ETV Bharat / bharat

ವಂದೇ ಭಾರತ್​ ಮಿಷನ್​ನಡಿ ವಿವಿದೆಡೆಯಿಂದ ಹೈದರಾಬಾದ್​ಗೆ ಆಗಮಿಸಿದ ವಿಮಾನಗಳು

author img

By

Published : May 22, 2020, 2:50 PM IST

ವಂದೇ ಭಾರತ್​ ಮಿಷನ್​ನಡಿ ಗುರುವಾರ ಹೈದರಾಬಾದ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಿದ್ದಾ, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಸಿಂಗಾಪುರದಿಂದ ವಿಮಾನಗಳು ಆಗಮಿಸಿದವು.

Many flights landed at Hyderabad International Airport
ವಂದೇ ಭಾರತ್​ ಮಿಷನ್​ನಡಿ

ಹೈದರಾಬಾದ್ (ತೆಲಂಗಾಣ) : ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಂದೇ ಭಾರತ್ ಮಿಷನ್ ಅಡಿಯಲ್ಲಿ ಗುರುವಾರ ವಿವಿಧ ಕಡೆಗಳಿಂದ ವಿಮಾನಗಳು ಆಗಮಿಸಿದೆ.

ಜಿದ್ದಾದಿಂದ ವಿಜಯವಾಡ ಮೂಲಕ ಬಂದ ಮೊದಲ ಏರ್ ಇಂಡಿಯಾ ವಿಮಾನ ಎಐ 1914 ಮಧ್ಯಾಹ್ನ 12.24 ರ ಸುಮಾರಿಗೆ ತಲುಪಿದ್ದು, ಈ ವಿಮಾನದಲ್ಲಿ ಸುಮಾರು 68 ಪ್ರಯಾಣಿಕರು ಆಗಮಿಸಿದ್ದಾರೆ.

ಎರಡನೇ ಏರ್ ಇಂಡಿಯಾ ಎಐ 174 ವಿಮಾನ ಸ್ಯಾನ್ ಫ್ರಾನ್ಸಿಸ್ಕೋ (ಯುಎಸ್) ನಿಂದ ಬೆಂಗಳೂರು ಮೂಲಕ ಹೈದರಾಬಾದ್​ಗೆ ಮಧ್ಯಾಹ್ನ 12.16 ರಕ್ಕೆ ಆಗಮಿಸಿದ್ದು, ಈ ವಿಮಾನದಲ್ಲಿ ಸುಮಾರಿಗೆ 81 ಪ್ರಯಾಣಿಕರು ಬಂದಿಳಿದಿದ್ದಾರೆ.

ಮೂರನೇ ವಿಮಾನ ಏರ್ ಇಂಡಿಯಾ ಎಐ 1347 ಸಿಂಗಾಪುರದಿಂದ ಹೈದರಾಬಾದ್‌ಗೆ ರಾತ್ರಿ 8.35 ರ ಸುಮಾರಿಗೆ ಆಗಮಿಸಿದೆ, ಈ ವಿಮಾನದಲ್ಲಿ 149 ಪ್ರಯಾಣಿಕರು ತಾಯ್ನಾಡು ತಲುಪಿದ್ದಾರೆ.

ವಿಮಾನಗಳು ಆಗಮಿಸುತ್ತಿದ್ದಂತೆ ಎಲ್ಲಾ ಪ್ರಯಾಣಿಕರನ್ನು ಥರ್ಮಲ್ ಸ್ಕೀನಿಂಗ್​ಗೆ ಒಳಪಡಿಸಿ ಕ್ವಾರಂಟೈನ್ ಕೇಂದ್ರಗಳಿಗೆ ಕರೆದೊಯ್ಯಲಾಯಿತು. ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಗುರುವಾರದವರೆಗೆ ವಂದೇ ಭಾರತ್ ಮಿಷನ್ ಅಡಿಯಲ್ಲಿ 20 ಸಾವಿರ ಭಾರತೀಯರನ್ನು ಮರಳಿ ಕರೆತರಲಾಗಿದೆ ಮತ್ತು ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.