ETV Bharat / bharat

ಜಗತ್ತಿಗೆ ಭಾರತ ನೀಡಿದ ಬಲು ದೊಡ್ಡ ಕೊಡುಗೆ ಯೋಗ ; ರಾಷ್ಟ್ರಪತಿ ಕೋವಿಂದ್

author img

By

Published : Jun 21, 2020, 2:40 PM IST

ನಮ್ಮಲ್ಲಿರುವ ಹಲವು ಒತ್ತಡಗಳ ಮಧ್ಯೆ ಯೋಗ ಅಭ್ಯಾಸ ಮಾಡುವುದರಿಂದ ದೇಹವು ಸದೃಢವಾಗಿರುವ ಜೊತೆಗೆ ಮನಸ್ಸು ಪ್ರಶಾಂತವಾಗಿಡಲು ಸಹಾಯ..

President Kovind
ರಾಷ್ಟ್ರಪತಿ ಕೋವಿಂದ್

ನವದೆಹಲಿ : ಯೋಗ ಎಂಬ ಪ್ರಾಚೀನ ವಿಜ್ಞಾನವು ಜಗತ್ತಿಗೆ ಭಾರತ ನೀಡಿದ ಬಲು ದೊಡ್ಡ ಕೊಡುಗೆ ಎಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚು ಹೆಚ್ಚು ಜನರು ಯೋಗವನ್ನು ಅಭ್ಯಾಸ ಮಾಡುತ್ತಾ, ಅದನ್ನು ತಮ್ಮಲ್ಲಿ ಅಳವಡಿಸಿಕೊಳ್ಳುವುದನ್ನು ನೋಡಿ ಸಂತೋಷವಾಗಿದೆ. ನಮ್ಮಲ್ಲಿರುವ ಹಲವು ಒತ್ತಡಗಳ ಮಧ್ಯೆ, ವಿಶೇಷವಾಗಿ ಕೋವಿಡ್-19 ಸೃಷ್ಟಿರುವ ಈ ಬಿಕ್ಕಟ್ಟಿನ ನಡುವೆ ಯೋಗ ಅಭ್ಯಾಸ ಮಾಡುವುದರಿಂದ ದೇಹವು ಸದೃಢವಾಗಿರುವ ಜೊತೆಗೆ ಮನಸ್ಸು ಪ್ರಶಾಂತವಾಗಿಡಲು ಸಹಾಯ ಮಾಡುತ್ತದೆ ಎಂದು ಕೋವಿಂದ್​ ತಿಳಿಸಿದ್ದಾರೆ.

  • Greetings on #InternationalYogaDay.

    The ancient science of Yoga is India’s great gift to the world.

    Glad to see more and more people adopting it.

    Amid stress and strife, especially with #Covid19, practicing Yoga can help keep the body fit and mind serene. pic.twitter.com/1ZGqsTnn4A

    — President of India (@rashtrapatibhvn) June 21, 2020 " class="align-text-top noRightClick twitterSection" data=" ">

ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಕೂಡಾ ಯೋಗಾಭ್ಯಾಸವನ್ನು ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.