ETV Bharat / bharat

ಪತ್ನಿಯ ವಿವಾಹೇತರ ಸಂಬಂಧದ ವ್ಯಾಮೋಹ: ಗಂಡನ ತಲೆಗೆ ಫಿಕ್ಸ್​ ಮಾಡಿದ್ಲು 10 ಲಕ್ಷ ಸುಪಾರಿ... ಮುಂದೆ?

author img

By

Published : Nov 28, 2020, 8:29 PM IST

Updated : Nov 28, 2020, 8:57 PM IST

ಪತ್ನಿಯೊಬ್ಬಳು ಸುಪಾರಿ ಕಿಲ್ಲರ್​ಗೆ 10 ಲಕ್ಷ ನೀಡಿ ತನ್ನ ಗಂಡನನ್ನು ಕೊಲೆ ಮಾಡಿಸಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.

Wife kills husband, Wife kills husband with cyanide, Wife kills husband with cyanide in Guntur, Guntur crime news, Guntur news, ಪತಿಯನ್ನು ಕೊಂದ ಪತ್ನಿ, ಗುಂಟೂರಿನಲ್ಲಿ ಪತಿಯನ್ನು ಕೊಂದ ಪತ್ನಿ, ಗುಂಟೂರಿನಲ್ಲಿ ಸೈನೈಡ್​ನಿಂದ ಪತಿಯನ್ನು ಕೊಂದ ಪತ್ನಿ, ಗುಂಟೂರು ಅಪರಾಧ ಸುದ್ದಿ, ಗುಂಟೂರು ಸುದ್ದಿ,
ಗಂಡನ ತಲೆಗೆ ಫಿಕ್ಸ್​ ಮಾಡಿದ್ಲು 10 ಲಕ್ಷ

ಗುಂಟೂರು: ವಿವಾಹೇತರ ಸಂಬಂಧದ ವ್ಯಾಮೋಹದಲ್ಲಿದ್ದ ಪತ್ನಿಯೊಬ್ಬಳು ಸುಪಾರಿ ಕಿಲ್ಲರ್​ಗೆ 10 ಲಕ್ಷ ನೀಡಿ ತನ್ನ ಗಂಡನನ್ನೇ ಕೊಲೆ ಮಾಡಿಸಿರುವ ಘಟನೆ ಪೆದಕೂರಪಾಡು ತಾಲೂಕಿನ 75 ತಾಳ್ಳೂರು ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಬ್ರಹ್ಮಯ್ಯ ಹೋಟೆಲ್‌ ನಡೆಸುತ್ತಲೇ ಜೀವನ ಸಾಗಿಸುತ್ತಿದ್ದಾರೆ. ಈ ತಿಂಗಳ 4 ರಂದು ಬ್ರಹ್ಮಯ್ಯ ಹೊರಗೆ ಹೋದ ಸಮಯದಲ್ಲಿ ಅಪರಿಚಿತರಿಬ್ಬರು ಆತನನ್ನು ತಡೆದು ರಾಸಾಯನಿಕ ವಸ್ತುವನ್ನು ಮುಖಕ್ಕೆ ಎರಚಿ ಪರಾರಿಯಾಗಿದ್ದರು. ಕೂಡಲೇ ಹತ್ತಿರದ ತನ್ನ ಸಂಬಂಧಿಕರ ಮನೆಗೆ ಹೋಗಿ ನಡೆದ ಘಟನೆ ಬಗ್ಗೆ ಹೇಳಿದರು. ಬಳಿಕ ಬ್ರಹ್ಮಯ್ಯನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲೇ ಮೃತಪಟ್ಟಿದ್ದರು. ಈ ಘಟನೆ ಬಗ್ಗೆ ಬ್ರಹ್ಮಯ್ಯ ದೊಡ್ಡ ಮಗ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ: ಫೋಟೋ ಶೂಟ್​​ನಲ್ಲಿ ಮಿಂಚುತ್ತಿದ್ದಾಳೆ 'ಗಟ್ಟಿಮೇಳ'ದ 'ಅಂಜಲಿ'

