ETV Bharat / bharat

ಕೋವಿಡ್​ ಟೆಸ್ಟ್​​​ಗೆ ಒಪ್ಪದ ತಬ್ಲಿಘಿ​ ಜಮಾತ್​ ಸದಸ್ಯರಿಂದ ಪರೀಕ್ಷಿಸಲು ಬಂದವರ ಮೇಲೆ ಕೊಲೆ ಯತ್ನ

author img

By

Published : Apr 8, 2020, 2:25 PM IST

Updated : Apr 8, 2020, 2:34 PM IST

ತಬ್ಲಿಘಿ ಜಮಾತ್​ನಲ್ಲಿ ಭಾಗಿಯಾಗಿದ್ದ ಈ ಇಬ್ಬರು ರಾಜಸ್ಥಾನದ ಅಲ್ವಾರ್​ನಿಂದ ಹಿಂತಿರುಗಿದ್ದರು. ಈ ಹಿನ್ನೆಲೆ ಕೊರೊನಾ ಸೋಂಕು ಪರೀಕ್ಷೆ ಮಾಡಲು ಹೋದಾಗ ಉದ್ದೇಶಪೂರ್ವಕವಾಗಿ ನಿರಾಕರಿಸಿದ್ದಾರೆ ಎಂದು ಡಿಜಿಪಿ ತಿಳಿಸಿದ್ದಾರೆ.

ತಬ್ಲಿಘಿ ಜಮಾತ್​ನಿಂದ ಬಂದ ಇಬ್ಬರ ಮೇಲೆ ಕೊಲೆಯತ್ನ ಪ್ರಕರಣ ದಾಖಲು
ತಬ್ಲಿಘಿ ಜಮಾತ್​ನಿಂದ ಬಂದ ಇಬ್ಬರ ಮೇಲೆ ಕೊಲೆಯತ್ನ ಪ್ರಕರಣ ದಾಖಲು

ಹರಿದ್ವಾರ (ಉತ್ತರಾಖಂಡ): ದೆಹಲಿಯ ತಬ್ಲಿಘಿ ಜಮಾತ್​ನಲ್ಲಿ ಭಾಗಿಯಾಗಿದ್ದ ಸದಸ್ಯರ ಪರೀಕ್ಷೆಗೆ ತೆರಳಿದವರ ಹತ್ಯಗೆ ಯತ್ನ ನಡೆದಿದ್ದು, ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸೋಂಕು ಶಂಕಿತರ ಪರೀಕ್ಷೆಗೆಂದು ತೆರಳಿದವರ ಕೊಲೆ ಯತ್ನ ನಡೆದ ಘಟನೆ ಹರಿದ್ವಾರದಲ್ಲಿ ನಡೆದಿದೆ. ದೆಹಲಿಯಲ್ಲಿ ಇತ್ತೀಚೆಗೆ ನಡೆದಿದ್ದ ತಬ್ಲಿಘ್ ಜಮಾತ್ ಸಭೆಯಲ್ಲಿ ಹರಿದ್ವಾರದ ರೋರ್ಖಿಯದಿಂದ ಇಬ್ಬರು ಭಾಗವಹಿಸಿದ್ದರು. ರಾಜಸ್ಥಾನದ ಅಲ್ವಾರ್​ನಿಂದ ಬಂದಿದ್ದ ಇವರನ್ನು ಕೋವಿಡ್​ 19 ಪರೀಕ್ಷೆಗೆ ಒಳಪಡಿಸುವ ವೇಳೆ, ತಪಾಸಣೆಗೆ ಸಹಕರಿಸಿದೆ ಹತ್ಯೆಗೆ ಪ್ರಯತ್ನಿಸಿದ್ದರು. ಹೀಗಾಗಿ, ಅವರ ವಿರುದ್ಧ ಕೊಲೆ ಯತ್ನದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ.

ಉದ್ದೇಶಪೂರ್ವಕವಾಗಿಯೇ ಅವರು ಕೋವಿಡ್ ಪರೀಕ್ಷೆಯನ್ನು ನಿರಾಕರಿಸಿದ್ದಾರೆ. ಈ ಇಬ್ಬರ ಸ್ನೇಹಿತನನ್ನು ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್​ ಇರುವುದು ಕಂಡುಬಂದಿತ್ತು. ಈತನ ಸಂಪರ್ಕದಲ್ಲಿ ಇದ್ದ ಇವರನ್ನು ಪರೀಕ್ಷೆಗೆ ಒಳಪಡಿಸಲು ಯತ್ನಿಸಲಾಯಿತು. ಅಧಿಕಾರಿಗಳು ರೋಗದ ಬಗ್ಗೆ ತಿಳಿ ಹೇಳಿ ಎಚ್ಚರಿಕೆ ಕೊಟ್ಟು ಹಲವು ಬಾರಿ ಮನವಿ ಮಾಡಿದ್ದರೂ ಅವರು ಪರಿಗಣನೆಗೆ ತೆಗೆದುಕೊಳ್ಳದೆ ನಿರಾಕರಿಸಿದರು ಎಂದರು.

ಎಲೆಕ್ಟ್ರಾನಿಕ್ ಕಣ್ಗಾವಲು ಸಹಾಯದಿಂದ ಪತ್ತೆಹಚ್ಚಲಾಗಿದ್ದು, ಇವರ ವಿರುದ್ಧ ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಡಿಜಿಪಿ ಹೇಳಿದ್ದಾರೆ.

Last Updated : Apr 8, 2020, 2:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.