ್ಲಿ ಆತನನ್ನು ಬಂಧಿಸಲಾಗಿತ್ತು.

ಸುಮಾರು ಆರು ತಿಂಗಳ ಕಾಲ ಊರಿನಲ್ಲಿರುವ ಎಲ್ಲ ಮಹಿಳೆಯರ ಬಟ್ಟೆ ತೊಳೆದು, ಇಸ್ತ್ರಿ ಮಾಡಿ ಕೊಡಬೇಕು. ಇದಕ್ಕೆ ಬೇಕಾದ ಎಲ್ಲ ರೀತಿಯ ವಸ್ತುಗಳನ್ನು ಖುದ್ದಾಗಿ ಖರೀದಿ ಮಾಡಬೇಕು ಎಂದು ಹೇಳಲಾಗಿದೆ. ಈ ನಿರ್ಧಾರದಿಂದ ಗ್ರಾಮದ ಎಲ್ಲ ಮಹಿಳೆಯರು ಫುಲ್​ ಖುಷಿಯಾಗಿದ್ದಾರೆ.

ಇದನ್ನೂ ಓದಿ: ಸಂಸದೀಯ ಮೌಲ್ಯ ಕಾಪಾಡುವಲ್ಲಿ ನಾವೆಲ್ಲ ಎಷ್ಟು ಯಶಸ್ವಿ ಆಗಿದ್ದೇವೆ ಎಂಬುದರ ಬಗ್ಗೆ ಚಿಂತಿಸಬೇಕಿದೆ : ಸ್ಪೀಕರ್ ಓಂ ಬಿರ್ಲಾ

ಬಟ್ಟೆ ತೊಳೆದು ಇಸ್ತ್ರಿ ಮಾಡುವ ಶಿಕ್ಷೆಯ ಜೊತೆಗೆ ತಲಾ 10 ಸಾವಿರ ರೂ. ಎರಡು ಶ್ಯೂರಿಟಿ ನೀಡುವಂತೆ ನ್ಯಾಯಾಲಯ ತಿಳಿಸಿದ್ದು, ಆರು ತಿಂಗಳ ನಂತರ ಸರ್ಕಾರಿ ಅಧಿಕಾರಿಯಿಂದ ನೀಡಲಾದ ಪ್ರಮಾಣಪತ್ರವನ್ನು ಗ್ರಾಮದ ಸರಪಂಚ್​​ಗೆ ನೀಡಬೇಕು ಎಂದು ತಿಳಿಸಿದೆ.

ಘಟನೆಗೆ ಸಂಬಂಧಿಸಿದಂತೆ ಎಸ್​​ಹೆಚ್​​ಒ ಸಂತೋಷ್​ ಕುಮಾರ್​ ಮಂಡಲ್​ ಮಾತನಾಡಿದ್ದು, ಏಪ್ರಿಲ್​ 17ರಂದು ಧೋಬಿ ವಿರುದ್ಧ ಎಫ್​ಐಆರ್ ದಾಖಲಾಗಿತ್ತು. ತದನಂತರ ಆತನ ಬಂಧನ ಮಾಡಲಾಗಿತ್ತು. ಇದೀಗ ಕೋರ್ಟ್​ನಿಂದ ಈ ರೀತಿಯ ತೀರ್ಪು ಹೊರಬಿದ್ದಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.