ETV Bharat / bharat

ವೈದ್ಯಕೀಯ ಪರೀಕ್ಷೆಗೆ ನಿರಾಕರಿಸಿದ ರೇಪ್​ ಆರೋಪ ಮಾಡಿದಾಕೆ: ಬಿಜೆಪಿ ಶಾಸಕನಿಗೆ ಕ್ಲೀನ್​ ಚಿಟ್​!

author img

By

Published : Feb 22, 2020, 5:38 PM IST

Updated : Feb 22, 2020, 5:46 PM IST

2017ರಲ್ಲಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಬಿಜೆಪಿ ಶಾಸಕನ ವಿರುದ್ಧ ಗಂಭೀರ ಆರೋಪ ಮಾಡಿದ್ದ ಮಹಿಳೆ ವೈದ್ಯಕೀಯ ತಪಾಸಣೆಗೊಳಗಾಲು ನಿರಾಕರಿಸಿದ್ದಾಳೆ.

UP BJP MLA
UP BJP MLA

ವಾರಣಾಸಿ(ಉತ್ತರಪ್ರದೇಶ): ಮೂರು ವರ್ಷಗಳ ಹಿಂದೆ(2017)ರಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ್ದಾರೆಂಬ ಆರೋಪ ಹೊತ್ತಿದ್ದ ಬಿಜೆಪಿ ಶಾಸಕ ರವೀಂದ್ರ ನಾಥ್​ ತ್ರಿಪಾಠಿಗೆ ಇದೀಗ ಪೊಲೀಸರು ಕ್ಲೀನ್​ ಚಿಟ್​ ನೀಡಿದ್ದಾರೆ.

ಉತ್ತರಪ್ರದೇಶದ ಬದೋಯ್​​​ ಕ್ಷೇತ್ರದ ಬಿಜೆಪಿ ಶಾಸಕ ರವೀಂದ್ರ ನಾಥ್​ ತ್ರಿಪಾಠಿ ಹಾಗೂ ಆತನ ಮಗ, ಸೋದರಳಿಯ ಸೇರಿ ಆರು ಮಂದಿ ಈ ಕೃತ್ಯವೆಸಗಿದ್ದಾರೆ ಎಂದು ಮಹಿಳೆ ಕಳೆದ ಮೂರು ದಿನಗಳ ಹಿಂದೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಇದರ ವಿಚಾರವಣೆ ನಡೆಸಿದ್ದ ಪೊಲೀಸರು ಶಾಸಕರಿಗೆ ಕ್ಲೀನ್​ ಚಿಟ್​ ನೀಡಿದ್ದು, ಸೋದರಳಿಯನನ್ನು ಅರೆಸ್ಟ್​ ಮಾಡಿದ್ದಾರೆ.

ವಿಚಾರಣೆ ನಡೆಸಿದಾಗ ಅತ್ಯಾಚಾರವೆಸಗಿರುವುದಕ್ಕೆ ಸಂಬಂಧಿಸಿದಂತೆ ಶಾಸಕ ಹಾಗೂ ಇತರ ಐವರ ವಿರುದ್ಧ ಯಾವುದೇ ದಾಖಲೆಗಳು ಸಿಗದ ಕಾರಣ ಅವರನ್ನ ಕೇಸ್​ನಿಂದ ಕೈಬಿಡಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿರುವ ಶಾಸಕನ ಸೋದರಳಿಯನನ್ನು ಬಂಧನ ಮಾಡಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇನ್ನು ಅತ್ಯಾಚಾರ ಆರೋಪ ಮಾಡಿದ್ದ ಮಹಿಳೆ ವೈದ್ಯಕೀಯ ತಪಾಸಣೆಗೊಳಗಾಗಲು ನಿರಾಕರಿಸಿದ್ದಳು ಎಂದು ಪೊಲೀಸ್​ ವರಿಷ್ಠಾಧಿಕಾರಿ ರಾಮ್​ ಬಂದನ್​ ಸಿಂಗ್​ ಹೇಳಿದ್ದಾರೆ.

2017ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ವೇಳೆ ತನ್ನನ್ನು ರೂಂನಲ್ಲಿ ಕೂಡಿ ಹಾಕಿ ಶಾಸಕ, ಆತನ ಮಗ ಹಾಗೂ ಇತರ ಕೆಲವರು ತಿಂಗಳುಗಹ ಕಾಲ ಅತ್ಯಾಚಾರವೆಸಗಿದ್ದು, ಈ ವೇಳೆ ತನಗೆ ಗರ್ಭಪಾತ ಸಹ ಮಾಡಿಸಿದ್ದರು ಎಂದು ಪೊಲೀಸರ ಎದುರು ಮಹಿಳೆ ದೂರು ನೀಡಿದ್ದಳು.

Last Updated : Feb 22, 2020, 5:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.