ETV Bharat / bharat

ವಿಂಗ್​​ ಕಮಾಂಡರ್​​​​​​​ ಅಭಿನಂದನ್​​​​​​ ಮತ್ತೆ ಡ್ಯೂಟಿಗೆ ಹಾಜರ್​​​​​!

author img

By

Published : Aug 22, 2019, 8:09 AM IST

ಅಭಿನಂದನ್​ ಮತ್ತೆ ಕೆಲಸಕ್ಕೆ ಹಾಜರಾಗಿರುವ ಬಗ್ಗೆ ಸೇನೆಯ ಉನ್ನತ ಮೂಲಗಳು ಮಾಹಿತಿ ನೀಡಿದ್ದು, ರಾಜಸ್ಥಾನದಲ್ಲಿರುವ ವಾಯುಸೇನಾ ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಭಿನಂದನ್

ನವದೆಹಲಿ: ಫೆಬ್ರವರಿ ತಿಂಗಳಲ್ಲಿ ಭಾರತ ಹಾಗೂ ಪಾಕ್ ಗಡಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದ ವೇಳೆ ಭಾರತದ ಗಡಿ ಪ್ರವೇಶಿಸಲು ಯತ್ನಿಸಿದ ಪಾಕ್​ನ ಎಫ್​-16 ಫೈಟರ್ ಜೆಟ್ ಹೊಡೆದುರುಳಿಸಿ ಸಾಹಸ ಮೆರೆದಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ.

ಸುಮಾರು ಆರು ತಿಂಗಳ ಬಿಡುವಿನ ಬಳಿಕ ಅಭಿನಂದನ್ ಕೆಲಸಕ್ಕೆ ಹಾಜರಾಗಿದ್ದಾರೆ. ಪಾಕ್ ವಿಮಾನವನ್ನು ಹೊಡೆದುರುಳಿಸುವ ವೇಳೆ ಅಚಾನಕ್ಕಾಗಿ ಪಾಕ್ ಗಡಿ ಪ್ರವೇಶಿಸಿದ್ದ ಅಭಿನಂದನ್ ಅಲ್ಲಿ ಬಂಧಿಯಾಗಿದ್ದರು. ಭಾರತದ ರಾಜತಾಂತ್ರಿಕ ಒತ್ತಡಕ್ಕೆ ಮಣಿದು ಪಾಕ್ ಸರ್ಕಾರ ಮೂರು ದಿನದಲ್ಲಿ ಅಭಿನಂದನ್​ರನ್ನು ಹಸ್ತಾಂತರ ಮಾಡಿತ್ತು.

ಅಭಿನಂದನ್​ ಬಂಧಿಸಿದ ಪಾಕ್​​ ಯೋಧನನ್ನು ಹೊಡೆದುರುಳಿಸಿದ ಭಾರತೀಯ ಸೇನೆ!

ಭಾರತಕ್ಕೆ ಮರಳಿದ್ದ ಅಭಿನಂದನ್​ರನ್ನು ವಿವಿಧ ಹಂತದಲ್ಲಿ ವಿಚಾರಣೆ ಮಾಡಲಾಗಿತ್ತು. ಇದಾದ ಬಳಿಕ ವಾಯುಸೇನೆ ಕೆಲ ತಿಂಗಳು ರಜೆ ನೀಡಿತ್ತು. ಸದ್ಯ ಇವೆಲ್ಲವನ್ನು ಮುಗಿಸಿ ಅಭಿನಂದನ್​ ಕೆಲಸಕ್ಕೆ ಹಾಜರಾಗಿದ್ದಾರೆ.

ಅಭಿನಂದನ್​ ಮತ್ತೆ ಕೆಲಸಕ್ಕೆ ಹಾಜರಾಗಿರುವ ಬಗ್ಗೆ ಸೇನೆಯ ಉನ್ನತ ಮೂಲಗಳು ಮಾಹಿತಿ ನೀಡಿದ್ದು, ರಾಜಸ್ಥಾನದಲ್ಲಿರುವ ವಾಯುಸೇನಾ ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.