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರ​ ತಂಡ ಸ್ಥಳ ಪರಿಶೀಲಿಸಿದ್ರೂ ಯಾವುದೇ ಪ್ರಯೋಜನೆವಾಗಿರಲಿಲ್ಲ. ತನಿಖೆ ಮುಂದುವರಿಸಿದ ಪೊಲೀಸರು ಬ್ರಹ್ಮಯ್ಯ ಪತ್ನಿ ಸಾಯಿಕುಮಾರಿ ಮೇಲೆ ನಿಗಾ ಇಟ್ಟಿದ್ದರು. ಆಕೆ ಫೋನ್​ ಕಾಲ್​ ಚಲನವಲನಗಳ ಮೇಲೆ ಗಮನವಿಟ್ಟ ಪೊಲೀಸರಿಗೆ ಅಸಲಿ ಸಂಗತಿ ಗೊತ್ತಾಗಿದೆ.

ವಿವಾಹೇತರ ಸಂಬಂಧ...

ಸಾಯಿಕುಮಾರಿ ಮತ್ತು ಅಶೋಕ್​ ರೆಡ್ಡಿ ಮಧ್ಯೆ ವಿವಾಹೇತರ ಸಂಬಂಧವಿತ್ತು. ಈ ವಿಷಯ ಬ್ರಹ್ಮಯ್ಯಗೆ ತಿಳಿಯುತ್ತೆ ಎಂಬ ಭಯ ಇಬ್ಬರಿಗೂ ಕಾಡುತ್ತಿತ್ತು. ಹೀಗಾಗಿ ಬ್ರಹ್ಮಯ್ಯನ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಪತಿ ಬ್ರಹ್ಮಯ್ಯನನ್ನು ಕೊಲೆ ಮಾಡಲು ಪತ್ನಿ ಸಾಯಿಕುಮಾರಿ ಕೃಷ್ಣ ಜಿಲ್ಲೆಯ ಮಚಿಲಿಪಟ್ನಂನ ಪವನ್ ಕುಮಾರ್ ಮತ್ತು ಶೇಖ್ ಷರೀಫ್​ಗೆ 10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದಳು. ಆರೋಪಿಗಳು ಚಿನ್ನದ ಆಭರಣದ ಹೊಳಪಿಗಾಗಿ ಬಳಸುವ ಸೈನೈಡ್​ ಅನ್ನು ಬ್ರಹ್ಮಯ್ಯ ಮುಖಕ್ಕೆ ಪರಾರಿಯಾಗಿದ್ದರು. ಬಳಿಕ ಬ್ರಹ್ಮಯ್ಯ ತನ್ನ ಸಂಬಂಧಿ ಮನೆಗೆ ಹೋಗಿ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಮೃತಪಟ್ಟಿದ್ದನು.

ಇದನ್ನೂ ಓದಿ: ಜಾಲತಾಣದ ಮೂಲಕ ಪರಿಚಯ, ಮದುವೆಯಾಗುವುದಾಗಿ ನಂಬಿಸಿ ಲಕ್ಷ-ಲಕ್ಷ ಪೀಕಿದ ವಿದೇಶಿ ವಂಚಕರು

ಇದಾದ ಬಳಿಕ ಸಾಯಿಕುಮಾರಿ ಹಲವಾರು ಬಾರಿ ಆರೋಪಿಗಳಿಗೆ ಫೋನ್​ ಮಾಡಿದ್ದಳು. ಫೋನ್​ ಕರೆಗಳನ್ನು ಬೆನ್ನತ್ತಿದ್ದ ಪೊಲೀಸರು ಆರೋಪಿ ಪವನ್​ ಮತ್ತು ಶೇಖ್​ನನ್ನು ಮೊದಲು ಬಂಧಿಸಿ ವಿಚಾರಣೆ ಕೈಗೊಂಡಿದ್ದರು. ತಮ್ಮದೇ ಸ್ಟೈಲ್​ನಲ್ಲಿ ವಿಚಾರಿಸಿದ ಪೊಲೀಸರಿಗೆ ಆರೋಪಿಗಳಿಂದ ಸತ್ಯ ಬಯಲಿಗೆ ಬಂತು. ಕೂಡಲೇ ಅಶೋಕ್​ ರೆಡ್ಡಿ ಮತ್ತು ಸಾಯಿಕುಮಾರಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದರು.

ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Nov 28, 2020, 8:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.