ETV Bharat / bharat

ಜಾತಿಯತೆ ಕಸದ ಬುಟ್ಟಿಗೆ ಎಸೆಯುವಂತೆ ಕರೆ ಕೊಟ್ಟದ್ದು ಸಾವರ್ಕರ್: ವೆಂಕಯ್ಯನಾಯ್ಡು

author img

By

Published : Nov 16, 2019, 5:43 AM IST

'ಸಾವರ್ಕರ್: ಎಕೋಸ್ ಫ್ರಾಮ್ ಎ ಫಾರ್ಗಟನ್ ಪಾಸ್ಟ್' ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವೀರ್ ಸಾವರ್ಕರ್ ಅವರ ವ್ಯಕ್ತಿತ್ವದ ಹಲವು ಅಂಶಗಳ ಬಗ್ಗೆ ಉಪರಾಷ್ಟ್ರಪತಿ ಮಾತನಾಡಿದರು, ಭಾರತದಲ್ಲಿ ಅಸ್ಪೃಶ್ಯತೆಯ ವಿರುದ್ಧ ವೀರ ಸಾವರ್ಕರ್​ ತುಂಬಾ ಪ್ರಭಾವಶಾಲಿವಾದ ಸಮಾಜ ಸುಧಾರಣಾ ಆಂದೋಲನಗಳನ್ನು ಆರಂಭಿಸಿದ್ದರು ಎಂದರು.

ವೆಂಕಯ್ಯ ನಾಯ್ಡು

ನವದೆಹಲಿ: ಸಾವರ್ಕರ್ ಅವರದ್ದು ಬಹುಮುಖ ವ್ಯಕ್ತಿತ್ವ ಹೊಂದಿದ್ದ ಸಮಾಜ ಸುಧಾರಕ, ಸ್ವಾತಂತ್ರ್ಯ ಹೋರಾಟಗಾರ, ರಾಜಕೀಯ ನಾಯಕ, ಇತಿಹಾಸ ತಜ್ಞ, ಬರಹಗಾರ ಮತ್ತು ತತ್ವಶಾಸ್ತ್ರಜ್ಞನಾಗಿದ್ದ ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಬಣ್ಣಿಸಿದ್ದಾರೆ.

'ಸಾವರ್ಕರ್: ಎಕೋಸ್ ಫ್ರಾಮ್ ಎ ಫಾರ್ಗಟನ್ ಪಾಸ್ಟ್' ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವೀರ್ ಸಾವರ್ಕರ್ ಅವರ ವ್ಯಕ್ತಿತ್ವದ ಹಲವು ಅಂಶಗಳ ಬಗ್ಗೆ ಉಪರಾಷ್ಟ್ರಪತಿ ಮಾತನಾಡಿದರು, ಭಾರತದಲ್ಲಿ ಅಸ್ಪೃಶ್ಯತೆಯ ವಿರುದ್ಧ ವೀರ ಸಾವರ್ಕರ್​ ತುಂಬಾ ಪ್ರಭಾವಶಾಲಿವಾದ ಸಮಾಜ ಸುಧಾರಣಾ ಆಂದೋಲನಗಳನ್ನು ಆರಂಭಿಸಿದ್ದರು ಎಂದರು.

ಭಾರತದಲ್ಲಿ ಅಸ್ಪೃಶ್ಯತೆಯ ವಿರುದ್ಧ ಅತ್ಯಂತ ಶಕ್ತಿಶಾಲಿಯಾದ ಸಾಮಾಜಿಕ ಸುಧಾರಣಾ ಆಂದೋಲನ ಆರಂಭಿಸಿದ್ದರು ಸಾವರ್ಕರ್​ ಎಂಬುದು ದೇಶದ ಕೆಲವೇ ಜನರಿಗೆ ಮಾತ್ರ ತಿಳಿದಿದೆ. ದಲಿತರು ಸೇರಿದಂತೆ ಎಲ್ಲ ಹಿಂದೂಗಳ ದೇಗುಲ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲು ರಾವ್ನಗಿರಿ ಜಿಲ್ಲೆಯಲ್ಲಿ ಸಾವರ್ಕರ್ ಅವರು ಪತಿತ್ ಪವನ್ ಮಂದಿರ ನಿರ್ಮಿಸಿದ್ದರು ಎಂದು ತಿಳಿಸಿದರು.

ಜಾತಿರಹಿತ ಭಾರತವನ್ನು ಕಲ್ಪಿಸಿದ ಮೊದಲ ವ್ಯಕ್ತಿ ಸಾವರ್ಕರ್​. 1857ರ ದಂಗೆಯನ್ನು ಸ್ವಾತಂತ್ರ್ಯ ಹೋರಾಟದ ಮೊದಲ ಯುದ್ಧ ಎಂದು ಹೆಸರಿಸಿ, ಭಾರತೀಯ ಮೌಲ್ಯಗಳ ಪ್ರತಿಬಿಂಬಿಸುವ ಸರಿಯಾದ ಇತಿಹಾಸದ ಪ್ರಜ್ಞೆ ಆಗಿತ್ತು ಎಂಬ ವ್ಯಾಖ್ಯಾನ ನೀಡಿದ್ದರು. ಸಮಾಜದ ಏಳು ಸಂಕೋಲೆಗಳಲ್ಲಿ ಅತ್ಯಂತ ಕಠಿಣವಾದ ಜಾತಿ ವ್ಯವಸ್ಥೆಯನ್ನು ಇತಿಹಾಸದ ಕಸದ ಬುಟ್ಟಿಗೆ ಎಸೆಯಲು ಅರ್ಹವಾಗಿದೆ ಎಂದಿದ್ದನ್ನು ನಾಯ್ಡು ಪುನರ್​ ಉಚ್ಚರಿಸಿದರು.

ಒಂದು ನಿರ್ದಿಷ್ಟ ಜಾತಿಗೆ ಮಾತ್ರವಲ್ಲದೆ ವೈದಿಕ ಸಾಹಿತ್ಯ ಎಲ್ಲರಿಗೂ ಸಿಗುವಂತಾಗಬೇಕು. ಇಡೀ ಮಾನವ ಜನಾಂಗಕ್ಕೆ ವೈದಿಕ ಸಾಹಿತ್ಯವು ನಾಗರಿಕ ಜ್ಞಾನ ಮತ್ತು ಮಾನವಕುಲಕ್ಕೆ ವಿಶಿಷ್ಟವಾದ ಕೊಡುಗೆ ಎಂದು ಅವರು ಭಾವಿಸಿದ್ದರು ಎಂದಿದ್ದಾರೆ.

ಜಾತಿ ಆಧಾರಿತ ವೃತ್ತಿಪರ ಬಿಗಿ ಹಿಡಿತದಿಂದ ದೂರವಿರುವುದು ಉತ್ತಮವಾದದ್ದು. ಯೋಗ್ಯತೆ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಪ್ರೋತ್ಸಾಹಿಸಬೇಕು ಎಂದು ಸಾವರ್ಕರ್​ ಪ್ರತಿಪಾದಿಸಿದ್ದರು ಎಂದು ನಾಯ್ಡು ಹೇಳಿದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.