ಪಾಕ್​ ಮೆಟ್ಟಿ ನಿಂತ ವೀರ ಸೇನಾನಿ ಅಭಿನಂದನ್​​​ಗೆ ಒಲಿಯಿತು ವೀರ ಚಕ್ರ..!

ಆಗಸ್ಟ್ 15ರಂದು ಅಭಿನಂದನ್​ ಶೌರ್ಯವನ್ನು ಪರಿಗಣಿಸಿ ಭಾರತ ಸರ್ಕಾರ ವೀರ ಚಕ್ರ ನೀಡಿ ಗೌರವಿಸಿತ್ತು.

Intro:Body:

ಪಾಕಿಸ್ತಾನಕ್ಕೆ ತಕ್ಕ ಪಾಠ ನೀಡಿದ್ದ ಅಭಿನಂದನ್ ಮತ್ತೆ ಡ್ಯೂಟಿಗೆ ಹಾಜರ್..!

ನವದೆಹಲಿ: ಫೆಬ್ರವರಿ ತಿಂಗಳಲ್ಲಿ ಭಾರತ ಹಾಗೂ ಪಾಕ್ ಗಡಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದ ವೇಳೆ ಭಾರತದ ಗಡಿ ಪ್ರವೇಶಿಸಲು ಯತ್ನಿಸಿದ ಪಾಕ್​ನ ಎಫ್​-16 ಫೈಟರ್ ಜೆಟ್ ಹೊಡೆದುರುಳಿಸಿ ಸಾಹಸ ಮೆರೆದಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ.

ಸುಮಾರು ಆರು ತಿಂಗಳ ಬಿಡುವಿನ ಬಳಿಕ ಅಭಿನಂದನ್ ಕೆಲಸಕ್ಕೆ ಹಾಜರಾಗಿದ್ದಾರೆ. ಪಾಕ್ ವಿಮಾನವನ್ನು ಹೊಡೆದುರುಳಿಸುವ ವೇಳೆ ಅಚಾನಕ್ಕಾಗಿ ಪಾಕ್ ಗಡಿ ಪ್ರವೇಶಿಸಿದ್ದ ಅಭಿನಂದನ್ ಅಲ್ಲಿ ಬಂಧಿಯಾಗಿದ್ದರು. ಭಾರತದ ರಾಜತಾಂತ್ರಿಕ ಒತ್ತಡಕ್ಕೆ ಮಣಿದು ಪಾಕ್ ಸರ್ಕಾರ ಮೂರು ದಿನದಲ್ಲಿ ಅಭಿನಂದನ್​ರನ್ನು ಹಸ್ತಾಂತರ ಮಾಡಿತ್ತು.

ಭಾರತಕ್ಕೆ ಮರಳಿದ್ದ ಅಭಿನಂದನ್​ರನ್ನು ವಿವಿಧ ಹಂತದಲ್ಲಿ ವಿಚಾರಣೆ ಮಾಡಲಾಗಿತ್ತು. ಇದಾದ ಬಳಿಕ ವಾಯುಸೇನೆ ಕೆಲ ತಿಂಗಳು ರಜೆ ನೀಡಿತ್ತು. ಸದ್ಯ ಇವೆಲ್ಲವನ್ನು ಮುಗಿಸಿ ಅಭಿನಂದನ್​ ಕೆಲಸಕ್ಕೆ ಹಾಜರಾಗಿದ್ದಾರೆ.

ಅಭಿನಂದನ್​ ಮತ್ತೆ ಕೆಲಸಕ್ಕೆ ಹಾಜರಾಗಿರುವ ಬಗ್ಗೆ ಸೇನೆಯ ಉನ್ನತ ಮೂಲಗಳು ಮಾಹಿತಿ ನೀಡಿದ್ದು, ರಾಜಸ್ಥಾನದಲ್ಲಿರುವ ವಾಯುಸೇನಾ ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.

ಆಗಸ್ಟ್ 15ರಂದು ಅಭಿನಂದನ್​ ಶೌರ್ಯವನ್ನು ಪರಿಗಣಿಸಿ ಭಾರತ ಸರ್ಕಾರ ವೀರ ಚಕ್ರ ನೀಡಿ ಗೌರವಿಸಿತ್ತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.